ಸ್ಟಿಂಗ್ ವೀಡಿಯೊ ನಿಜವಾಗಿದ್ದರೆ ನಾಲ್ಕು ದಿನದೊಳಗೆ ನನ್ನನ್ನು ಬಂಧಿಸಿ: ಸಿಸೋಡಿಯಾ ಸವಾಲು

 ಮದ್ಯದ ಹಗರಣಕ್ಕೆ ಸಂಬಂಧಿಸಿದ ಸ್ಟಿಂಗ್ ವೀಡಿಯೊವನ್ನು ಹಂಚಿಕೊಂಡ ನಂತರ ಬಿಜೆಪಿಗೆ ಬಹಿರಂಗ ಸವಾಲೆಸೆದಿರುವ  ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಟಿಂಗ್ ವಿಡಿಯೋ ನಿಜವಾಗಿದ್ದರೆ ಬಂಧಿಸಲು ತಾನು ಸಿದ್ಧ ಎಂದು ಹೇಳಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
Updated on: 

ನವದೆಹಲಿ: ಮದ್ಯದ ಹಗರಣಕ್ಕೆ ಸಂಬಂಧಿಸಿದ ಸ್ಟಿಂಗ್ ವೀಡಿಯೊವನ್ನು ಹಂಚಿಕೊಂಡ ನಂತರ ಬಿಜೆಪಿಗೆ ಬಹಿರಂಗ ಸವಾಲೆಸೆದಿರುವ  ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಟಿಂಗ್ ವಿಡಿಯೋ ನಿಜವಾಗಿದ್ದರೆ ಬಂಧಿಸಲು ತಾನು ಸಿದ್ಧ ಎಂದು ಹೇಳಿದ್ದಾರೆ.

ಗುರುವಾರ  ಸ್ಟಿಂಗ್ ವಿಡಿಯೋ ತೋರಿಸಿದ ಬಿಜೆಪಿ ಮುಖಂಡರು, ಮದ್ಯದ ಹಗರಣ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಅಮಿತ್ ಅರೋರಾ, ದೆಹಲಿಯ ಎಎಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಕೆಲವರನ್ನು ಅಬಕಾರಿ ನೀತಿಯಿಂದ ದೂರವಿಟ್ಟು ಕೆಲವು ವ್ಯಕ್ತಿಗಳಿಗೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದಲು ಸಹಾಯ ಮಾಡಿ, ಈಗ ನೀತಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿರುವುದಾಗಿ ತಿಳಿಸಿದರು.

“ಆಮ್ ಆದ್ಮಿ ಪಕ್ಷದ ಹಗರಣ ಮುನ್ನೆಲೆಗೆ ಬಂದಿದೆ. ಈ ಸ್ಟಿಂಗ್ ನಲ್ಲಿ ಆರೋಪಿಯಾಗಿರುವ ಅಮಿತ್ ಅರೋರಾ ಇಡೀ ಸಮೀಕ್ಷೆಯನ್ನು ಬಹಿರಂಗಪಡಿಸಿದ್ದಾರೆ ಎಂದು ಕುಟುಕು ವಿಡಿಯೋವನ್ನು ಪ್ರದರ್ಶಿಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದರು. 

ಈ ಕುರಿತು ಪ್ರತಿಕ್ರಿಯಿಸಿದ ಮನೀಶ್ ಸಿಸೋಡಿಯಾ, ತನಿಖಾ ಸಂಸ್ಥೆಯು ಬಿಜೆಪಿಯ ವಿಸ್ತೃತ ಘಟಕದಂತೆ ವರ್ತಿಸುತ್ತಿರುವುದರಿಂದ ಬಿಜೆಪಿ ಈ ಸ್ಟಿಂಗ್ ವಿಡಿಯೋವನ್ನು ಸಿಬಿಐಗೆ ಸಲ್ಲಿಸಬೇಕು ಎಂದು ಹೇಳಿದರು.

“ಸಿಬಿಐ ನನ್ನ ನಿವಾಸದ ಮೇಲೆ ದಾಳಿ ಮಾಡಿ ನನ್ನ ಲಾಕರ್ ಅನ್ನು ಪರಿಶೀಲಿಸಿದೆ, ಆದರೆ ಅವರಿಗೆ ಏನೂ ಸಿಕ್ಕಿಲ್ಲ, ಸಿಬಿಐ ಇದರ ತನಿಖೆ ನಡೆಸಬೇಕು ಮತ್ತು ಇದು ನಿಜವೆಂದು ಕಂಡುಬಂದರೆ ನಾಲ್ಕು ದಿನಗಳಲ್ಲಿ ನನ್ನನ್ನು ಬಂಧಿಸಬೇಕು, ಸೋಮವಾರದೊಳಗೆ ನನ್ನನ್ನು ಬಂಧಿಸದಿದ್ದರೆ, ನಂತರ ಈ ಸ್ಟಿಂಗ್ ನಕಲಿ ಎಂದು ಒಪ್ಪಿಕೊಂಡು ಕ್ಷಮೆಯಾಚಿಸಬೇಕು ಮತ್ತು ನನ್ನ ವಿರುದ್ಧ ಸಂಚು ರೂಪಿಸಿದೆ ಎಂದು ಪಿಎಂಒ ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com