ಪತ್ನಿಯನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ 8 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ ವ್ಯಕ್ತಿ ಬಂಧನ!

ತನ್ನ ಹೆಂಡತಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ 8 ತಿಂಗಳ ಗರ್ಭಿಣಿಯನ್ನು ಸೋಮವಾರ ಕುಡುಗೋಲಿನಿಂದ 35 ವರ್ಷದ ವ್ಯಕ್ತಿ ಕಾವೂರಿ ಶ್ರೀರಾಮ ಕೃಷ್ಣ ಹತ್ಯೆಗೈದಿದ್ದು, ಆತನನ್ನು ಬುಧವಾರ ಬಂಧಿಸಲಾಗಿದೆ ಎಂದು ಗಚಿಬೌಲಿ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹೈದರಾಬಾದ್: ತನ್ನ ಹೆಂಡತಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ 8 ತಿಂಗಳ ಗರ್ಭಿಣಿಯನ್ನು ಸೋಮವಾರ ಕುಡುಗೋಲಿನಿಂದ 35 ವರ್ಷದ ವ್ಯಕ್ತಿ ಕಾವೂರಿ ಶ್ರೀರಾಮ ಕೃಷ್ಣ ಹತ್ಯೆಗೈದಿದ್ದು, ಆತನನ್ನು ಬುಧವಾರ ಬಂಧಿಸಲಾಗಿದೆ ಎಂದು ಗಚಿಬೌಲಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಸಂತ್ರಸ್ತೆ ವಸಮಶೆಟ್ಟಿ ಶ್ರವಂತಿಗೆ ಸಂಬಂಧಿಯಾಗಿದ್ದ.

ಪೊಲೀಸರ ಪ್ರಕಾರ, ಆರೋಪಿ ಶ್ರೀರಾಮ ಕೃಷ್ಣ 2020 ರಲ್ಲಿ ಲಕ್ಷ್ಮಿ ಪ್ರಸನ್ನ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಈ ವಿವಾಹವನ್ನು ಶ್ರವಂತಿಯ ಪತಿ ರಾಮಕೃಷ್ಣ ಅವರೇ ನಿಶ್ಚಯ ಮಾಡಿದ್ದರು. ಆದರೆ, ಶ್ರೀರಾಮ ಕೃಷ್ಣ ತನ್ನ ಪತ್ನಿ ಲಕ್ಷ್ಮಿಗೆ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿ, ಆಕೆಯನ್ನು ನಿಂದಿಸುತ್ತಿದ್ದ. ಹೀಗಾಗಿ ರಾಮಕೃಷ್ಣ ಬುದ್ಧಿ ಹೇಳಿದರೂ ಅದು ಪ್ರಯೋಜನವಾಗಿಲ್ಲ.

ಕಿರುಕುಳ ಮುಂದುವರಿದ ಕಾರಣ, ಲಕ್ಷ್ಮಿ ಚಂದನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಇದರಿಂದ ಕೋಪಗೊಂಡ ಶ್ರೀರಾಮ ಕೃಷ್ಣ, ತನ್ನ ಹೆಂಡತಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ರಾಮಕೃಷ್ಣ ಮತ್ತು ಅವನ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದನು.

ಸೆಪ್ಟೆಂಬರ್ 6 ರಂದು ಶ್ರೀರಾಮ ಕೃಷ್ಣನು ಕುಡುಗೋಲಿನೊಂದಿಗೆ ಕೊಂಡಾಪುರದಲ್ಲಿದ್ದ ರಾಮಕೃಷ್ಣನ ನಿವಾಸಕ್ಕೆ ತೆರಳಿದ್ದಾನೆ. ಈ ವೇಳೆ ರಾಮಕೃಷ್ಣ ಅವರ ಪತ್ನಿ 8 ತಿಂಗಳ ಗರ್ಭಿಣಿಯಾದ ಶ್ರವಂತಿ ಬಾಗಿಲು ತೆರೆದಾಗ, ಕೋಪಗೊಂಡ ಶ್ರೀರಾಮ ಕೃಷ್ಣ ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಶ್ರವಂತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ.

ರಾಮಕೃಷ್ಣ ಮನೆಗೆ ಬಂದಾಗ ಅಕ್ಕಪಕ್ಕದವರು ಪತ್ನಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವುದನ್ನು ಕಂಡಿದ್ದಾರೆ. ಬಳಿಕ ಶ್ರವಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com