
ನಟ ರಾಜ್ ಕುಮಾರ್ ರಾವ್
ಮುಂಬೈ: ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಅವರ ಪ್ಯಾನ್ ಕಾರ್ಡ್ ಬಳಸಿ ದುಷ್ಕರ್ಮಿಗಳು ಸಾಲ ಪಡೆದಿರುವ ಘಟನೆ ನಡೆದಿದೆ. ಈ ಬಗ್ಗೆ ರಾಜ್ ಕುಮಾರ್ ರಾವ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ದಾಖಲು!
ನಟನ ಪ್ಯಾನ್ ಕಾರ್ಡ್ ಬಳಸಿ ಪಡೆಯಲಾದ ಸಾಲದ ಮೊತ್ತ 2,500 ರೂ. ಎಂದು ತಿಳಿದುಬಂದಿದೆ. ಇದರಿಂದಾಗಿ ನಟನ ಸಿಬಿಲ್ ಸ್ಕೋರ್ ಕಡಿಮೆಯಾಗಿದ್ದು ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಜ್ ಕುಮಾರ್ ಸಿಬಿಲ್ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.
#FraudAlert My pan card has been misused and a small loan of Rs.2500 has been taken on my name. Due to which my cibil score has been affected. @CIBIL_Official please rectify the same and do take precautionary steps against this.
— Rajkummar Rao (@RajkummarRao) April 2, 2022
ಇದನ್ನೂ ಓದಿ: ಶಾರುಖ್ ಖಾನ್ 'ಪಠಾನ್' ಸಿನಿಮಾ ಫಸ್ಟ್ ಲುಕ್ ಬಿಡುಗಡೆ; ನೆಟ್ಟಿಗರು ಫಿದಾ!
ರಾಜ್ ಕುಮಾರ್ ಇತ್ತೀಚಿಗಷ್ಟೆ ಬಹುಕಾಲದ ಗೆಳತಿ ಪತ್ರಲೇಖಾರನ್ನು ವರಿಸಿದ್ದರು. ರಾಜ್ ಕುಮಾರ್ ರಾವ್ ಹಿಟ್, ಮೋನಿಕಾ ಓ ಮೈ ಡಾರ್ಲಿಂಗ್ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ರಷ್ಯಾದಲ್ಲಿ ಬಾಲಿವುಡ್, ಕೊರಿಯನ್ ಸಿನಿಮಾಗಳ ಪ್ರದರ್ಶನ: ಹಾಲಿವುಡ್ ಗೆ ಪುತಿನ್ ಸರ್ಕಾರ ಸೆಡ್ಡು