ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್ ಮೊಮ್ಮಗ ಮನಾಲಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆ!

ವೀರ್ ಸೊರೆನ್(19) ಅವರು ರಾಜ್ಯದಿಂದ ಹೊರಗೆ ಅಧ್ಯಯನ ಮಾಡುತ್ತಿದ್ದು, ಇತ್ತೀಚೆಗೆ ಫೆಬ್ರವರಿ 22 ರಂದು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಿಮ್ಸಾದ ಹೋಟೆಲ್‌ನಲ್ಲಿ ತಂಗಿದ್ದರು.
Former Jharkhand CM Champai Soren's grandson found dead in Manali hotel while vacationing with friends
ವೀರ್ ಸೊರೆನ್
Updated on

ರಾಂಚಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರ ಮೊಮ್ಮಗ ಮತ್ತು ಬಾಬುಲಾಲ್ ಸೊರೆನ್ ಅವರ ಪುತ್ರ ವೀರ್ ಸೊರೆನ್ ಅವರು ಮಂಗಳವಾರ ಮನಾಲಿ ಹೋಟೆಲ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವೀರ್ ಸೊರೆನ್(19) ಅವರು ರಾಜ್ಯದಿಂದ ಹೊರಗೆ ಅಧ್ಯಯನ ಮಾಡುತ್ತಿದ್ದು, ಇತ್ತೀಚೆಗೆ ಫೆಬ್ರವರಿ 22 ರಂದು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಿಮ್ಸಾದ ಹೋಟೆಲ್‌ನಲ್ಲಿ ತಂಗಿದ್ದರು.

ಫೆಬ್ರವರಿ 23 ರಂದು ಅವರು ಹಮ್ತಾ ಪಾಸ್ ಬಳಿಯ ಸೋಲಾಂಗ್ ಕಣಿವೆ ಮತ್ತು ಸೇಥನ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ದಿನ ಸಂಜೆ ಹೋಟೆಲ್‌ಗೆ ಹಿಂತಿರುಗಿದ ನಂತರ, ವೀರ್ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ.

Former Jharkhand CM Champai Soren's grandson found dead in Manali hotel while vacationing with friends
ಚಂಪೈ ಸೊರೆನ್ ನಂತರ ಜೆಎಂಎಂ ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಬಿಜೆಪಿ ಸೇರ್ಪಡೆ

“ಮಂಗಳವಾರ ಮಧ್ಯಾಹ್ನ 12:30 ರ ಸುಮಾರಿಗೆ, ಪ್ರವಾಸದಿಂದ ಹಿಂದಿರುಗಿದ ನಂತರ, ವೀರ್ ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿದೆ. ಅವರ ಸ್ನೇಹಿತರು ಅವರಿಗೆ ಔಷಧಿ ನೀಡಿದ್ದರು. ನಂತರ ಅವರು ವಿಶ್ರಾಂತಿ ಪಡೆಯಲು ನಿದ್ರೆಗೆ ಜಾರಿದರು. ಮಧ್ಯಾಹ್ನ 2:30 ರ ಸುಮಾರಿಗೆ ಕೋಣೆಯಲ್ಲಿ ದೊಡ್ಡ ಶಬ್ದ ಕೇಳಿಸಿತು. ಏನಾಯಿತು ಅಂತ ಅವರ ಸ್ನೇಹಿತರು ಹೋಗಿ ನೋಡಿದಾಗ, ಅವರು ಹಾಸಿಗೆಯಲ್ಲೇ ಮಲಗಿದ್ದರು” ಎಂದು ಮೂಲಗಳು ತಿಳಿಸಿವೆ.

ತಡರಾತ್ರಿ ಹೋಟೆಲ್‌ನಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಾಗ, ಅವರ ಸ್ನೇಹಿತರು ತಕ್ಷಣ ಅವರನ್ನು ಮನಾಲಿಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು.

"ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ, ಅವರ ಬಾಯಿಯಿಂದ ನೊರೆ ಬರುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಯಲ್ಲಿ, ವೈದ್ಯರು ದೀರ್ಘಕಾಲದವರೆಗೆ ಸಿಪಿಆರ್ ಮಾಡಿದರು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಮೃತಪಟ್ಟಿರುವುದಾಗಿ ಹೇಳಿದರು" ಎಂದು ಸೊರೆನ್ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

"ನಮ್ಮ ಪ್ರೀತಿಯ ಮೊಮ್ಮಗ ವೀರ್ ಸೊರೆನ್ ಫೆಬ್ರವರಿ 24, 2026 ರಂದು ನಿಧನರಾದರು ಎಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವಿಧಿಯಾಟ ಅವರು ಬದುಕಲಿಲ್ಲ. ವೀರ್ ಅವರ ನಿಧನವು ನಮ್ಮ ಕುಟುಂಬವನ್ನು ಛಿದ್ರಗೊಳಿಸಿದೆ" ಎಂದು ಸೊರೆನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com