ಅನೈತಿಕ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ 16 ವರ್ಷದ ಬಾಲಕನನ್ನು ಕೊಂದ ಮಹಿಳೆ, ಆಕೆಯ ಪ್ರಿಯಕರ
ತಮ್ಮ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ ಹದಿಹರೆಯದ ಮಗನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ಆರೋಪದ ಮೇಲೆ ವಿಧವೆ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Published: 10th August 2022 12:07 PM | Last Updated: 10th August 2022 01:28 PM | A+A A-

ಸಾಂದರ್ಭಿಕ ಚಿತ್ರ
ಮುಜಾಫರ್‌ನಗರ: ತಮ್ಮ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ ಹದಿಹರೆಯದ ಮಗನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ಆರೋಪದ ಮೇಲೆ ವಿಧವೆ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮುನೇಶ್ ಮತ್ತು ಆಕೆಯ ಪ್ರಿಯಕರ ಸತೇಂದ್ರ ಸೋಮವಾರ ಮುಂಜಾನೆ 16 ವರ್ಷದ ಆಶಿಶ್‌ನನ್ನು ಕೊಂದು ಶವವನ್ನು ಕೊಳವೆಬಾವಿಯಲ್ಲಿ ಎಸೆದಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಜೈಸ್ವಾಲ್ ಹೇಳಿದ್ದಾರೆ.
ಬಳಿಕ ಮೃತದೇಹ ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗಲು ಒಪ್ಪದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ವ್ಯಕ್ತಿಯ ಗಂಟಲು ಸೀಳಿ ಕೊಂದ ಮಹಿಳೆ!
ಆಶಿಶ್ ತಮ್ಮ ಸಂಬಂಧವನ್ನು ವಿರೋಧಿಸಿದ್ದರಿಂದ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪತಿ ತೀರಿಕೊಂಡ ಬಳಿಕ ಮಹಿಳೆ, ಸತೇಂದ್ರ ಜತೆ ಸಂಬಂಧ ಬೆಳೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.