ಭಾರತದ ಮೊದಲ ವಿಮಾನವಾಹಕ ನೌಕೆ INS ವಿಕ್ರಾಂತ್ ಸೆಪ್ಟೆಂಬರ್ 3 ರಿಂದ ಕಾರ್ಯಾರಂಭ

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ ಸೆಪ್ಟೆಂಬರ್ 3 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಐಎನ್ಎಸ್ ವಿಕ್ರಾಂತ್
ಐಎನ್ಎಸ್ ವಿಕ್ರಾಂತ್
Updated on

ನವದೆಹಲಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ ಸೆಪ್ಟೆಂಬರ್ 3 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಈ ಕುರಿತು ಭಾರತೀಯ ನೌಕಾಪಡೆಯ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಎಸ್‌ಎನ್ ಘೋರ್ಮಾಡೆ ಅವರು ಮಾಹಿತಿ ನೀಡಿದ್ದು, ಐಎನ್‌ಎಸ್ ವಿಕ್ರಾಂತ್‌ ಕಾರ್ಯಾರಂಭವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಕೊಚ್ಚಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲ್ಲಿದ್ದು ಅದೇ ಕಾರ್ಯಕ್ರಮದಲ್ಲಿ ಐಎನ್‌ಎಸ್ ವಿಕ್ರಾಂತ್ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ವಿಮಾನವಾಹಕ ನೌಕೆಯ ಕಾರ್ಯಾರಂಭವು "ಅವಿಸ್ಮರಣೀಯ" ದಿನವಾಗಿರಲಿದೆ. ಏಕೆಂದರೆ ಇದು ದೇಶದ ಒಟ್ಟಾರೆ ಸಾಗರ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಿದರು.

ಅಂತೆಯೇ ಭಾರತೀಯ ನೌಕಾಪಡೆಯು ಎರಡನೇ ವಿಮಾನವಾಹಕ ನೌಕೆಯ ನಿರ್ಮಾಣಕ್ಕೆ ಒತ್ತಾಯಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

INS ವಿಕ್ರಾಂತ್‌ನಲ್ಲಿ, ಅದರ ಕಾರ್ಯಾರಂಭವು ಒಂದು ಐತಿಹಾಸಿಕ ಸಂದರ್ಭವಾಗಿದ್ದು, ಇದು "ರಾಷ್ಟ್ರೀಯ ಏಕತೆಯ" ಸಂಕೇತವಾಗಿದೆ. ಏಕೆಂದರೆ ಅದರ ಘಟಕಗಳು ಗಮನಾರ್ಹ ಸಂಖ್ಯೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದವಾಗಿವೆ ಎಂದರು.

ಸುಮಾರು 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಿಮಾನವಾಹಕ ನೌಕೆಯು ಕಳೆದ ತಿಂಗಳು ಸಮುದ್ರ ಪ್ರಯೋಗದ ನಾಲ್ಕನೇ ಮತ್ತು ಅಂತಿಮ ಹಂತದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 'ವಿಕ್ರಾಂತ್' ನಿರ್ಮಾಣದೊಂದಿಗೆ, ಭಾರತವು ಸ್ಥಳೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಈ ವಿಶೇಷ ನೌಕೆ 2,300 ಕ್ಕೂ ಹೆಚ್ಚು ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಮಹಿಳಾ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳನ್ನು ಒಳಗೊಂಡಂತೆ ಸುಮಾರು 1700 ಜನರ ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ.

ವಿಕ್ರಾಂತ್ ಸುಮಾರು 28 ನಾಟಿಕಲ್ ಗರಿಷ್ಠ ವೇಗವನ್ನು ಹೊಂದಿದ್ದು, ಸುಮಾರು 7,500 ನಾಟಿಕಲ್ ಮೈಲುಗಳ ಸಹಿಷ್ಣುತೆಯೊಂದಿಗೆ 18 ನಾಟಿಕಲ್ ಗಳ ಪ್ರಯಾಣದ ವೇಗವನ್ನು ಹೊಂದಿದೆ. ವಿಮಾನವಾಹಕ ನೌಕೆಯು 262 ಮೀಟರ್ ಉದ್ದ, 62 ಮೀಟರ್ ಅಗಲ ಮತ್ತು 59 ಮೀಟರ್ ಎತ್ತರವನ್ನು ಹೊಂದಿದೆ. ಇದರ ನಿರ್ಮಾಣವು 2009 ರಲ್ಲಿ ಪ್ರಾರಂಭವಾಯಿತು. ನೌಕಾಪಡೆಯು ನಾಲ್ಕು ಗ್ಯಾಸ್ ಟರ್ಬೈನ್‌ಗಳಿಂದ ಒಟ್ಟು 88 ಮೆಗಾವ್ಯಾಟ್ ಶಕ್ತಿಯನ್ನು ಹೊಂದಿದೆ ಮತ್ತು ಗರಿಷ್ಠ 28 ನಾಟ್ಸ್ ವೇಗವನ್ನು ಹೊಂದಿದೆ ಎಂದು ನೌಕಾಪಡೆ ತಿಳಿಸಿದೆ.

ಈ ಯೋಜನೆಯನ್ನು ರಕ್ಷಣಾ ಸಚಿವಾಲಯ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಡುವಿನ ಮೂರು ಹಂತದ ಒಪ್ಪಂದದ ಅಡಿಯಲ್ಲಿ ಮೇ 2007 ರಿಂದ ಜಾರಿಗೆ ತರಲಾಗಿದೆ. ಹಡಗಿನ ಕೀಲ್ ಅನ್ನು ಫೆಬ್ರವರಿ 2009 ರಲ್ಲಿ ಹಾಕಲಾಯಿತು. ನೌಕಾಪಡೆಯು ವಿಮಾನವಾಹಕ ನೌಕೆಯನ್ನು ಸೆಪ್ಟೆಂಬರ್ 2 ರಂದು ಪಡೆಗೆ ನಿಯೋಜಿಸಲಾಗುವುದು ಮತ್ತು ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಭಾರತದ ಸ್ಥಾನವನ್ನು ಮತ್ತು ನೀಲಿ ಜಲ ನೌಕಾಪಡೆಯ ಅನ್ವೇಷಣೆಯನ್ನು ಬಲಪಡಿಸುತ್ತದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com