ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ, ದೇಶದ 3 ಏರ್‌ಪೋರ್ಟ್‌ಗಳಲ್ಲಿ ಇಂದಿನಿಂದ ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿ!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ, ದೇಶದ 3 ಏರ್‌ಪೋರ್ಟ್‌ಗಳಲ್ಲಿ ಇಂದಿನಿಂದ ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಹೊಸ ತಂತ್ರಜ್ಞಾನದಿಂದ ಕಾಗದ ರಹಿತ, ತಡೆ ರಹಿತ ಚೆಕ್‌ ಇನ್‌ಗೆ ಅನುಕೂಲವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ, ದೇಶದ 3 ಏರ್‌ಪೋರ್ಟ್‌ಗಳಲ್ಲಿ ಇಂದಿನಿಂದ ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಹೊಸ ತಂತ್ರಜ್ಞಾನದಿಂದ ಕಾಗದ ರಹಿತ, ತಡೆ ರಹಿತ ಚೆಕ್‌ ಇನ್‌ಗೆ ಅನುಕೂಲವಾಗಲಿದೆ.

ವಿಮಾನ ನಿಲ್ದಾಣಗಳಲ್ಲಿ ಕಾಗದ ರಹಿತ, ತಡೆ ರಹಿತ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಸಲುವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ಇಂದಿನಿಂದ ‘ಫೇಸ್ ರೆಕಗ್ನಿಷನ್‌‘ (ಮುಖ ಗುರುತಿಸುವ) ವ್ಯವಸ್ಥೆ ಒದಗಿಸುವ ‘ಡಿಜಿ ಯಾತ್ರಾ‘ ತಂತ್ರಜ್ಞಾನ ಆರಂಭವಾಗಿದೆ. ಡಿಜಿ ಯಾತ್ರಾ ಆ್ಯಪ್ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿವಿಧ ಚೆಕ್‌ ಪಾಯಿಂಟ್‌ಗಳಲ್ಲಿ ಕಾಗದ ರಹಿತ ಹಾಗೂ ತಡೆರಹಿತವಾಗಿ ತೆರಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಡಿಜಿಯಾತ್ರಾ ಆ್ಯಪ್ ವ್ಯವಸ್ಥೆ? ಹೇಗೆ ಕಾರ್ಯ ನಿರ್ವಹಿಸುತ್ತದೆ?
ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್‌ಆರ್‌ಟಿ) ಆಧಾರಿತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಪರ್ಕರಹಿತ, ತಡೆರಹಿತ ಸಂಸ್ಕರಣೆಯನ್ನು ಸಾಧಿಸಲು ಡಿಜಿ ಯಾತ್ರಾವನ್ನು ಕಲ್ಪಿಸಲಾಗಿದೆ. ಡಿಜಿ ಯಾತ್ರಾದೊಂದಿಗೆ, ಭದ್ರತಾ ತಪಾಸಣೆ ಪ್ರದೇಶಗಳು ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಡೇಟಾವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಬಹುದು.

ಪ್ರಯಾಣಿಕರು ಮೊಬೈಲ್‌ನಲ್ಲಿ ‘ಡಿಜಿ ಯಾತ್ರಾ‘ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡು, ಆಧಾರ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಫೇಸ್ ರೆಕಗ್ನಿಷನ್‌ಗಾಗಿ ಸೆಲ್ಫಿ ಫೋಟೋ ಅಪ್ಲೋಡ್‌ ಮಾಡಬೇಕು. ಸದ್ಯ ಪ್ರಯಾಣಿಕರ ಮಾಹಿತಿ ಸಂಗ್ರಹಕ್ಕೆ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇಲ್ಲ. ಪ್ರಯಾಣಿಕರ ಗುರುತಿನ ಸಂಖ್ಯೆ ಹಾಗೂ ‍‍ಪ್ರಯಾಣದ ಮಾಹಿತಿಯನ್ನು ಆ್ಯಪ್‌ನಲ್ಲಿ ದಾಖಲಿಸಲಾಗುತ್ತದೆ. ಹೀಗಾಗಿ ಚೆಕ್‌ ಪಾಯಿಂಟ್‌ಗಳಲ್ಲಿ ಪದೇ ಪದೇ ದಾಖಲೆಗಳನ್ನು ತೋರಿಸುವ ಪ್ರಹಸನ ಇರುವುದಿಲ್ಲ.

ಎಲ್ಲೆಲ್ಲಿ ಈ ವ್ಯವಸ್ಥೆ ಜಾರಿ?
ಗುರುವಾರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಹಾಗೂ ವಾರಾಣಸಿ ವಿಮಾಣ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದ್ದು, 2023ರ ಮಾರ್ಚ್‌ ಅಂತ್ಯದ ವೇಳೆಗೆ ಹೈದರಾಬಾದ್, ಕೋಲ್ಕತ್ತ, ಪುಣೆ ಹಾಗೂ ವಿಜಯವಾಡಲ್ಲೂ ಜಾರಿಗೆ ಬರಲಿದೆ. ಸದ್ಯ ಈ ವ್ಯವಸ್ಥೆ ದೇಶೀಯ ಪ್ರಯಾಣಿಕರಿಗೆ ಮಾತ್ರ ಲಭ್ಯವಿದೆ ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com