ಚೀನಾದ ವುಹಾನ್ ಲ್ಯಾಬ್ ನಿಂದಲೇ 'ಮಾನವ ನಿರ್ಮಿತ ಕೊರೋನಾ ವೈರಸ್ ಸೋರಿಕೆ': ಕೆಲಸ ಮಾಡಿದ್ದ ವಿಜ್ಞಾನಿಯ ಸ್ಫೋಟಕ ಹೇಳಿಕೆ!

ಇಡೀ ಜಗತನ್ನು ಪೀಡಿಸಿ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ.. ಬದಲಿಗೆ ಅದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ವುಹಾನ್ ಲ್ಯಾಬ್ ನಿಂದಲೇ ಅದು ಸೋರಿಕೆಯಾಗಿದೆ ಎಂದು ಲ್ಯಾಬ್ ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಡೀ ಜಗತನ್ನು ಪೀಡಿಸಿ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ.. ಬದಲಿಗೆ ಅದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ವುಹಾನ್ ಲ್ಯಾಬ್ ನಿಂದಲೇ ಅದು ಸೋರಿಕೆಯಾಗಿದೆ ಎಂದು ಲ್ಯಾಬ್ ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಚೀನಾದ ವುಹಾನ್‌ನಲ್ಲಿರುವ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಯುಎಸ್ ಮೂಲದ ವಿಜ್ಞಾನಿ ಆಂಡ್ರ್ಯೂ ಹಫ್ ಈ ಸ್ಫೋಟಕ ಹೇಳಿಕೆ ನೀಡಿದ್ದು, ಕೊರೋನಾ ವೈರಸ್ ಮಾನವ ನಿರ್ಮಿತ ವೈರಸ್ ಆಗಿದ್ದು, ಅದು ಚೀನಾದ ವುಹಾನ್ ನಲ್ಲಿರುವ ವೈರಾಣು ಸಂಶೋಧನಾ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂದು ಅದೇ ಲ್ಯಾಬ್ ನಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದ ಹಫ್ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಚೀನಾ ಸರ್ಕಾರಿ ಸ್ವಾಮ್ಯದ ಸಂಶೋಧನಾ ಸೌಲಭ್ಯವಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ನಿಂದ COVID ಸೋರಿಕೆಯಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ, ಬ್ರಿಟಿಷ್ ಪತ್ರಿಕೆ ದಿ ಸನ್‌ನಲ್ಲಿ ಯುಎಸ್ ಮೂಲದ ಸಂಶೋಧಕ ಆಂಡ್ರ್ಯೂ ಹಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇದೇ ರೀತಿಯ ವರದಿ ಬಿತ್ತರಿಸಲಾಗಿದೆ. ಇದೇ ವಿಚಾರವಾಗಿ ತನ್ನ ಇತ್ತೀಚಿನ ಪುಸ್ತಕ, "ದಿ ಟ್ರೂತ್ ಅಬೌಟ್ ವುಹಾನ್" ನಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ ಈ ಬಗ್ಗೆ ಉಲ್ಲೇಖಿಸಿದ್ದು, ಚೀನಾದ ವುಹಾನ್ ಲ್ಯಾಬ್ ನಿಂದಲೇ ಈ ಮಾನವ ನಿರ್ಮಿತ ಕೊರೋನಾ ವೈರಸ್ ಜಗತ್ತಿಗೆ ಸೋರಿಕೆಯಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಹೇಳಿಕೆಯಲ್ಲಿ ಚೀನಾದ ಈ ವೈರಸ್ ಸಂಶೋಧನೆಗೆ ಅಮೆರಿಕ ಸರ್ಕಾರವೇ ಧನಸಾಹಯ ಒದಗಿಸಿದ್ದ ಆತಂಕಕಾರಿ ವಿಚಾರವನ್ನೂ ಅವರು ಬಹಿರಂಗ ಪಡಿಸಿದ್ದು, ಬ್ರಿಟನ್ ಮೂಲದ ಟ್ಯಾಬ್ಲಾಯ್ಡ್ ದಿ ಸನ್‌ನಲ್ಲಿ ಹಫ್‌ನ ಪುಸ್ತಕದ ಆಯ್ದ ಭಾಗಗಳು ಪ್ರಕಟಗೊಂಡಿವೆ. ಒಂದು ದಶಕಕ್ಕೂ ಹೆಚ್ಚು ಕಾಲ, ಸಂಸ್ಥೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ನಿಂದ ಧನಸಹಾಯದೊಂದಿಗೆ ಬಾವಲಿಗಳಲ್ಲಿನ ಹಲವಾರು ಕರೋನವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ ಮತ್ತು ವುಹಾನ್ ಲ್ಯಾಬ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. NIH ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಗೆ ಜವಾಬ್ದಾರರಾಗಿರುವ ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ ಎಂದು ಹಫ್ ಹೇಳಿದ್ದಾರೆ.

2014 ರಿಂದ 2016 ರವರೆಗೆ ಇಕೋಹೆಲ್ತ್ ಅಲೈಯನ್ಸ್‌ನಲ್ಲಿ ಕೆಲಸ ಮಾಡಿದ ಹಫ್, ಲಾಭರಹಿತ ಸಂಸ್ಥೆಯು ವುಹಾನ್ ಲ್ಯಾಬ್‌ಗೆ "ಇತರ ಜಾತಿಗಳ ಮೇಲೆ ದಾಳಿ ಮಾಡಲು ಬ್ಯಾಟ್ ಕರೋನವೈರಸ್‌ಗಳನ್ನು ಎಂಜಿನಿಯರ್ ಮಾಡಲು ಅಸ್ತಿತ್ವದಲ್ಲಿರುವ ಅತ್ಯುತ್ತಮ ವಿಧಾನಗಳನ್ನು ಅಭಿವೃದ್ಧಿಪಡಿಸಲು ಹಲವು ವರ್ಷಗಳವರೆಗೆ ಸಹಾಯ ಮಾಡಿದೆ. ಇದು ತಳೀಯವಾಗಿ ವಿನ್ಯಾಸಗೊಳಿಸಲಾದ ಏಜೆಂಟ್ ಎಂದು ಚೀನಾ ಮೊದಲ ದಿನದಿಂದ ತಿಳಿದಿತ್ತು" ಎಂದು ಹಫ್ ಬರೆದಿದ್ದಾರೆ. ಅಂತೆಯೇ ಅಪಾಯಕಾರಿ ಜೈವಿಕ ತಂತ್ರಜ್ಞಾನವನ್ನು ಚೀನಿಯರಿಗೆ ವರ್ಗಾಯಿಸಲು ಅಮೆರಿಕ ಸರ್ಕಾರವೇ ಕಾರಣ ಎಂದೂ ಆರೋಪಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, "ನಾನು ನೋಡಿದ ಸಂಗತಿಯಿಂದ ನಾನು ಭಯಭೀತನಾಗಿದ್ದೆ.. ನಾವು ಅವರಿಗೆ ಬಯೋವೆಪನ್ ತಂತ್ರಜ್ಞಾನವನ್ನು ಹಸ್ತಾಂತರಿಸುತ್ತಿದ್ದೆವು ಎಂದು ಹಫ್ ಹೇಳಿಕೊಂಡಿದ್ದಾರೆ. 

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ಚೀನಾದ ಗೇನ್-ಆಫ್-ಫಂಕ್ಷನ್ ಪ್ರಯೋಗಗಳನ್ನು ಅಸಮರ್ಪಕ ಭದ್ರತೆಯೊಂದಿಗೆ ನಡೆಸಲಾಯಿತು, ಇದರ ಪರಿಣಾಮವಾಗಿ ವುಹಾನ್ ಲ್ಯಾಬ್‌ನಲ್ಲಿ ವೈರಸ್ ಸೋರಿಕೆಯಾಗಿದೆ. "ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಿ ಪ್ರಯೋಗಾಲಯಗಳು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಹೊಂದಿಲ್ಲ, ಅಂತಿಮವಾಗಿ ಕೊರೋನಾ ವೈರಸ್ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಲ್ಯಾಬ್ ಸೋರಿಕೆಗೆ ಕಾರಣವಾಯಿತು" ಎಂದು ಆಂಡ್ರ್ಯೂ ಹಫ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಇನ್ನು ಹಫ್ ಹೇಳಿಕೆ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವುಹಾನ್ ಲ್ಯಾಬ್ ಇದೀಗ COVID ನ ಮೂಲದ ಬಗ್ಗೆ ಬಿಸಿ ಚರ್ಚೆಗಳ ಕೇಂದ್ರಬಿಂದುವಾಗಿದೆ. ಆದರೆ ಈ ಆರೋಪಗಳನ್ನು ಚೀನಾದ ಸರ್ಕಾರಿ ಅಧಿಕಾರಿಗಳು ಮತ್ತು ಲ್ಯಾಬ್ ಕೆಲಸಗಾರರು ವೈರಸ್ ಅಲ್ಲಿ ಹುಟ್ಟಿಕೊಂಡಿದೆ ಎಂಬುದನ್ನು ತಳ್ಳಿ ಹಾಕಿದ್ದಾರೆ. 

ProPublica/Vanity Fair ಪ್ರಕಟಿಸಿದ ಇತ್ತೀಚಿನ ತನಿಖೆಯ ಪ್ರಕಾರ, WIV ಚೀನಾದ ಅಪಾಯಕಾರಿ ಕೊರೊನಾವೈರಸ್ ಸಂಶೋಧನೆಗೆ ನೆಲೆಯಾಗಿದೆ ಎಂದು ಪೋಸ್ಟ್ ವರದಿ ಮಾಡಿದೆ. ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ತನ್ನ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ವೈಜ್ಞಾನಿಕ ಪ್ರಗತಿಯನ್ನು ಉತ್ಪಾದಿಸಲು ಈ ಸಂಶೋಧನಾ ಸಂಸ್ಥೆಯು ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷದಿಂದ ಅಪಾರ ಒತ್ತಡವನ್ನು ಹೊಂದಿತ್ತು ಎಂದು ಆರೋಪಿಸಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com