ಭೀಮಾ ಕೋರೆಗಾಂವ್ ಪ್ರಕರಣ: ಸ್ಟಾನ್ ಸ್ವಾಮಿ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸಾಕ್ಷ್ಯಾಧಾರ ಇರಿಸಲಾಗಿತ್ತು: ಅಮೆರಿಕದ ಫೋರೆನ್ಸಿಕ್ ಸಂಸ್ಥೆ ವರದಿ

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಅವರನ್ನು ಅನವಶ್ಯಕವಾಗಿ ಬಂಧಿಸಲಾಗಿದ್ದು, ಉದ್ದೇಶಪೂರ್ವಕವಾಗಿಯೇ ಅವರ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸಾಕ್ಷ್ಯಾಧಾರಗಳನ್ನು ಇರಿಸಲಾಗಿತ್ತು ಎಂದು ಅಮೆರಿಕ ಮೂಲದ ಫೋರೆನ್ಸಿಕ್ ಸಂಸ್ಥೆ ವಾದಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಸ್ಟ್ಯಾನ್‌ ಸ್ವಾಮಿ
ಸ್ಟ್ಯಾನ್‌ ಸ್ವಾಮಿ

ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಅವರನ್ನು ಅನವಶ್ಯಕವಾಗಿ ಬಂಧಿಸಲಾಗಿದ್ದು, ಉದ್ದೇಶಪೂರ್ವಕವಾಗಿಯೇ ಅವರ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸಾಕ್ಷ್ಯಾಧಾರಗಳನ್ನು ಇರಿಸಲಾಗಿತ್ತು ಎಂದು ಅಮೆರಿಕ ಮೂಲದ ಫೋರೆನ್ಸಿಕ್ ಸಂಸ್ಥೆ ವಾದಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಈ ಸಂಬಂಧ ವರದಿಯನ್ನು ಆರ್ಸೆನಲ್ ಕನ್ಸಲ್ಟಿಂಗ್ ಬಿಡುಗಡೆ ಮಾಡಿದ್ದು, ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಫಾಧರ್ ಸ್ಟಾನ್ ಸ್ವಾಮಿ ಅವರ ಲ್ಯಾಪ್‌ಟಾಪ್‌ನಲ್ಲಿ ಹ್ಯಾಕಿಂಗ್ ಮೂಲಕ ದಾಖಲೆಗಳನ್ನು ಇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ದಾಖಲೆಗಳನ್ನು ಉಲ್ಲೇಖಿಸಿ ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಬರೆಯಲಾಗಿದೆ. ಹ್ಯಾಕಿಂಗ್ 2014 ರಿಂದ ಜೂನ್ 11, 2019 ರವರೆಗೆ ನಡೆದಿದ್ದು, ಮಾವೋವಾದಿಗಳ ಪತ್ರಗಳು ಸೇರಿದಂತೆ 44 ದಾಖಲೆಗಳನ್ನು ಲ್ಯಾಪ್‌ಟಾಪ್‌ನಲ್ಲಿ ಇರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಇತರ ಇಬ್ಬರು, ಸುರೇಂದ್ರ ಗ್ಯಾಡ್ಲಿಂಗ್ ಮತ್ತು ರೋನಾ ವಿಲ್ಸನ್ ಸಹ ಬಲಿಪಶುಗಳಾಗಿದ್ದು, ಅವರ ಲ್ಯಾಪ್ ಟಾಪ್ ನಲ್ಲಿ ಹ್ಯಾಕರ್‌ನಿಂದ ಪುರಾವೆಗಳನ್ನು ಹಾಕಲಾಗಿದೆ ಎಂದೂ ಅಮೇರಿಕನ್ ಫೋರೆನ್ಸಿಕ್ ಇನ್ಸ್ಟಿಟ್ಯೂಟ್ ವರದಿ ಹೇಳಿದೆ.

ಹ್ಯಾಕರ್‌ಗಳು ಯಾರು? ಹ್ಯಾಕಿಂಗ್ ಏಕೆ ಮಾಡಿದ್ದಾರೆಂದು ಪತ್ತೆ ಮಾಡದಿರಲು ಪ್ರಯತ್ನಿಸಿದ್ದಾರೆ. ಜೂನ್ 12 ರಂದು ಪುಣೆ ಪೊಲೀಸರು ಸ್ಟಾನ್ ಸ್ವಾಮಿ ಅವರ ಲ್ಯಾಪ್‌ಟಾಪ್ ಅನ್ನು ಕಸ್ಟಡಿಗೆ ತೆಗೆದುಕೊಂಡರು. ಪ್ರಕರಣದ ಆರೋಪಿಗಳಾದ ರೋನಾ ವಿಲ್ಸ್ ಮತ್ತು ಸುರೇಂದ್ರ ಗ್ಯಾಡ್ಲಿಂಗ್ ಅವರ ಲ್ಯಾಪ್‌ಟಾಪ್‌ಗಳನ್ನು ಹ್ಯಾಕ್ ಮಾಡಿರುವುದು ಕೂಡ ಪತ್ತೆಯಾಗಿದೆ. ಅಮೆರಿಕದ ಸಂಸ್ಥೆಯ ವರದಿ ಪ್ರಕಾರ ಮೂವರ ಲ್ಯಾಪ್ ಟಾಪ್ ಅನ್ನು ಒಬ್ಬ ವ್ಯಕ್ತಿ ಹ್ಯಾಕ್ ಮಾಡಿದ್ದಾನೆ ಎಂದು ಹೇಳಲಾಗಿದೆ. 

ಇಮೇಲ್‌ಗಳ ಮೂಲಕ ಗ್ಯಾಡ್ಲಿಂಗ್‌ನ ಕಂಪ್ಯೂಟರ್ ಅನ್ನು ಗುರಿಯಾಗಿಸಿದ ಮಾಲ್‌ವೇರ್ ಸ್ವಾಮಿ ಮತ್ತು ಸುಧಾ ಭಾರದ್ವಾಜ್ ಸೇರಿದಂತೆ ಹಲವಾರು ಭೀಮಾ-ಕೋರೆಗಾಂವ್ ಆರೋಪಿಗಳ ಮೇಲ್‌ಗಳಲ್ಲಿ ನಕಲಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಸ್ಟಾನ್ ಸ್ವಾಮಿ ಮತ್ತು ಇತರರನ್ನು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ನಿಷೇಧಿತ ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಡಿ ಬಂಧಿಸಲಾಗಿತ್ತು.

ಏನಿದು ಪ್ರಕರಣ?
2018 ರ ಜನವರಿ 1 ರಂದು ಭೀಮಾ ಕೋರೆಗಾಂವ್ ಕದನದ 200 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಘರ್ಷಣೆಗಳು ಮತ್ತು ಎಲ್ಗರ್ ಪರಿಷತ್ ಎಂಬ ದಲಿತ ಸಭೆ ಮತ್ತು ಮಾವೋವಾದಿ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ಸ್ಟಾನ್ ಸ್ವಾಮಿಯನ್ನು ರಾಂಚಿಯಿಂದ ಎನ್‌ಐಎ ಬಂಧಿಸಿತ್ತು. ಅವರನ್ನು ಅಕ್ಟೋಬರ್ 2020 ರಲ್ಲಿ ಬಂಧಿಸಲಾಯಿತು. ಸ್ವಾಮಿ ರಾಂಚಿಯಲ್ಲಿ ಆದಿವಾಸಿಗಳ ನಡುವೆ ಕೆಲಸ ಮಾಡಿದ್ದರು. ಫಾದರ್ ಸ್ಟಾನ್ ಸ್ವಾಮಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ನಿಧನರಾಗಿದ್ದರು. 

84 ವರ್ಷದ ಜೆಸ್ಯೂಟ್ ಪಾದ್ರಿ ಸ್ಟಾನ್ ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ವೈದ್ಯಕೀಯ ಕಾರಣಗಳಿಗಾಗಿ ಅವರ ಜಾಮೀನು ಕೋರಿಕೆಯನ್ನು ಹಲವು ಬಾರಿ ತಿರಸ್ಕರಿಸಲಾಯಿತು. ಅಂತಿಮವಾಗಿ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಜೈಲಿನಲ್ಲಿದ್ದಾಗ, ಅವರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಅವರು ಹೃದಯ ಸ್ತಂಭನದಿಂದ ನಿಧನರಾದರು. ಆರೋಗ್ಯ ಸಮಸ್ಯೆಗಳ ಕುರಿತ ಅರ್ಜಿ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಅವರು ಸಾವನ್ನಪ್ಪಿದ್ದರು.

ಏತನ್ಮಧ್ಯೆ, ಅವರ ಮರಣದ ನಂತರ, ಬಾಂಬೆ ಹೈಕೋರ್ಟ್ ಮೃತ ಮಾನವ ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಅತ್ಯುತ್ತಮ ವ್ಯಕ್ತಿ ಎಂದು ಹೇಳಿದೆ. ಅವರ ಕಾರ್ಯಗಳನ್ನು ಗೌರವಿಸಲಾಗಿದೆ ಎಂದೂ ನ್ಯಾಯಾಲಯ ಹೇಳಿದೆ. ಸ್ಟಾನ್ ಸ್ವಾಮಿ ಅವರ ಸಾವಿನ ನಂತರ ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಕುರಿತು ಅವರು ಸಲ್ಲಿಸಿದ ಅರ್ಜಿಯಲ್ಲಿ ನ್ಯಾಯಾಲಯದ ಉಲ್ಲೇಖವನ್ನು ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com