ಯುಪಿ: ಹಿಂದೂ ದೇವರಿರುವ ಪೇಪರ್ ನಲ್ಲಿ ಚಿಕನ್ ಮಾರಾಟ, ಪೊಲೀಸರ ಮೇಲೆ ಹಲ್ಲೆ; ವ್ಯಕ್ತಿಯ ಬಂಧನ

ಹಿಂದೂ ದೇವರಿರುವ ಚಿತ್ರವಿರುವ ಪೇಪರ್ ನಲ್ಲಿ ಚಿಕನ್ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಹಾಗೂ ಪೊಲೀಸ್ ಅಧಿಕಾರಿಗಳ ತಂಡದ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಹಿಂದೂ ದೇವರಿರುವ ಚಿತ್ರವಿರುವ ಪೇಪರ್ ನಲ್ಲಿ ಚಿಕನ್ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಹಾಗೂ ಪೊಲೀಸ್ ಅಧಿಕಾರಿಗಳ ತಂಡದ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಭಾನುವಾರ ಈ ಘಟನೆ ನಡೆದಿದ್ದು, ತಾಲಿಬ್ ಹುಸೇನ್ ಎಂಬಾತ ತನ್ನ ಅಂಗಡಿಯಿಂದ ಚಿಕನ್ ನ್ನು ಹಿಂದೂ, ದೇವತೆ, ದೇವರುಗಳ ಫೋಟೋವನ್ನೊಳಗೊಂಡ ಪೇಪರ್ ನಲ್ಲಿ ಮಾರಾಟ ಮಾಡುತ್ತಿದ್ದ, ಈ  ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಆತನ ಅಂಗಡಿಗೆ ಪೊಲೀಸರು ತಲುಪುತ್ತಿದ್ದಂತೆಯೇ ಹುಸೇನ್ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, ಹತ್ಯೆ ಮಾಡುವ ಉದ್ದೇಶ ಹೊಂದಿದ್ದ ಎಂದು ಎಫ್ಐಆರ್ ನಲ್ಲಿ ಹೇಳಿದ್ದಾರೆ. 

ಐಪಿಸಿ ಸೆಕ್ಷನ್ 153-A (ಎರಡು ಗುಂಪು, ಧರ್ಮ, ಜನಾಂಗದ ನಡುವೆ ದ್ವೇಷ ಮೂಡಿಸುವುದು) 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) 307 (ಹತ್ಯೆಗೆ ಯತ್ನ)ದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com