ಕೋವಿಡ್-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,139 ಹೊಸ ಪ್ರಕರಣ, 38 ಮಂದಿ ಸಾವು

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಹೆಚ್ಚಾಗಿದ್ದು, 20 ಸಾವಿರದ 139 ದಾಖಲಾಗಿದೆ. ನಿನ್ನೆಗಿಂತ ಶೇಕಡಾ 19ರಷ್ಟು ಅಧಿಕವಾಗಿದೆ. ನಿನ್ನೆಗಿಂತ 3 ಸಾವಿರದ 233 ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ನಿನ್ನೆ ದೇಶದಲ್ಲಿ 16 ಸಾವಿರದ 906 ಸೋಂಕು ವರದಿಯಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಹೆಚ್ಚಾಗಿದ್ದು, 20 ಸಾವಿರದ 139 ದಾಖಲಾಗಿದೆ. ನಿನ್ನೆಗಿಂತ ಶೇಕಡಾ 19ರಷ್ಟು ಅಧಿಕವಾಗಿದೆ. ನಿನ್ನೆಗಿಂತ 3 ಸಾವಿರದ 233 ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ನಿನ್ನೆ ದೇಶದಲ್ಲಿ 16 ಸಾವಿರದ 906 ಸೋಂಕು ವರದಿಯಾಗಿತ್ತು.

ದೇಶದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷದ 36 ಸಾವಿರದ 076ಕ್ಕೆ ಏರಿಕೆಯಾಗಿದ್ದು ಅದು ದೇಶದ ಒಟ್ಟಾರೆ ಸೋಂಕಿತರ ಶೇಕಡಾ 0.31ರಷ್ಟಾಗಿದೆ. ದಿನಂಪ್ರತಿ ಪಾಸಿಟಿವ್ ದರ ಶೇಕಡಾ 5.10ರಷ್ಟಿದೆ. ವಾರದ ಪಾಸಿಟಿವ್ ದರ ಶೇಕಡಾ 4.37ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. 

ಗುಣಮುಖ ಹೊಂದುತ್ತಿರುವವರ ದರ ಶೇಕಡಾ 98.49ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 16 ಸಾವಿರದ 482 ಮಂದಿ ಗುಣಮುಖರಾಗಿದ್ದು ಇದರೊಂದಿಗೆ ಇದುವರೆಗೆ ಒಟ್ಟಾರೆ 4 ಕೋಟಿಯ 30 ಲಕ್ಷದ 28 ಸಾವಿರದ 356 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 38 ಮಂದಿ ಮೃತಪಟ್ಟಿದ್ದು ಈ ಮೂಲಕ ಒಟ್ಟು 5 ಲಕ್ಷದ 25 ಸಾವಿರದ 557 ಮಂದಿ ಮೃತಪಟ್ಟಿದ್ದಾರೆ. 

ಒಂದೇ ದಿನದಲ್ಲಿ 3 ಲಕ್ಷದ 94 ಸಾವಿರದ 774 ಕೋವಿಡ್ ಸ್ಯಾಂಪಲ್ ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಶೇಕಡಾ 86.81 ಕೋಟಿ ಪರೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನದಲ್ಲಿ 13 ಲಕ್ಷದ 44 ಸಾವಿರದ 714 ಕೋವಿಡ್ ಲಸಿಕೆಗಳನ್ನು ನೀಡಲಾಗಿದ್ದು ಇದುವರೆಗೆ ದೇಶದಲ್ಲಿ 199 ಕೋಟಿಯ 27 ಲಕ್ಷದ 27 ಸಾವಿರದ 559 ಲಸಿಕೆಗಳನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com