PTI
ಗೊಂಡಾ (ಉತ್ತರ ಪ್ರದೇಶ): ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಮತ್ತು ಆತನ ಸೋದರ ಸಂಬಂಧಿಗಳು ಅತ್ಯಾಚಾರವೆಸಗಿದ್ದಾರೆ. ನಂತರ 'ತ್ರಿವಳಿ ತಲಾಖ್' ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆರೋಪಿ ಪತಿ, ಲಖನೌ ಮೂಲದ ಮೊಹಮ್ಮದ್ ಅದ್ನಾನ್ ಎಂಬಾತನನ್ನು ಗುರುವಾರ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆತನ ಸೋದರ ಸಂಬಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಕ್ಷಿಣೆ ನೀಡಬೇಕೆಂದು ನನ್ನ ಪತಿ ಒತ್ತಾಯಿಸುತ್ತಿದ್ದರು. ಇದೇ ಕಾರಣಕ್ಕೆ ನನ್ನನ್ನು ಥಳಿಸುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
'ವರದಕ್ಷಿಣೆಗಾಗಿ ಆರೋಪಿಯು ನೀಡುತ್ತಿದ್ದ ಹಿಂಸೆಯಿಂದಾಗಿ ಮಹಿಳೆಯು ಆಕೆಯ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ, ಅದ್ನಾನ್ ಮತ್ತು ಆತನ ಸೋದರ ಸಂಬಂಧಿ ಮಹಿಳೆಯ ತಾಯಿ ಮನೆಗೆ ಬಂದಿದ್ದಾರೆ. ಈ ವೇಳೆ ಒಬ್ಬಂಟಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ' ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಆಕಾಶ್ ತೋಮರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಚರ್ಚ್ನಲ್ಲಿ ನನ್ನ ಮೇಲೆ ನಿರಂತರ ಅತ್ಯಾಚಾರ ನಡೆದಿದೆ; 12 ವರ್ಷಗಳ ನಂತರ ಸಂತ್ರಸ್ತೆ ದೂರು
ಇದಾದ ಬಳಿಕ ಅದ್ನಾನ್ ಆಕೆಯನ್ನು ಥಳಿಸಿದ್ದಾನೆ. ಅಲ್ಲದೆ, ಕಾನೂನುಬಾಹಿರವಾದ 'ತ್ರಿವಳಿ ತಲಾಖ್' ಮೂಲಕ ಮಹಿಳೆಗೆ ವಿಚ್ಛೇದನ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಸೋದರ ಸಂಬಂಧಿಯ ಹುಡುಕಾಟ ನಡೆಯುತ್ತಿದೆ.