2023ರ ಜಿ20 ಶೃಂಗಸಭೆಯ ಅಧ್ಯಕ್ಷತೆ ಆತಿಥ್ಯ ಹೊಣೆ ಸ್ವೀಕರಿಸಿದ ಭಾರತ: ಬಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ಮುಂದಿನ ವರ್ಷ 2023ರ ಜಿ20 ಶೃಂಗಸಭೆಯ ಆತಿಥ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಔಪಚಾರಿಕವಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರಿಂದ ಬಾಲಿಯಲ್ಲಿ ಸ್ವೀಕರಿಸಿದರು.
ಇಂಡೋನೇಷ್ಯಾ ಅಧ್ಯಕ್ಷರಿಂದ ಜಿ20 ಅಧ್ಯಕ್ಷತೆ ಆತಿಥ್ಯ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ
ಇಂಡೋನೇಷ್ಯಾ ಅಧ್ಯಕ್ಷರಿಂದ ಜಿ20 ಅಧ್ಯಕ್ಷತೆ ಆತಿಥ್ಯ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮುಂದಿನ ವರ್ಷ 2023ರ ಜಿ20 ಶೃಂಗಸಭೆಯ ಆತಿಥ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಔಪಚಾರಿಕವಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರಿಂದ ಬಾಲಿಯಲ್ಲಿ ಸ್ವೀಕರಿಸಿದರು. ಎಲ್ಲರನ್ನೂ ಒಳಗೊಂಡ ಮಹಾತ್ವಾಕಾಂಕ್ಷಿ ನಿರ್ಣಾಯಕ ಮತ್ತು ಕಾರ್ಯೋನ್ಮುಖವಾದ ಶೃಂಗಸಭೆಯಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಬಾಲಿಯಲ್ಲಿ ಜಿ20 ನಾಯಕರ ಸಮ್ಮುಖದಲ್ಲಿ ಭರವಸೆ ನೀಡಿದರು.

ಪ್ರತಿಯೊಂದು ದೇಶಗಳ ಪ್ರಯತ್ನಗಳಿಂದ ಜಿ20 ಶೃಂಗಸಭೆಯನ್ನು ಜಾಗತಿಕ ಕಲ್ಯಾಣಕ್ಕೆ ವೇಗವರ್ಧಕವಾಗಿ ಬಳಸಬಹುದು ಎಂದು ನಿನ್ನೆ ಬಾಲಿಯಲ್ಲಿ ನಡೆದ ವಿಸ್ತೃತ ಸಮಾರಂಭದಲ್ಲಿ ಹೇಳಿದರು. ಭಾರತವು ರಚನಾತ್ಮಕವಾಗಿ ಮಾಡಿದ ಬಾಲಿ ಘೋಷಣೆಯನ್ನು ಜಿ20 ಸದಸ್ಯರು ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಪ್ರಬಲ ಪದಗಳಲ್ಲಿ ಖಂಡಿಸಿದರು. ಸ್ವಾಧೀನಪಡಿಸಿಕೊಂಡ ಉಕ್ರೇನ್ ಪ್ರದೇಶಗಳನ್ನು ರಷ್ಯಾ ಸಂಪೂರ್ಣವಾಗಿ ಬೇಷರತ್ತಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಮೇಲಿನ ರಷ್ಯಾದ ಮುಸುಕಿನ ಬೆದರಿಕೆಗಳನ್ನು ಸಹ ಇದು ಖಂಡಿಸಿತು, ರಷ್ಯಾದ ಕ್ರಮ ಸ್ವೀಕಾರಾರ್ಹವಲ್ಲ ಎಂದು ಶೃಂಗಸಭೆಯಲ್ಲಿ ನಿರ್ಣಯಕ್ಕೆ ಬರಲಾಯಿತು.

ಇಂದಿನ ಯುಗವು ಯುದ್ಧದಿಂದ ಕೂಡಿರಬಾರದು ಎಂದು ಘೋಷಣೆಯಲ್ಲಿ ಹೇಳಲಾಗಿದೆ, ಸೆಪ್ಟೆಂಬರ್‌ನಲ್ಲಿ ಸಮರ್‌ಕಂಡ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಭೇಟಿಯ ಸಂದರ್ಭದಲ್ಲಿ ಮೋದಿಯವರ ಹೇಳಿಕೆ ಸಭೆಯಲ್ಲಿ ಪ್ರತಿಧ್ವನಿಸಿತು. ಉಕ್ರೇನ್ ಯುದ್ಧದಲ್ಲಿ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡರೂ, ಘರ್ಷಣೆಗಳಲ್ಲಿ ಸಿಲುಕಿರುವ ನಾಗರಿಕರ ರಕ್ಷಣೆ ಸೇರಿದಂತೆ ಅಂತರಾಷ್ಟ್ರೀಯ ಕಾನೂನಿಗೆ ಬದ್ಧರಾಗಿರಬೇಕು ಎಂದು ಒತ್ತಿಹೇಳಿತು.

ಮೊನ್ನೆ ಶೃಂಗಸಭೆ ಆರಂಭದ ದಿನ ಡಿಜಿಟಲ್ ರೂಪಾಂತರದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಾಗತಿಕ ಬಡತನದ ವಿರುದ್ಧ ಹೋರಾಡಲು ಸಹಾಯವಾಗಬಹುದು. ಮುಂದಿನ 10 ವರ್ಷಗಳಲ್ಲಿ ನಾವು ಪ್ರತಿ ಮನುಷ್ಯನ ಜೀವನದಲ್ಲಿ ಡಿಜಿಟಲ್ ರೂಪಾಂತರವನ್ನು ತರುತ್ತೇವೆ ಎಂದು ನಾವು ಒಟ್ಟಾಗಿ ಪ್ರತಿಜ್ಞೆ ಮಾಡೋಣವೇ, ಇದರಿಂದ ವಿಶ್ವದ ಯಾವುದೇ ವ್ಯಕ್ತಿ ಡಿಜಿಟಲ್ ತಂತ್ರಜ್ಞಾನದ ಪ್ರಯೋಜನಗಳಿಂದ ವಂಚಿತರಾಗುವುದಿಲ್ಲ ಎಂದು ಮೋದಿ ಹೇಳಿದರು.

ಜಿ 20 ಸಭೆಯ ಹೊರತಾಗಿ, ಸಭೆಯ ಬದಿಯಲ್ಲಿ ಮೋದಿ ಅವರು ಆರು ರಾಷ್ಟ್ರಗಳ ಮುಖ್ಯಸ್ಥರಾದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಇಟಾಲಿಯನ್ ಪಿಎಂ ಜಾರ್ಜಿಯಾ ಮೆಲೋನಿ, ಸಿಂಗಾಪುರದ ಪಿಎಂ ಲೀ ಸಿಯೆನ್ ಲೂಂಗ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಜೊತೆ ನಡೆಸಿದ ದ್ವಿಪಕ್ಷೀಯ ಸಭೆಯ ವರದಿಗಳು ಸೋರಿಕೆಯಾಗಿವೆ ಎಂದು ಕೇಳಿಬಂದಿದ್ದು, ಉದ್ರೇಕಕೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ , ನಾವು ಚರ್ಚಿಸುವ ಪ್ರತಿಯೊಂದೂ ಪತ್ರಿಕೆಗೆ ಸೋರಿಕೆಯಾಗಿದೆ, ಅದು ಸೂಕ್ತವಲ್ಲ ಎಂದು  ಹೇಳಿದ್ದಾರೆ. ಅದಕ್ಕೆ ಟ್ರೂಡೊ ಪ್ರತಿಕ್ರಿಯಿಸಿ, ನಾವು ಮುಕ್ತ ಸ್ಪಷ್ಟ ಮಾತುಕತೆ ಮೇಲೆ ನಂಬಿಕೆ ಹೊಂದಿದ್ದೇವೆ , ಪರಿಸ್ಥಿತಿಗಳನ್ನು ಗಮನಿಸೋಣ ಎಂದಿದ್ದಾರೆ. 

ಯುಕೆ, ಭಾರತದ ಬಾಗಿಲಿಗೆ 3 ಸಾವಿರ ವೀಸಾಗಳು 
ಬ್ರಿಟನ್ ಬುಧವಾರ ಯುಕೆ-ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಸ್ಕೀಮ್‌ನ ಅಡಿಯಲ್ಲಿ 18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆಗೆ ಬರಲು ಮತ್ತು ಎರಡು ವರ್ಷಗಳವರೆಗೆ ಕೆಲಸ ಮಾಡಲು ಯುಕೆ ವಾರ್ಷಿಕವಾಗಿ 3,000 ವೀಸಾಗಳನ್ನು ನೀಡುತ್ತದೆ. ಈ ಯೋಜನೆಯು ಪರಸ್ಪರ ಇರುತ್ತದೆ. ಸುನಕ್ ಅವರೊಂದಿಗೆ ಮೋದಿ ನಡೆಸಿದ ಮೊದಲ ದ್ವಿಪಕ್ಷೀಯ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com