ಮಧ್ಯಪ್ರದೇಶದಲ್ಲಿ ಭೀಕರ ಎನ್ಕೌಂಟರ್: ಇಬ್ಬರು ನಕ್ಸಲರ ಸಾವು, ಕಾರ್ಯಾಚರಣೆ ಮುಂದುವರಿಕೆ

ಮಧ್ಯಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಭೀಕರ ಎನ್ಕೌಂಟರ್ ಆರಂಭವಾಗಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಕ್ಸಲ್ ಎನ್ ಕೌಂಟರ್
ನಕ್ಸಲ್ ಎನ್ ಕೌಂಟರ್

ಮಂಡ್ಲಾ: ಮಧ್ಯಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಭೀಕರ ಎನ್ಕೌಂಟರ್ ಆರಂಭವಾಗಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದ ಮಂಡ್ಲಾ ಮತ್ತು ಬಾಲಾಘಾಟ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಬುಧವಾರ ಹಾಕ್ ಫೋರ್ಸ್ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮಂಡ್ಲಾ ಮತ್ತು ಬಾಲಾಘಾಟ್ ಜಿಲ್ಲೆಯ ಜಂಟಿ ಹಾಕ್ ಫೋರ್ಸ್ ತಂಡವು ಬುಧವಾರ ಬೆಳಿಗ್ಗೆ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಬಾಲಘಾಟ್ ಜಿಲ್ಲೆಯ ಗರ್ಹಿ ಪ್ರದೇಶ ಮತ್ತು ಮಂಡ್ಲಾ ಜಿಲ್ಲೆಯ ಮೋತಿನಾಳದ ಸುಪ್ಖಾರ್ ಪ್ರದೇಶದ ನಡುವೆ ಎನ್‌ಕೌಂಟರ್ ಸಂಭವಿಸಿದೆ" ಎಂದು ಮಂಡ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ( ಎಎಸ್ಪಿ), ಗಜೇಂದ್ರ ಸಿಂಗ್ ತಿಳಿಸಿದರು.

"ಇಬ್ಬರು ನಕ್ಸಲರನ್ನು ಇಲ್ಲಿಯವರೆಗೆ ಗುಂಡಿಕ್ಕಿ ಕೊಂದಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ" ಎಂದು ಎಎಸ್ಪಿ ಸಿಂಗ್ ಹೇಳಿದರು, ಮೃತ ನಕ್ಸಲರು ಕನ್ಹಾ ಭೋರಮ್‌ದೇವ್ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಅವರ ಚಲನವಲನದ ಬಗ್ಗೆ ಹಾಕ್‌ಫೋರ್ಸ್ ತಂಡವು ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com