ದೆಹಲಿ: ಕಸದ ತೊಟ್ಟಿಯಲ್ಲಿ ಎಸೆಯಲಾಗಿದ್ದ ಗಂಟೆಗಳ ಹಿಂದಷ್ಟೇ ಜನಿಸಿದ ನವಜಾತ ಹೆಣ್ಣು ಮಗುವಿನ ರಕ್ಷಣೆ

ದೆಹಲಿಯ ರಾಜೋಕ್ರಿ ಗ್ರಾಮದಲ್ಲಿ ಕಸದ ತೊಟ್ಟಿಯಲ್ಲಿ ಎಸೆಯಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಶನಿವಾರ ರಕ್ಷಿಸಲಾಗಿದೆ. ದಾರಿಹೋಕರು ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ನಗರದ ರಾಜೋಕ್ರಿ ಗ್ರಾಮದಲ್ಲಿ ಕಸದ ತೊಟ್ಟಿಯಲ್ಲಿ ಎಸೆಯಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಶನಿವಾರ ರಕ್ಷಿಸಲಾಗಿದೆ. ದಾರಿಹೋಕರು ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಸಂಜೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಗು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿತ್ತು ಎಂದು ಹುಡುಗಿಯನ್ನು ರಕ್ಷಿಸಿದ ಪೊಲೀಸ್ ಪೇದೆಯೊಬ್ಬರು ತಿಳಿಸಿದ್ದಾರೆ.

ಮಗುವನ್ನು ವಸಂತ್ ಕುಂಜ್‌ನ ಫೋರ್ಟಿಸ್ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

'ಪ್ರಾಥಮಿಕ ಪರೀಕ್ಷೆಯಲ್ಲಿ, ಮಗು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಜನಿಸಿದೆ ಮತ್ತು ಆಕೆಯ ದೇಹದ ತೂಕವು ಕೇವಲ 2 ಕಿಲೋಗ್ರಾಂಗಳಾಗಿದ್ದು, ನವಜಾತ ಶಿಶುವಿನ ಸಾಮಾನ್ಯ ತೂಕಕ್ಕಿಂತ ಕಡಿಮೆಯಾಗಿದೆ ಆಸ್ಪತ್ರೆಯ ನಿರ್ದೇಶಕ ಮತ್ತು ಪೀಡಿಯಾಟ್ರಿಕ್ಸ್ ಡಾ. ರಾಹುಲ್ ನಾಗ್ಪಾಲ್ ಹೇಳಿದರು.

ನಿರಂತರ ಮಳೆಯಿಂದಾಗಿ ಮಗುವಿನ ದೇಹದ ಉಷ್ಣತೆ 33 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಸಾಮಾನ್ಯ 36.4 ಡಿಗ್ರಿಗಿಂತ ಕಡಿಮೆಯಾಗಿದೆ. ನಮ್ಮ ತಂಡವು ಆಕೆಗೆ ಚಿಕಿತ್ಸೆ ನೀಡುತ್ತಿದ್ದು, ಸ್ವಚ್ಛಗೊಳಿಸಿದ ನಂತರ ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಲಾಗಿದೆ. ನಂತರ ಆಕೆಯನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು ಎಂದು ನಾಗ್ಪಾಲ್ ಹೇಳಿದರು.

ಆದಾಗ್ಯೂ, ಮಗು ತನ್ನ ಉಳಿವಿಗಾಗಿ ಹೋರಾಡುತ್ತಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಘಟನೆ ವರದಿಯಾಗಿದೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ರಾಜ್ಕೋರಿಯ ಸ್ಥಳೀಯರಿಂದ ನಮಗೆ ಕರೆ ಬಂದಿತು. ಅವರು ತಮ್ಮ ಮನೆಯ ಸಮೀಪವಿರುವ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿದೆ ಎಂದು ತಿಳಿಸಿದರು. ಭಾರಿ ಮಳೆಯಾಗುತ್ತಿದ್ದರಿಂದ ಪೊಲೀಸರು ಮಗುವನ್ನು ಸ್ಥಳೀಯರ ಮನೆಗೆ ಕರೆದೊಯ್ದಿದ್ದಾರೆ. ನಂತರ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೌತ್ ವೆಸ್ಟ್‌ನ ಡಿಸಿಪಿ ಮನೋಜ್ ಸಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com