ಶಾಲೆಯಲ್ಲಿ ನವಜಾತ ಶಿಶುವಿನ ಶವ ಪತ್ತೆ; 11ನೇ ತರಗತಿ ಬಾಲಕಿಗೆ ಹೆರಿಗೆಯಾಗಿದೆ ಎಂದ ಪೊಲೀಸರು!
ಚಿದಂಬರಂ ಸಮೀಪದ ಸರ್ಕಾರಿ ಶಾಲೆಯ ಶೌಚಾಲಯದ ಬಳಿ ಗುರುವಾರ ನವಜಾತ ಗಂಡು ಮಗುವಿನ ಶವ ಪತ್ತೆಯಾಗಿದ್ದು, ಅದೇ ಶಾಲೆಯಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
Published: 05th September 2022 10:58 AM | Last Updated: 05th September 2022 02:33 PM | A+A A-

ಪ್ರಾತಿನಿಧಿಕ ಚಿತ್ರ
ಕಡಲೂರು: ಚಿದಂಬರಂ ಸಮೀಪದ ಸರ್ಕಾರಿ ಶಾಲೆಯ ಶೌಚಾಲಯದ ಬಳಿ ಗುರುವಾರ ನವಜಾತ ಗಂಡು ಮಗುವಿನ ಶವ ಪತ್ತೆಯಾಗಿದ್ದು, ಅದೇ ಶಾಲೆಯಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಪೊಲೀಸರು 16 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಆಕೆಯು ಗರ್ಭ ಧರಿಸಲು ಕಾರಣವಾದ ವ್ಯಕ್ತಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಗುರುವಾರ ಸಂಜೆ ಶಾಲೆಯ ಅಧಿಕಾರಿಗಳು ಶೌಚಾಲಯದ ಬಳಿ ಮಗುವಿನ ಶವವನ್ನು ಕಂಡು ಭುವನಗಿರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
'ನಾವು ಶುಕ್ರವಾರ ಹುಡುಗಿ ಯಾರೆಂದು ಪತ್ತೆಹಚ್ಚಿದ್ದೇವೆ ಮತ್ತು ವಿಚಾರಣೆಯ ಸಮಯದಲ್ಲಿ ಆಕೆ ತಾನೇ ಜನ್ಮ ನೀಡಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾಳೆ' ಎಂದು ತನಿಖೆಯ ಗೌಪ್ಯ ಪೊಲೀಸ್ ಮೂಲವು ತಿಳಿಸಿದೆ.
ಇದನ್ನೂ ಓದಿ: ಆಸ್ಪತ್ರೆ ಸಿಬ್ಬಂದಿ ಎಡವಟ್ಟು: ನವಜಾತ ಶಿಶುವಿನ ತಲೆಯನ್ನು ತಾಯಿಯ ಗರ್ಭದಲ್ಲಿಯೇ ಬಿಟ್ಟ ವೈದ್ಯಕೀಯ ಸಿಬ್ಬಂದಿ!
ಗುರುವಾರ ತರಗತಿಗೆ ಹಾಜರಾಗುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡು ಶೌಚಾಲಯಕ್ಕೆ ತೆರಳಿದ ವೇಳೆ ಮಗುವಿಗೆ ಜನ್ಮ ನೀಡಿದ್ದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
'ಇದು ಸತ್ತ ಮಗುವಿಗೆ ಹೆರಿಗೆ ಎಂದು ಆಕೆ ಹೇಳಿದ್ದರೂ, ಹೆರಿಗೆ ಸಮಯದಲ್ಲಿ ಆಕೆಗೆ ಸಹಾಯ ಮಾಡದ ಕಾರಣ ಮಗು ಸಾವನ್ನಪ್ಪಿರಬಹುದು ಎಂದು ನಾವು ಶಂಕಿಸಿದ್ದೇವೆ. ಆರಂಭಿಕ ಹೇಳಿಕೆಯಂತೆ ಬಾಲಕಿ ಪೆನ್ನನ್ನು ಬಳಸಿ ಹೊಕ್ಕುಳಬಳ್ಳಿಯನ್ನು ಕತ್ತರಿಸಿ ಮತ್ತೆ ತರಗತಿಗೆ ಬಂದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕೆ ಗರ್ಭಿಣಿ ಎಂಬುದು ಕುಟುಂಬದ ಯಾರಿಗೂ ತಿಳಿದಿಲ್ಲ. ಶನಿವಾರ ಪೊಲೀಸರು ಆಕೆಯ ಸಂಬಂಧಿಕರು ಮತ್ತು ಗ್ರಾಮಸ್ಥರು ಸೇರಿದಂತೆ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.