ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಜಸ್ತಾನ: ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ, ವಿಫಲಳಾದ ಸೊಸೆಗೆ ಚಿತ್ರಹಿಂಸೆ; ಪೋಷಕರಿಗೆ 10 ಲಕ್ಷ ರೂ. ದಂಡ

ರಾಜಸ್ಥಾನದ ಭಿಲ್ವಾರಾದಲ್ಲಿ 24 ವರ್ಷದ ಮಹಿಳೆಯೊಬ್ಬರಿಗೆ ಒತ್ತಾಯಪೂರ್ವಕವಾಗಿ 'ಕನ್ಯತ್ವ ಪರೀಕ್ಷೆ'ಗೆ ಒಳಪಡಿಸಲಾಗಿದ್ದು ಪರೀಕ್ಷೆಯಲ್ಲಿ ವಿಫಲಳಾದ ಸೊಸೆಗೆ ಅತ್ತೆ-ಮಾವ ಚಿತ್ರಹಿಂಸೆ ನೀಡಿದ್ದಾರೆ.

ಜೈಪುರ: ರಾಜಸ್ಥಾನದ ಭಿಲ್ವಾರಾದಲ್ಲಿ 24 ವರ್ಷದ ಮಹಿಳೆಯೊಬ್ಬರಿಗೆ ಒತ್ತಾಯಪೂರ್ವಕವಾಗಿ 'ಕನ್ಯತ್ವ ಪರೀಕ್ಷೆ'ಗೆ ಒಳಪಡಿಸಲಾಗಿದ್ದು ಪರೀಕ್ಷೆಯಲ್ಲಿ ವಿಫಲಳಾದ ಸೊಸೆಗೆ ಅತ್ತೆ-ಮಾವ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ ಪಂಚಾಯ್ತಿ ಮುಖಂಡರ ಮೂಲಕ ಮಹಿಳೆಯ ಕುಟುಂಬಕ್ಕೆ 10 ಲಕ್ಷ ರೂ. ದಂಡ ವಿಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

ಮೇ 11ರಂದು ಭಿಲ್ವಾರಾದಲ್ಲಿ ತನ್ನ ಮದುವೆಯ ಮೊದಲ ರಾತ್ರಿ ಕನ್ಯತ್ವ 'ಪರೀಕ್ಷೆ'ಗೆ ಒತ್ತಾಯಿಸಿದ್ದರು ಎಂದು ಮಹಿಳೆ ಆರೋಪಿಸಿ, ತನ್ನ ಅತ್ತೆಯ ವಿರುದ್ಧ ದೂರು ನೀಡಿದ್ದಾರೆ.

ಎಫ್‌ಐಆರ್‌ ಪ್ರಕಾರ, ಆಕೆ 'ಪರೀಕ್ಷೆಯಲ್ಲಿ' ವಿಫಲಳಾದ ನಂತರ ತನ್ನ ಪತಿ ಮತ್ತು ಆತನ ಕುಟುಂಬದವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮೇ 31ರಂದು ಸ್ಥಳೀಯ ದೇವಸ್ಥಾನದಲ್ಲಿ ಖಾಪ್ ಪಂಚಾಯತಿ ಮೂಲಕ ತನ್ನ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಕೇಳಿದ್ದಾರೆ.

ಮದುವೆಗೂ ಮುನ್ನ ತನ್ನ ನೆರೆಹೊರೆಯವರಿಂದ ಅತ್ಯಾಚಾರವೆಸಗಿರುವುದಾಗಿ ಮಹಿಳೆ ತನ್ನ ಅತ್ತೆಯಂದಿರಿಗೆ ತಿಳಿಸಿದ್ದಾಳೆ. ಈ ಸಂಬಂಧ ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗೋರ್ ಸ್ಟೇಷನ್ ಹೌಸ್ ಆಫೀಸ್ ಆಯೂಬ್ ಖಾನ್, ಈ ಪ್ರಕರಣ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ನಂತರ ಪೊಲೀಸರು ತನಿಖೆ ನಡೆಸಿದ್ದು ಶನಿವಾರ ಆಕೆಯ ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 498ಎ (ವರದಕ್ಷಿಣೆ), 384 (ಸುಲಿಗೆ), 509 (ಮಹಿಳೆಯರ ಮಾನಹಾನಿ) ಮತ್ತು 120ಬಿ (ಅಪರಾಧ ಸಂಚು) ಅಡಿಯಲ್ಲಿ ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com