ಸಿಸಿಟಿವಿಗೆ ಕಪ್ಪು ಬಣ್ಣ ಬಳಿದು ಎಟಿಎಂ ಸ್ಫೋಟಿಸಿದ ದರೋಡೆಕೋರರು, ಹಣ ದೋಚಿ ಪರಾರಿ

ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.
ಸ್ಫೋಟಗೊಂಡಿರುವ ಎಟಿಎಂ
ಸ್ಫೋಟಗೊಂಡಿರುವ ಎಟಿಎಂ

ಮುಂಬೈ: ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.

ಸ್ಫೋಟಕ್ಕೂ ಮುನ್ನ ದರೋಡೆಕೋರರು ಎಟಿಎಂ ಕ್ಯಾಬಿನ್‌ನ ಒಳಗಿದ್ದ ಭದ್ರತಾ ಸಿಸಿಟಿವಿ ಕ್ಯಾಮೆರಾಗೆ ಕಪ್ಪು ಬಣ್ಣವನ್ನು ಎರಚಿದ್ದಾರೆ.

ಕ್ಯಾಬಿನ್ ಒಳಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎರಡು ಎಟಿಎಂ ಯಂತ್ರಗಳಿದ್ದು, ಅವುಗಳಲ್ಲಿ ಒಂದು ಸ್ಫೋಟದಲ್ಲಿ ಸಂಪೂರ್ಣ ನಾಶವಾಗಿದೆ. ಯಂತ್ರದಲ್ಲಿ ಎಷ್ಟು ನಗದು ಇತ್ತು ಮತ್ತು ಕಳ್ಳರು ಎಷ್ಟು ಹಣವನ್ನು ಕದ್ದೊಯ್ದಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ.

ಹೀಗಾಗಿ, ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದಾಗ್ಯೂ, ಸ್ಫೋಟಕ್ಕೆ ಮುಂಚಿನ ದೃಶ್ಯಾವಳಿಗಳ ಪ್ರಕಾರ, ಘಟನೆಯು ಬುಧವಾರ ಮುಂಜಾನೆ 2:30 ರ ಸುಮಾರಿಗೆ ಸಂಭವಿಸಿದೆ ಎಂದು ಊಹಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ ಜಿಲ್ಲೆಯ ಕರಡ ಸಮೀಪದ ವಿದ್ಯಾನಗರದಲ್ಲಿ ಇದೇ ರೀತಿ ದರೋಡೆ ಯತ್ನ ನಡೆದಿತ್ತು. ಆದರೆ, ಸ್ಫೋಟಕ್ಕೂ ಮುನ್ನವೇ ದರೋಡೆಕೋರರನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com