ಮದುವೆ ಕುರಿತಾದ ಮಹಿಳೆಯೊಬ್ಬರ ಮಾತುಗಳಿಂದ ರಾಹುಲ್ ಗಾಂಧಿ ಸಂತಸ: ತಮಿಳುನಾಡಿನ ಚಿತ್ರಗಳನ್ನು ಹಂಚಿಕೊಂಡ ಜೈರಾಮ್ ರಮೇಶ್

ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ 3ನೇ ದಿನದಂದು ತಮಿಳುನಾಡಿನ ಮಹಿಳಾ ನರೇಗಾ ಕೂಲಿಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸುತ್ತಿರುವ ಚಿತ್ರಗಳನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ ಹಂಚಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ರಾಹುಲ್ ಗಾಂಧಿ
ತಮಿಳುನಾಡಿನಲ್ಲಿ ರಾಹುಲ್ ಗಾಂಧಿ

ಚೆನ್ನೈ: ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ 3ನೇ ದಿನದಂದು ತಮಿಳುನಾಡಿನ ಮಹಿಳಾ ನರೇಗಾ ಕೂಲಿ ಕಾರ್ಮಿಕರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಾದ ನಡೆಸುತ್ತಿರುವ ಚಿತ್ರಗಳನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ ಹಂಚಿಕೊಂಡಿದ್ದಾರೆ. ಒಬ್ಬ ಮಹಿಳೆ ತನ್ನ ಮದುವೆಯ ಬಗ್ಗೆ ಮಾತನಾಡುತ್ತಿದ್ದಾಗ ರಾಹುಲ್ ಸಂತೋಷಗೊಂಡವರಂತೆ ಕಾಣುತ್ತಿದ್ದರು ಎಂದು ಅವರು ಹೇಳಿದರು.

ಈ ಕುರಿತು ರಮೇಶ್ ಅವರು ಟ್ವಿಟರ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, 'ಭಾರತ್ ಜೋಡೋ ಯಾತ್ರೆಯ 3 ನೇ ದಿನದ ಉಲ್ಲಾಸದ ಕ್ಷಣ' ಎಂದು ಶೀರ್ಷಿಕೆ ನೀಡಿದ್ದಾರೆ. ರಾಹುಲ್ ಗಾಂಧಿಯವರು ತಮಿಳುನಾಡನ್ನು ಪ್ರೀತಿಸುತ್ತಿದ್ದಾರೆಂದು ನನಗೆ ತಿಳಿದಿದೆ ಮತ್ತು ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾಗಿ ರಮೇಶ್ ತಿಳಿಸಿದ್ದಾರೆ.

'ರಾಹುಲ್ ಗಾಂಧಿ ಹೆಚ್ಚು ಸಂತೋಷದಿಂದಿರುವಂತೆ ಕಾಣುತ್ತಾರೆ ಮತ್ತು ಫೋಟೊ ಅದನ್ನು ತೋರಿಸುತ್ತದೆ' ಎಂದು ರಮೇಶ್ ಹೇಳಿದ್ದಾರೆ.

ಇಬ್ಬರು ನಾಯಕರು ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇದು ತಮಿಳುನಾಡಿನ ಕನ್ಯಾಕುಮಾರಿಯಿಂದ 12 ರಾಜ್ಯಗಳಲ್ಲಿ ಸಂಚರಿಸಿ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳುತ್ತದೆ.

ಈ ಹಿಂದೆ 'ತಾನು ಯಾತ್ರೆಯಲ್ಲಿ ಭಾಗವಹಿಸುವುದು ಕೇವಲ ರಾಜಕೀಯ ನಿಲುವು ಮಾತ್ರವಲ್ಲ, ವೈಯಕ್ತಿಕ ಪ್ರಯಾಣವೂ ಆಗಿದೆ. ಯಾತ್ರೆಯ ಮೂಲಕ ತನ್ನ ಬಗ್ಗೆ ಮತ್ತು 'ಸುಂದರ ದೇಶ'ದ ಬಗ್ಗೆ ತಿಳಿವಳಿಕೆಯನ್ನು ಪಡೆಯಲು ಬಯಸುತ್ತೇನೆ. ಎರಡರಿಂದ ಮೂರು ತಿಂಗಳ ನಂತರ, ನಾನು ಇನ್ನು ಸ್ವಲ್ಪ ಬುದ್ಧಿವಂತನಾಗುತ್ತೇನೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

ಕೇರಳದ ಯಾತ್ರೆಗೆ ರಾಹುಲ್ ಗಾಂಧಿ ಭಾನುವಾರ ಚಾಲನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com