10 ವರ್ಷಗಳಲ್ಲಿ ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದಿರುವುದು 'ಅದ್ಭುತ-ನಂಬಲಸಾಧ್ಯ' ಸಾಧನೆ: ಅರವಿಂದ್ ಕೇಜ್ರಿವಾಲ್

ದೇಶದ ಪ್ರಗತಿಯನ್ನು ತಡೆಯಲು ಬಯಸುವ ಎಲ್ಲಾ 'ದೇಶವಿರೋಧಿ ಶಕ್ತಿಗಳು' ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧವಾಗಿವೆ ಎಂದು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಇಲ್ಲಿ ಹೇಳಿದರು.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೇಶದ ಪ್ರಗತಿಯನ್ನು ತಡೆಯಲು ಬಯಸುವ ಎಲ್ಲಾ 'ದೇಶವಿರೋಧಿ ಶಕ್ತಿಗಳು' ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧವಾಗಿವೆ ಎಂದು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಇಲ್ಲಿ ಹೇಳಿದರು.

10 ವರ್ಷಗಳ ಅಲ್ಪಾವಧಿಯಲ್ಲಿ ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆದುಕೊಂಡಿರುವುದು 'ಅದ್ಭುತ ಮತ್ತು ನಂಬಲು ಅಸಾಧ್ಯವಾದ' ಸಾಧನೆ ಎಂದು ಬಣ್ಣಿಸಿದ ಕೇಜ್ರಿವಾಲ್, ಇದರೊಂದಿಗೆ ದೊಡ್ಡ ಜವಾಬ್ದಾರಿಯು ಸಹ ಬರುತ್ತದೆ ಎಂದು ಹೇಳಿದರು.

ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡಲು ಜನರು ಎಎಪಿಗೆ ಸೇರಬೇಕೆಂದು ಒತ್ತಾಯಿಸಿದ ಅವರು, 'ದೇಶದ ಪ್ರಗತಿಯನ್ನು ತಡೆಯಲು ಬಯಸುವ ಎಲ್ಲಾ ದೇಶವಿರೋಧಿ ಶಕ್ತಿಗಳು ಎಎಪಿಗೆ ವಿರುದ್ಧವಾಗಿವೆ. ಆದರೆ, ಸರ್ವಶಕ್ತನು ನಮ್ಮೊಂದಿಗಿದ್ದಾನೆ' ಎಂದು ದೆಹಲಿ ಮುಖ್ಯಮಂತ್ರಿ ಇಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಭಾಷಣ ಮಾಡಿದರು.

ಇದು ಎಎಪಿಯ ಸಿದ್ಧಾಂತವನ್ನು ನೆನಪಿಸಿಕೊಳ್ಳುವ ಸಮಯ. ಎಎಪಿಯ ಸಿದ್ಧಾಂತವು ಕಠಿಣ ಪ್ರಾಮಾಣಿಕತೆ, ದೇಶಭಕ್ತಿ ಮತ್ತು ಮಾನವೀಯತೆ ಎಂಬ ಮೂರು ಸ್ತಂಭಗಳನ್ನು ಆಧರಿಸಿದೆ. ಭಾರತವನ್ನು ವಿಶ್ವದ ನಂಬರ್ ಒನ್ ರಾಷ್ಟ್ರವನ್ನಾಗಿ ಮಾಡುವುದು ಪಕ್ಷದ ಗುರಿಯಾಗಿದೆ ಎಂದು ಹೇಳಿದರು.

ಎಎಪಿಯ ಬೆಳವಣಿಗೆಗೆ ಕೊಡುಗೆ ನೀಡಿದ ಮತ್ತು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಸಾಧಿಸಲು ಸಹಾಯ ಮಾಡಿದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸದ್ಯ ಜೈಲಿನಲ್ಲಿರುವ ತಮ್ಮ ಪಕ್ಷದ ಸಹೋದ್ಯೋಗಿಗಳಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ಸ್ಮರಿಸಿದರು.

ಅಗತ್ಯವಿದ್ದರೆ ಜೈಲಿಗೆ ಹೋಗಲು ಸಿದ್ಧರಾಗಿರಿ ಎಂದು ಎಎಪಿ ಸ್ವಯಂಸೇವಕರಿಗೆ ಹೇಳಿದ ಕೇಜ್ರಿವಾಲ್, ಇದಕ್ಕೆ ಹೆದರುವವರು ಪಕ್ಷ ತೊರೆಯಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com