ನಕ್ಸಲರ ಕ್ಯಾಂಪ್ ನಲ್ಲಿ ಕಾಂಡೋಮ್ ಪತ್ತೆ
ನಕ್ಸಲರ ಕ್ಯಾಂಪ್ ನಲ್ಲಿ ಕಾಂಡೋಮ್ ಪತ್ತೆ

ಒಡಿಶಾ: ನಕ್ಸಲರ ಕ್ಯಾಂಪ್ ನಲ್ಲಿ ಕಾಂಡೋಮ್, ಗರ್ಭ ನಿರೋಧಕ, ಗರ್ಭಧಾರಣೆ ಪರೀಕ್ಷಾ ಕಿಟ್‌ಗಳು ಪತ್ತೆ

ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ಮಾವೋವಾದಿಗಳ ಅಡಗುದಾಣಗಳಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Published on

ಭುವನೇಶ್ವರ: ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ಮಾವೋವಾದಿಗಳ ಅಡಗುದಾಣಗಳಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾವೋವಾದಿಗಳ ಅಡಗುದಾಣಗಳ ಮೇಲೆ ಗುರುವಾರ ದಾಳಿ ನಡೆದಿದ್ದು, ಕಾರ್ಯಾಚರಣೆಯ ಮಾಹಿತಿಯನ್ನು ನಬರಂಗಪುರ ಪೊಲೀಸ್ ಅಧೀಕ್ಷಕರಾದ ಎಸ್ ಸುಶ್ರೀ ಹಂಚಿಕೊಂಡಿದ್ದು, ‘ಮಂಗಳವಾರ ರಾತ್ರಿ ಎನ್‌ಕೌಂಟರ್ ಕೂಡ ನಡೆದಿದೆ. ಒಡಿಶಾ ಪೊಲೀಸ್‌ನ ವಿಶೇಷ ಕಾರ್ಯಪಡೆಯು (ಎಸ್‌ಒಜಿ) ಛತ್ತೀಸ್‌ಗಢದ ಗಡಿಯಲ್ಲಿರುವ ನಬರಂಗಪುರ ಜಿಲ್ಲೆಯ ರಾಯ್ಘರ್ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿತು. 

ಸಿಪಿಐ ಮಾವೋವಾದಿಗಳಾದ ಮುರಳಿ (ಕೇಂದ್ರ ಸಮಿತಿ ಸದಸ್ಯ), ಕಾರ್ತಿಕ್, ಗುಡ್ಡು, ಆಕಾಶ್, ನಂದಲ್ ಮತ್ತು ಇತರರು ಸೇರಿದಂತೆ ಸುಮಾರು 20 ರಿಂದ 25 ಶಸ್ತ್ರಸಜ್ಜಿತ ಕಾರ್ಯಕರ್ತರ ಗುಂಪನ್ನು ಬುಧವಾರ ಬೆಳಗ್ಗೆ 9.30ರ ಸುಮಾರಿಗೆ ಪೊಲೀಸರ ಕಾರ್ಯಾಚರಣೆ ತಂಡಗಳು ನಬರಂಪುರದ ಪೂರ್ವ ಭಾಗದ ಉದಾಂತಿ ಅಭಯಾರಣ್ಯದ ಸೈಬಿನ್ ಕಚಾರ್ ಗ್ರಾಮದಲ್ಲಿ ಗಮನಿಸಿದ್ದವು. ಪೊಲೀಸರನ್ನು ಗಮನಿಸಿದ ಕೂಡಲೇ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದರು. ರಕ್ಷಣೆಗಾಗಿ ಪೊಲೀಸರು ಮರು ದಾಳಿ ನಡೆಸಿದರು. ಸುಮಾರು ಅರ್ಧ ಗಂಟೆ ಕಾಲ ಗುಂಡಿನ ಚಕಮಕಿ ಮುಂದುವರೆಯಿತು. ದಟ್ಟಾರಣ್ಯದ ಲಾಭ ಪಡೆದ ಮಾವೋವಾದಿಗಳು ಶಿಬಿರದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ಹೇಳಿದರು.

ಮಾವೋವಾದಿ ಶಿಬಿರದಿಂದ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಶಿಬಿರದಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಗರ್ಭಧಾರಣೆಯ ಪರೀಕ್ಷೆಯ ಕಿಟ್‌ಗಳು ಸಿಕ್ಕಿವೆ. ಎರಡು ಬಂದೂಕುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಶಿಬಿರದಲ್ಲಿ ಮಾವೋವಾದಿಗಳ ಕರಪತ್ರಗಳು, ಬ್ಯಾನರ್‌ಗಳು, ಡಿಟೋನೇಟರ್‌ಗಳು ಮತ್ತು ಆಹಾರ ಪದಾರ್ಥಗಳು ಸಹ ಪತ್ತೆಯಾಗಿವೆ. ಮಾವೋವಾದಿ ಶಿಬಿರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಂತರರಾಜ್ಯ ಗಡಿ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳು ಈ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದಾರೆ ಎಂದು ಅವರು ತಿಳಿಸಿದರು.

ಏತನ್ಮಧ್ಯೆ, ಛತ್ತೀಸ್‌ಗಢದ ಗಡಿಯಲ್ಲಿರುವ ಮಲ್ಕಂಗಿರಿ, ಕೊರಾಪುಟ್ ಮತ್ತು ನಬರಂಗಪುರ ಜಿಲ್ಲೆಗಳಲ್ಲಿ ಒಡಿಶಾ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com