ಚತ್ತಿಸ್ ಗಢದ ದಾಂತೇವಾಡದಲ್ಲಿ ನಕ್ಸಲ್ ಅಟ್ಟಹಾಸ: 10 ಪೊಲೀಸ್ ಸಿಬ್ಬಂದಿ, ಚಾಲಕನ ಹತ್ಯೆ

ಚತ್ತೀಸ್ ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್ ಸ್ಫೋಟದಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಗಳು, ಓರ್ವ ಚಾಲಕ ಮೃತಪಟ್ಟಿರುವ ಘಟನೆ ಏ.26 ರಂದು ವರದಿಯಾಗಿದೆ. 
ನಕ್ಸಲರು
ನಕ್ಸಲರು
Updated on

ನವದೆಹಲಿ: ಚತ್ತೀಸ್ ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್ ಸ್ಫೋಟದಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಗಳು, ಓರ್ವ ಚಾಲಕ ಮೃತಪಟ್ಟಿರುವ ಘಟನೆ ಏ.26 ರಂದು ವರದಿಯಾಗಿದೆ. 

ಅರನ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಪೊಲೀಸ್ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ ಜಿ) ಗಳ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಕ್ತಾಯಗೊಳಿಸಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಯ್ ಪುರದಿಂದ 450 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಭದ್ರತಾ ಪಡೆಗಳು ಸಂಚರಿಸುತ್ತಿದ್ದ ಮಿನಿ ಗೂಡ್ಸ್ ವಾಹನವನ್ನು ನಕ್ಸಲರು ಸುಧಾರಿತ ಸ್ಫೋಟ ಸಾಧನದ ಮೂಲಕ ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com