ಉತ್ತರ ಪ್ರದೇಶ: ಲೈಂಗಿಕ ಕಿರುಕುಳ, ಸ್ಯಾನಿಟೈಸರ್ ಸೇವನೆಗೆ ಒತ್ತಾಯ, 16 ವರ್ಷದ ಬಾಲಕಿ ಸಾವು!

ಕೆಲವು ಯುವಕರು ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 16 ವರ್ಷದ ಬಾಲಕಿಯೊಬ್ಬಳಿಗೆ ಬಲವಂತವಾಗಿ ಸ್ಯಾನಿಟೈಸರ್ ಕುಡಿಯುವಂತೆ ಒತ್ತಾಯಿಸಿದ್ದು, ಆಕೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಉತ್ತರ ಪ್ರದೇಶ: ಕೆಲವು ಯುವಕರು ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 16 ವರ್ಷದ ಬಾಲಕಿಯೊಬ್ಬಳಿಗೆ ಬಲವಂತವಾಗಿ ಸ್ಯಾನಿಟೈಸರ್ ಕುಡಿಯುವಂತೆ ಒತ್ತಾಯಿಸಿದ್ದು, ಆಕೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

 ಜುಲೈ 27 ರಂದು 11 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿ ಉದೇಶ್ ರಾಥೋರ್ (21) ಆಕೆಯನ್ನು ತಡೆದು ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಕಿರುಕುಳದಿಂದ ತಪ್ಪಿಸಿಕೊಳ್ಳಲು  ಪ್ರಯತ್ನಿಸುತ್ತಿದ್ದ ವಿದ್ಯಾರ್ಥಿನಿಗೆ ರಾಥೋರ್ ಜೊತೆಗೆ ಮೂವರು ಸೇರಿ ಬಲವಂತದಿಂದ ಸ್ಯಾನಿಟೈಸರ್ ಕುಡಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ (ನಗರ) ರಾಹುಲ್ ಭಾಟಿ ಹೇಳಿದ್ದಾರೆ.

ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಸಂತ್ರಸ್ತೆಯ ಸಹೋದರಿನಿಗೂ ಆರೋಪಿಗಳು ಥಳಿಸಿದ್ದಾರೆ. ಅಲ್ಲದೇ, ಅವರು ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಅವರು ಹೇಳಿದರು. ಬಲವಂತವಾಗಿ ಸ್ಯಾನಿಟೈಸರ್ ಕುಡಿಸಲು ಮುಂದಾದ ನಂತರ, ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ಮರಣೋತ್ತರ ಪರೀಕ್ಷೆ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭಾಟಿಯಾ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com