ದಲಿತ ವ್ಯಕ್ತಿಗೆ Shoe ನೆಕ್ಕಲು ಒತ್ತಾಯಿಸಿದ ಆರೋಪ; ಕಾಂಗ್ರೆಸ್ ಶಾಸಕ ಗೋಪಾಲ್ ಮೀನಾ, 5 ಪೊಲೀಸರ ವಿರುದ್ಧ FIR

ದಲಿತ ವ್ಯಕ್ತಿಯೊಬ್ಬನಿಗೆ ಶೂ ನೆಕ್ಕುವಂತೆ ಒತ್ತಾಯಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಗೋಪಾಲ್ ಮೀನಾ ಮತ್ತು ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಜೈಪುರ: ದಲಿತ ವ್ಯಕ್ತಿಯೊಬ್ಬನಿಗೆ ಶೂ ನೆಕ್ಕುವಂತೆ ಒತ್ತಾಯಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಗೋಪಾಲ್ ಮೀನಾ ಮತ್ತು ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ತನ್ನ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಜೂನ್ 30 ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಎತ್ತಿಕೊಂಡು ಶಾಸಕರ ಶೂ ನೆಕ್ಕಲು ಒತ್ತಾಯಿಸಿದ ಸ್ಥಳಕ್ಕೆ ಕರೆದೊಯ್ದ ಘಟನೆಯ ನಂತರ ಸರ್ಕಲ್ ಆಫೀಸರ್ ಶಿವಕುಮಾರ್ ಭಾರದ್ವಾಜ್ ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ಈ ಘಟನೆ ಜೂನ್ 30 ರಂದು ಸಂಭವಿಸಿದ್ದು, ಸಂತ್ರಸ್ತ ಭಯದಿಂದ ಘಟನೆಯ ಬಗ್ಗೆ ಎಲ್ಲಿಯೂ ಹೇಳದೆ ಇದ್ದರು ಎಂದು ತಿಳಿಸಿದ್ದು, ಇದೀಗ ಪೊಲೀಸ್​ ಠಾಣೆಯಲ್ಲಿ ಜುಲೈ 27 ರಂದು ದೂರು ದಾಖಲಿಸಿದ್ದಾರೆ. ದೂರಿನಲ್ಲಿ, “ಜೂನ್ 30 ರಂದು ತಾನು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಪೊಲೀಸ್ ಅಧಿಕಾರಿಗಳು ಬಂದು ನನಗೆ ಥಳಿಸಿ, ಕೋಣೆಗೆ ಕರೆದೊಯ್ದರು. ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಶಿವಕುಮಾರ್ ಭಾರದ್ವಾಜ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಿದರು” ಎಂದು ತಿಳಿಸಿದ್ದಾರೆ.

ಇನ್ನು ತಮ್ಮ ವಿರುದ್ಧದ ಆರೋಪಗಳನ್ನು ಜಾಮ್ವಾ ರಾಮ್‌ಗಢದ ಕಾಂಗ್ರೆಸ್ ಶಾಸಕರಾಗಿರುವ ಗೋಪಾಲ್ ಮೀನಾ ತಳ್ಳಿ ಹಾಕಿದ್ದು,  ಆಸ್ತಿ ಸಂಬಂಧಿತ ವಿವಾದದಿಂದಾಗಿ ಅವರ ವಿರುದ್ಧ ನಕಲಿ ಆರೋಪಗಳನ್ನು ಮಾಡಲಾಗಿದೆ. ಇದು ನನ್ನ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಅಕ್ರಮ ಭೂಮಿ ಒತ್ತುವರಿ ವಿಚಾರದಲ್ಲಿ ನನಗೆ ಸಹಾಯ ಮಾಡಬೇಕೆಂದು ಕೆಲವರು ಬಯಸುತ್ತಿದ್ದಾರೆ. ಈ ಪ್ರಕರಣವನ್ನು ದಾಖಲಿಸಿದ ವ್ಯಕ್ತಿ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ದೂರು ದಾಖಲಾದಾಗಿನಿಂದ ತನಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾರೆ. ಈ ಪ್ರಕರಣವನ್ನು ಈಗ ಅಪರಾಧ ವಿಭಾಗ, ಅಪರಾಧ ತನಿಖಾ ಇಲಾಖೆ (ಸಿಬಿ-ಸಿಐಡಿ) ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com