ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ- ಷಿ ಜಿನ್ಪಿಂಗ್ ಮಾತುಕತೆ; ಲಡಾಖ್ ಎಲ್ಎಸಿಯಲ್ಲಿ ತ್ವರಿತ ಸೇನಾ ಹಿಂತೆಗೆತಕ್ಕೆ ಒಪ್ಪಿಗೆ

ಪ್ರಧಾನಿ ಮೋದಿ ಭಾರತದ ಎಲ್ಎಸಿ ಕಾಳಜಿಯನ್ನು ಕ್ಸೀ ಜಿನ್ಪಿಂಗ್ ಗೆ ತಿಳಿಸಿದ್ದಾರೆ ಎಂದು ಭಾರತ ಸರ್ಕಾರದ ಕಾರ್ಯದರ್ಶಿ ಹೇಳಿದ್ದಾರೆ. 
ಪ್ರಧಾನಿ ಮೋದಿ- ಷಿ ಜಿನ್ಪಿಂಗ್
ಪ್ರಧಾನಿ ಮೋದಿ- ಷಿ ಜಿನ್ಪಿಂಗ್

ನವದೆಹಲಿ: ಪ್ರಧಾನಿ ಮೋದಿ ಭಾರತದ ಎಲ್ಎಸಿ ಕಾಳಜಿಯನ್ನು ಕ್ಸೀ ಜಿನ್ಪಿಂಗ್ ಗೆ ತಿಳಿಸಿದ್ದಾರೆ ಎಂದು ಭಾರತ ಸರ್ಕಾರದ ಕಾರ್ಯದರ್ಶಿ ಹೇಳಿದ್ದಾರೆ. ಈಶಾನ್ಯ ಲಡಾಖ್ ನ ಎಲ್ಎಸಿಯಾದ್ಯಂತ ಇನ್ನೂ ಬಗೆಹರಿಯದ ವಿಷಯಗಳ ಬಗ್ಗೆ ಕಾಳಜಿಗಳನ್ನು ಬ್ರಿಕ್ಸ್ ಶೃಂಗಸಭೆಯ ಪಾರ್ಶ್ವದಲ್ಲಿ ನಡೆದ ಮಾತುಕತೆಯಲ್ಲಿ ಪ್ರಧಾನಿ ಮೋದಿ ಷಿ ಜಿನ್ಪಿಂಗ್ ಗೆ ತಿಳಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ಮತ್ತು ಭಾರತ-ಚೀನಾ ಸಂಬಂಧಗಳನ್ನು ಸಾಮಾನ್ಯಗೊಳಿಸಲು LAC ನ್ನು ಗಮನಿಸುವುದು ಮತ್ತು ಗೌರವಿಸುವುದು ಅತ್ಯಗತ್ಯ ಎಂಬುದನ್ನು ಹೇಳಿರುವುದಾಗಿ ಕ್ವಾತ್ರಾ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಈ ನಿಟ್ಟಿನಲ್ಲಿ, ಉಭಯ ನಾಯಕರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ತ್ವರಿತವಾದ ನಿರ್ಗಮನ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ದೇಶಿಸಲು ಒಪ್ಪಿಕೊಂಡರು ಎಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಶೃಂಗಸಭೆಯ ಪಾರ್ಶ್ವದಲ್ಲಿ ಮೋದಿ ಬ್ರಿಕ್ಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಕ್ವಾತ್ರಾ ಹೇಳಿದ್ದಾರೆ.

ಮೇ, 2020 ರಲ್ಲಿ ಪ್ರಾರಂಭವಾದ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೆ ಒಳಗಾಗಿದೆ. ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ-ಚೀನಾ ನಡುವೆ 19 ನೇ ಸುತ್ತಿನ ಮಾತುಕತೆ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com