ಛತ್ತೀಸ್ ಗಢದಲ್ಲಿ ಬಿಜೆಪಿ ಅಧಿಕಾರದತ್ತ
ಛತ್ತೀಸ್ ಗಢದಲ್ಲಿ ಬಿಜೆಪಿ ಅಧಿಕಾರದತ್ತ

ಛತ್ತೀಸ್ಗಢದಲ್ಲಿ ತಲೆಕೆಳಗಾದ ಸಮೀಕ್ಷಾ ವರದಿ: ಕಾಂಗ್ರೆಸ್ ಗೆ ಭಾರಿ ಹಿನ್ನಡೆ, ಸ್ಪಷ್ಟ ಬಹುಮತದತ್ತ ಬಿಜೆಪಿ

ತೀವ್ರ ಕುತೂಹಲ ಕೆರಳಿಸಿರುವ 4 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಛತ್ತೀಸ್ ಘಡದಲ್ಲಿ ಇದೀಗ ಬಿಜೆಪಿ ಕಮಾಲ್ ಮಾಡುತ್ತಿದ್ದ ತನ್ನ ಅಂತರವನ್ನು ಭಾರಿ ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡಿದೆ.

ರಾಯ್ಪುರ: ತೀವ್ರ ಕುತೂಹಲ ಕೆರಳಿಸಿರುವ 4 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಛತ್ತೀಸ್ ಘಡದಲ್ಲಿ ಇದೀಗ ಬಿಜೆಪಿ ಕಮಾಲ್ ಮಾಡುತ್ತಿದ್ದ ತನ್ನ ಅಂತರವನ್ನು ಭಾರಿ ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡಿದೆ.

ಛತ್ತೀಸ್ ಗಢದ ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿ ಬರೊಬ್ಬರಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದು ಭಾರಿ ಅಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 

ಚುನಾವಣಾ ಆಯೋಗದಿಂದ ಬಂದ ಇತ್ತೀಚಿನ ಮಾಹಿತಿಯ ಪ್ರಕಾರ, ಛತ್ತೀಸ್‌ಗಢದಲ್ಲಿ ಬಿಜೆಪಿಯು ಆಡಳಿತಾರೂಢ ಕಾಂಗ್ರೆಸ್‌ ಅನ್ನು ಹಿಂದಿಕ್ಕಿ 90 ವಿಧಾನಸಭಾ ಸ್ಥಾನಗಳ ಪೈಕಿ 54 ರಲ್ಲಿ ಮುನ್ನಡೆ ಸಾಧಿಸಿದ್ದು, ಹಳೆಯ ಪಕ್ಷ ಕಾಂಗ್ರೆಸ್ ಪಕ್ಷದ ಸ್ಥಾನ ಗಳಿಕೆ 34ಕ್ಕೆ ಕುಸಿದಿದೆ.

ಪಟಾನ್‌ನಲ್ಲಿ, ನಾಲ್ಕು ಸುತ್ತಿನ ಮತ ಎಣಿಕೆಯ ನಂತರ ಕಾಂಗ್ರೆಸ್‌ನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಬಿಜೆಪಿಯ ವಿಜಯ್ ಬಾಘೇಲ್ ಅವರಿಗಿಂತ 164 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಇನ್ನೂ 18 ಸುತ್ತು ಮತ ಎಣಿಕೆ ನಡೆಯಲಿವೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯ ನಂತರ ಛತ್ತೀಸ್‌ಗಢದ ಗೃಹ ಸಚಿವ ತಾಮ್ರಧ್ವಜ್ ಸಾಹು ದುರ್ಗ್ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಲಲಿತ್ ಚಂದ್ರಕರ್ ವಿರುದ್ಧ 1,365 ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

ಇತ್ತ ಚಿತ್ರಕೋಟ್ ಕ್ಷೇತ್ರದಲ್ಲಿ ಬಿಜೆಪಿಯ ವಿನಾಯಕ್ ಗೋಯಲ್ ವಿರುದ್ಧ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಗಿಂತ 518 ಮತಗಳಿಂದ ಹಿನ್ನಡೆ ಅನುಭವಿಸಿದ್ದರೆ, ಛತ್ತೀಸ್‌ಗಢ ವಿಧಾನಸಭಾ ಸ್ಪೀಕರ್ ಚರಣ್ ದಾಸ್ ಮಹಂತ್ ಕೂಡ ಶಕ್ತಿ ಕ್ಷೇತ್ರದಲ್ಲಿ ಬಿಜೆಪಿಯ ಖಿಲಾವನ್ ಸಾಹು ವಿರುದ್ಧ 897 ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

ಪ್ರಸ್ತುತ ಲಭಿಸಿರುವ ಟ್ರೆಂಡ್ ಗಳ ಪ್ರಕಾರ ಛತ್ತೀಸ್ ಗಢದಲ್ಲೂ ಬಿಜೆಪಿ ಸರ್ಕಾರ ರಚಿಸುವತ್ತ ದಾಪುಗಾರಿಸಿದ್ದು, ಇಲ್ಲಿ ಸರ್ಕಾರ ರಚನೆಗೆ 46 ಸ್ಥಾನಗಳ ಅಗತ್ಯವಿದೆ. ಬಿಜೆಪಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇಲ್ಲಿಯೂ ಬಿಜೆಪಿ ಸರ್ಕಾರ ರಚಿಸುವತ್ತ ದಾಪುಗಾಲಿರಿಸಿದೆ. 
 

Related Stories

No stories found.

Advertisement

X
Kannada Prabha
www.kannadaprabha.com