ಜನರ ಆರೋಗ್ಯದ ಮೇಲೆ ಕೋವಿಡ್ ರೂಪಾಂತರಿ ಜೆಎನ್.1 ಅಪಾಯ ಕಡಿಮೆ: ತಜ್ಞರು

ದೇಶಾದ್ಯಂತ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣಗಳು ಹೆಚ್ಚಾಗುತಿರುವಂತೆಯೇ ಇದು ಜನರ ಆರೋಗ್ಯದ ಮೇಲೆ ಅಷ್ಟೊಂದು ಅಪಾಯ ಉಂಟುಮಾಡಲ್ಲ, ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೇಶಾದ್ಯಂತ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣಗಳು ಹೆಚ್ಚಾಗುತಿರುವಂತೆಯೇ ಇದು ಜನರ ಆರೋಗ್ಯದ ಮೇಲೆ ಅಷ್ಟೊಂದು ಅಪಾಯ ಉಂಟುಮಾಡಲ್ಲ, ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ. ಆದರೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ.  

ಮೂರು ರಾಜ್ಯಗಳಲ್ಲಿ  ಹೊಸ ರೂಪಾಂತರಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಗುರುವಾರ ಒಟ್ಟು 594 ಹೊಸ ಪ್ರಕರಣ ವರದಿಯಾಗಿದೆ. ಬುಧವಾರದ 614 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

ಕೋವಿಡ್ ಮತ್ತೆ ಉಲ್ಬಣಿಸಿದ್ದು, ಆತಂಕಪಡಬೇಕಾದ ಅಗತ್ಯವಿಲ್ಲ. ಲಭ್ಯವಿರುವ ಚಿಕಿತ್ಸೆಗಳು ಪರಿಣಾಮಕಾರಿಯಾಗಿವೆ. ಸೋಂಕು ಸೌಮ್ಯವಾಗಿರುತ್ತದೆ ಮತ್ತು ಎಲ್ಲಾ ವೈರಸ್‌ಗಳು ರೂಪಾಂತರಗೊಳ್ಳುತ್ತವೆ ಎಂದು ತಜ್ಞರು ಹೇಳಿದ್ದಾರೆ.  ಇನ್ಫ್ಲುಯೆನ್ಸ ವೈರಸ್‌ಗಳು ಸೇರಿದಂತೆ ಹೆಚ್ಚಿನ ಉಸಿರಾಟದ ವೈರಸ್‌ಗಳೊಂದಿಗೆ ಇದು ಸಂಭವಿಸಿದಂತೆ ವೈರಸ್‌ಗಳು ಬದಲಾಗುತ್ತಲೇ ಇರುತ್ತವೆ.

SARS CoV-2 ನ ಉಪ-ರೂಪಾಂತರ ಆಶ್ಚರ್ಯವೇನಿಲ್ಲ, ಇದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡುತ್ತದೆ ಎಂದು ಹಿರಿಯ ಸಲಹೆಗಾರ ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಚಂದ್ರಕಾಂತ್ ಲಹರಿಯಾ ಪಿಟಿಐಗೆ ತಿಳಿಸಿದ್ದಾರೆ. . 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com