ಭಾರತ-ಪಾಕ್ ಮಾತುಕತೆ ನಡೆಸದಿದ್ದರೆ ಕಾಶ್ಮೀರ 'ಗಾಜಾ'ದಂತಾಗಬಹುದು: ಫಾರೂಕ್ ಅಬ್ದುಲ್ಲಾ ಎಚ್ಚರಿಕೆ

ಉಭಯ ದೇಶಗಳ ನಡುವೆ ಮಾತುಕತೆಯಾಗದ ಹೊರತು ಇಸ್ರೇಲ್ ವಿರುದ್ಧ ಯುದ್ಧದಲ್ಲಿರುವ ಗಾಜಾದಂತೆಯೇ ಕೇಂದ್ರಾಡಳಿತ ಪ್ರದೇಶಕ್ಕೂ ಭವಿಷ್ಯದಲ್ಲಿ ಆಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. 
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ

ಶ್ರೀನಗರ: ಉಭಯ ದೇಶಗಳ ನಡುವೆ ಮಾತುಕತೆಯಾಗದ ಹೊರತು ಇಸ್ರೇಲ್ ವಿರುದ್ಧ ಯುದ್ಧದಲ್ಲಿರುವ ಗಾಜಾದಂತೆಯೇ ಕೇಂದ್ರಾಡಳಿತ ಪ್ರದೇಶಕ್ಕೂ ಭವಿಷ್ಯದಲ್ಲಿ ಆಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. 

ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಾಯಕರು ತಮ್ಮ ದ್ವಿಪಕ್ಷೀಯ ಸಮಸ್ಯೆಗಳಿಗೆ ಮಾತುಕತೆಯ ಮೂಲಕವೇ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರು ಎಎನ್‌ಐ ಜೊತೆ ಮಾತನಾಡುತ್ತಾ, 'ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು ಆದರೆ ನಮ್ಮ ನೆರೆಹೊರೆಯವರನ್ನಲ್ಲ. ನಾವು ನಮ್ಮ ನೆರೆಹೊರೆಯವರೊಂದಿಗೆ ಸ್ನೇಹದಿಂದ ಇದ್ದರೆ, ಇಬ್ಬರೂ ಪ್ರಗತಿ ಹೊಂದುತ್ತಾರೆ  ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು' ಎಂದು ಹೇಳಿದರು.

'ಯುದ್ಧವು ಈಗ ಆಯ್ಕೆಯಾಗಿಲ್ಲ' ಮತ್ತು ಯಾವುದೇ 'ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು' ಎಂದು ಪ್ರಧಾನಿ ಮೋದಿ ಕೂಡ ಹೇಳಿದ್ದಾರೆ ಎಂದು ಫಾರೂಕ್ ಉಲ್ಲೇಖಿಸಿದ್ದಾರೆ.

ಪರಮಾಣು ಶಕ್ತಿಯನ್ನು ಹೊಂದಿರುವ ಭಾರತ ಮತ್ತು ಪಾಕಿಸ್ತಾನ ಎರಡನ್ನೂ ಫಾರೂಕ್,  'ಮಾತುಕತೆ ಎಲ್ಲಿದೆ?' ಎಂದು ಪ್ರಶ್ನಿಸಿದರು.

ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ ಮತ್ತು ನಾವು ಭಾರತದೊಂದಿಗೆ ಮಾತನಾಡಲು ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಆದರೆ, ನಾವು ಮಾತನಾಡಲು ಸಿದ್ಧರಿಲ್ಲದರ ಹಿಂದಿನ ಕಾರಣವೇನು? ಎಂದು ಕೇಳಿದರು. 

ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ, ಇಸ್ರೇಲ್‌ನಿಂದ ಬಾಂಬ್ ದಾಳಿಗೆ ಒಳಗಾಗಿರುವ ಗಾಜಾ ಮತ್ತು ಪ್ಯಾಲೆಸ್ಟೀನ್‌ನಂತೆಯೇ ನಾವೂ (ಕಾಶ್ಮೀರ) ಭವಿಷ್ಯದಲ್ಲಿ ಅದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ...' ಎಂದು ಎಚ್ಚರಿಸಿದರು.

1999ರಲ್ಲಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ಯುದ್ಧ ಪ್ರಾರಂಭವಾಗುವ ಕೆಲವೇ ತಿಂಗಳುಗಳ ಮೊದಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. 2015 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಹಠಾತ್ ಭೇಟಿಯ ಸಂದರ್ಭದಲ್ಲಿ ನವಾಜ್ ಅವರೊಂದಿಗೆ ಸಭೆ ನಡೆಸಿದರು. ಭಾರತದ ಭೂಪ್ರದೇಶದೊಳಗೆ ಉಗ್ರರು ನುಸುಳುವಂತೆ ಮಾಡಲು ಪಾಕಿಸ್ತಾನದ ನಿರಂತರ ಪ್ರಯತ್ನಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿಯುಂಟುಮಾಡಿವೆ. 

26/11 ಮುಂಬೈ ದಾಳಿಯು ಭಾರತೀಯರಲ್ಲಿ ಅಪಾರ ಆಕ್ರೋಶ ಮತ್ತು ನೋವಿಗೆ ಕಾರಣವಾಯಿತು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದಾದ ನಂತರ ಭಾರತ-ಪಾಕಿಸ್ತಾನ ಸಂಬಂಧಗಳು ಮತ್ತಷ್ಟು ಹದಗೆಟ್ಟವು.

ಪೂಂಚ್ ಸೆಕ್ಟರ್‌ನಲ್ಲಿ ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ಕೆಲವೇ ದಿನಗಳಲ್ಲಿ ಫಾರೂಕ್ ಅಬ್ದುಲ್ಲಾ ಅವರು ಈ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com