ಗಾಯಕಿ ವಿದ್ಯಾ ಸುಬ್ರಮಣಿಯನ್ ಸೇರಿ 11 ಸಾಧಕಿಯರಿಗೆ 2023ನೇ ಸಾಲಿನ ದೇವಿ ಪ್ರಶಸ್ತಿ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರ್ಷದ ಅತ್ಯಂತ ನಿರೀಕ್ಷಿತ ಕಾರ್ಯಕ್ರಮ, ದೇವಿ ಪ್ರಶಸ್ತಿ 2023 ಘೋಷಣೆಯಾಗಿದ್ದು, ಕ್ರೀಡೆ, ವೈದ್ಯಕೀಯ, ನೃತ್ಯ, ಇತಿಹಾಸ, ಸಂಗೀತ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ 11 ಮಹಿಳೆಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದೇವಿ ಪ್ರಶಸ್ತಿ
ದೇವಿ ಪ್ರಶಸ್ತಿ

ಚೆನ್ನೈ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರ್ಷದ ಅತ್ಯಂತ ನಿರೀಕ್ಷಿತ ಕಾರ್ಯಕ್ರಮ, ದೇವಿ ಪ್ರಶಸ್ತಿ 2023 ಘೋಷಣೆಯಾಗಿದ್ದು, ಕ್ರೀಡೆ, ವೈದ್ಯಕೀಯ, ನೃತ್ಯ, ಇತಿಹಾಸ, ಸಂಗೀತ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ 11 ಮಹಿಳೆಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಾಲ್ಕು ವರ್ಷಗಳ ನಂತರ ಚೆನ್ನೈಗೆ ದೇವಿ ಪ್ರಶಸ್ತಿ ಸಮಾರಂಭ ಮರಳಿದ್ದು, ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೊಟೆಲ್ ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕ್ರೀಡೆ, ವೈದ್ಯಕೀಯ, ನೃತ್ಯ, ಇತಿಹಾಸ, ಸಂಗೀತ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ 11 ದೇವಿಯರನ್ನು ಸನ್ಮಾನಿಸಲಾಗುತ್ತಿದೆ.

ಈ ಪ್ರತಿಷ್ಠಿತ ಪ್ರಶಸ್ತಿಗೆ ಈ ವರ್ಷ ವೃತ್ತಿಪರ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನಪ್ಪ, ಭರತನಾಟ್ಯ ನರ್ತಕಿ ಪ್ರಿಯದರ್ಶಿನಿ ಗೋವಿಂದ್, ಲೇಖಕಿ-ಇತಿಹಾಸಗಾರ್ತಿ ಡಾ. ನಂದಿತಾ ಕೃಷ್ಣ, ಗಾಯಕಿ ವಿದ್ಯಾ ಸುಬ್ರಮಣಿಯನ್ ಮತ್ತು ವೈದ್ಯಕೀಯ ವೃತ್ತಿಪರ ಡಾ.ಪಿ.ಪೂರ್ಣ ಚಂದ್ರಿಕಾ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತೆಯೇ ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಫೆಬ್ರವರಿ 8 ರಂದು ಐಟಿಸಿ ಗ್ರ್ಯಾಂಡ್ ಚೋಲಾದಲ್ಲಿ ನಡೆಯಲಿರುವ ದೇವಿ ಪ್ರಶಸ್ತಿಗಳ 23 ನೇ ಆವೃತ್ತಿಯಲ್ಲಿ ಅತಿಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

TNIE ಯ ದೇವಿ ಪ್ರಶಸ್ತಿಗಳು ಮಹಿಳೆಯರ ಕೆಲಸದಲ್ಲಿ ಚೈತನ್ಯವನ್ನು ಸಂಭ್ರಮಿಸುತ್ತದೆ. ದಿ ಸಂಡೇ ಸ್ಟ್ಯಾಂಡರ್ಡ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಆಶ್ರಯದಲ್ಲಿ ಈ ಪ್ರಶಸ್ತಿ ನೀಡಿಕೆ ಪ್ರಾರಂಭವಾಯಿತು. ದೇವಿ ಪ್ರಶಸ್ತಿಗಳು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭವಾಯಿತು. ಆ ವರ್ಷ ನಟಿ ಐಶ್ವರ್ಯಾ ರಾಜೇಶ್ ಮತ್ತು ಮಾನಸಿಕ ಆರೋಗ್ಯ ಕಾರ್ಯಕರ್ತೆ ವಂದನಾ ಗೋಪಿಕುಮಾರ್ ಸೇರಿದಂತೆ ರಾಜ್ಯದಾದ್ಯಂತ ಹತ್ತು ಮಹಿಳೆಯರನ್ನು ಗೌರವಿಸಲಾಯಿತು. ಮಹಿಳೆಯರಿಗಾಗಿ ಒಂದು ನಿಲುವು ಮತ್ತು ಬಲಿಷ್ಠ, ಸ್ವತಂತ್ರ ಮಹಿಳೆಯರು ರಾಷ್ಟ್ರದ ಬೆನ್ನೆಲುಬು ಎಂದು ಅದು ಬಲವಾದ ನಂಬಿಕೆ ದೇವಿ ಅವಾರ್ಡ್ಸ್ ಕಾರ್ಯಕ್ರಮ ಆಯೋಜಿಸನೆಗೆ ಕಾರಣವಾಯಿತು. ಈ ಪ್ರಶಸ್ತಿಯು ತಮ್ಮ ಕೆಲಸದಲ್ಲಿ ಚೈತನ್ಯ ಮತ್ತು ಹೊಸತನವನ್ನು ಪ್ರದರ್ಶಿಸುವ ಅಸಾಧಾರಣ ಮಹಿಳೆಯರನ್ನು ಗೌರವಿಸುತ್ತದೆ. 

COVID-19 ಕಾರಣದಿಂದಾಗಿ ಎರಡು ವರ್ಷಗಳ ಕಾಲ ಪ್ರಶಸ್ತಿ ನೀಡಿಕೆ ಸ್ಥಗಿತವಾಗಿತ್ತು. ಆದರೆ 2022 ರಲ್ಲಿ ಕೋಲ್ಕತ್ತಾ ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಯಾಗಿತ್ತು. ಆದರ ಮೂಲಕ ದೇವಿ ಪ್ರಶಸ್ತಿ ಮತ್ತೆ ಭರ್ಜರಿಯಾಗಿ ಹಿಂದಿರುಗಿತ್ತು. ಅಂದು ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿಯಿಂದ ಹಿಡಿದು ನಟಿ ಸ್ವಸ್ತಿಕಾ ಮುಖರ್ಜಿ ಅವರವರೆಗೆ 15 ಡೈನಾಮಿಕ್ ಮಹಿಳೆಯರನ್ನು ದೇವಿ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಕೇಂದ್ರದ ಮಾಜಿ ಸಚಿವ ಡಾ ಸುಬ್ರಮಣಿಯನ್ ಸ್ವಾಮಿ ಅವರು ಪ್ರಶಸ್ತಿ ವಿಜೇತ ಮಹಿಳೆಯನ್ನು ಸನ್ಮಾನಿಸಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ಸಂಪಾದಕೀಯ ತಂಡ ಮತ್ತು ಸ್ವತಂತ್ರ ತೀರ್ಪುಗಾರರ ಮತದಾನದ ಮೂಲಕ ದೇವಿಗಳನ್ನು ಆಯ್ಕೆ ಮಾಡಲಾಗಿದೆ. ಈ ವರ್ಷ ಈವೆಂಟ್‌ಗೆ ಪ್ರಾಥಮಿಕ ಪ್ರಾಯೋಜಕರು ಅದಾನಿ ಸಮೂಹವಾಗಿದ್ದು, ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಸೋಸಿಯೇಟ್ ಪಾಲುದಾರರಾಗಿ, ಅಹುಜಾಸನ್ಸ್ ಉಡುಗೊರೆ ಪಾಲುದಾರರಾಗಿ ಮತ್ತು ಐಟಿಸಿ ಗ್ರ್ಯಾಂಡ್ ಚೋಳ ಹೊಟೆಲ್ ಆತಿಥ್ಯ ಪಾಲುದಾರರಾಗಿದ್ದಾರೆ.

ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ.
ಡಾ ನಂದಿತಾ ಕೃಷ್ಣ, ಇತಿಹಾಸಕಾರ ಮತ್ತು ಲೇಖಕ
ವಿದ್ಯಾ ಸುಬ್ರಮಣಿಯನ್, ಗಾಯಕಿ
ವಿಶಾಖ ಹರಿ, ಗಾಯಕಿ
ಡಾ ಗಗನ್‌ದೀಪ್ ಕಾಂಗ್, ವೈದ್ಯ ಮತ್ತು ವಿಜ್ಞಾನಿ
ರಾಧಿಕಾ ಸಂತಾನಕೃಷ್ಣನ್, ಜನೋಪಕಾರ
ಅನುರಾಧಾ ಕೃಷ್ಣಮೂರ್ತಿ ಮತ್ತು ನಮ್ರತಾ ಸುಂದರೇಶನ್, ಉದ್ಯಮಿಗಳು
ಡಾ ಪಿ ಪೂರ್ಣ ಚಂದ್ರಿಕಾ, ವೈದ್ಯಕೀಯ ವೃತ್ತಿಪರ
ವಿಜಯಲಕ್ಷ್ಮಿ ನಾಚಿಯಾರ್, ಉದ್ಯಮಿ
ಪ್ರಿಯದರ್ಶಿನಿ ಗೋವಿಂದ್, ಡ್ಯಾನ್ಸರ್
ಜೋಷ್ನಾ ಚಿನಪ್ಪ, ಕ್ರೀಡಾಪಟು
ಡಾ ರಮ್ಯಾ ಎಸ್ ಮೂರ್ತಿ, ವಾಣಿಜ್ಯೋದ್ಯಮಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com