ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ, ಶೀಘ್ರದಲ್ಲೇ ಸಾರ್ವಜನಿಕರ ಮುಂದೆ ಪ್ರತ್ಯಕ್ಷ!

ಉಗ್ರ ಸಂಘಟನೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದು, ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನ ಮಾಜಿ ನಾಯಕ P.ನೆಡುಮಾರನ್ ಸೋಮವಾರ ಹೇಳಿದ್ದಾರೆ.
ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್
ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್
Updated on

ಚೆನ್ನೈ: ಉಗ್ರ ಸಂಘಟನೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದು, ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನ ಮಾಜಿ ನಾಯಕ P. ನೆಡುಮಾರನ್ ಸೋಮವಾರ ಹೇಳಿದ್ದಾರೆ.

ಪ್ರಭಾಕರನ್ ಶೀಘ್ರದಲ್ಲೇ ಸಾರ್ವಜನಿಕರ ಮುಂದೆ ಕಾಣಿಸಿಕೊಳ್ಳಲಿದ್ದು, ತಮಿಳು ಜನಾಂಗದ ವಿಮೋಚನೆಗಾಗಿ ಯೋಜನೆಯೊಂದನ್ನು ಘೋಷಿಸಲಿದ್ದಾರೆ. ಪ್ರಪಂಚದ ಎಲ್ಲಾ ತಮಿಳು ಜನರು ಒಟ್ಟಾಗಿ ಅವರನ್ನು ಬೆಂಬಲಿಸಬೇಕು ಎಂದು P. ನೆಡುಮಾರನ್ ಮನವಿ ಮಾಡಿದ್ದಾರೆ. 

'ತಮಿಳು ರಾಷ್ಟ್ರೀಯ ನಾಯಕ ಪ್ರಭಾಕರನ್ ಬಗ್ಗೆ ಸತ್ಯವನ್ನು ಘೋಷಿಸಲು ಸಂತೋಷಪಡುತ್ತೇವೆ. ಅವರು ಚೆನ್ನಾಗಿದ್ದಾರೆ. ಪ್ರಪಂಚದಾದ್ಯಂತದ ತಮಿಳು ಜನರಿಗೆ ಇದನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಸುದ್ದಿಯು ವ್ಯವಸ್ಥಿತವಾಗಿ ನಡೆಯುತ್ತಿದ್ದ ಊಹಾಪೋಹಗಳಿಗೆ ಕೊನೆ ಹಾಡುತ್ತದೆ' ಎಂದು ಭಾವಿಸುವುದಾಗಿ ಅವರು ತಿಳಿಸಿದ್ದಾರೆ. ಪ್ರಭಾಕರನ್ ಅವರನ್ನು ಶ್ರೀಲಂಕಾ ಸೇನಾಪಡೆ 2009 ರಲ್ಲಿ ಹತ್ಯೆಗೈದಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com