ಚೀನಾದ ಎಫ್‌ಡಿಐ ಹೆಚ್ಚಾದಂತೆ ಇ-ಫಾರ್ಮಾ ಮೇಲೆ ಸರ್ಕಾರ ಕಣ್ಣು; ಔಷಧಗಳ ಆನ್‌ಲೈನ್ ಮಾರಾಟ ನಿಷೇಧಕ್ಕೆ ಚಿಂತನೆ

ಚೀನಾ ಮತ್ತು ಭಾರತದ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ನೆರೆಯ ದೇಶವು 20,000 ಕೋಟಿ ರೂಪಾಯಿಗಳಷ್ಟು ನೇರ ಬಂಡವಾಳ ಹೂಡಿಕೆಯನ್ನು ಹೊಂದಿರುವುದರಿಂದ, ಆನ್‌ಲೈನ್ ಔಷಧಗಳ ಮಾರಾಟವನ್ನು ನಿಷೇಧಿಸುವ ವಿಚಾರದಲ್ಲಿ ಸರ್ಕಾರವು ದೃಢವಾಗಿ ನಿಂತಿದೆ ಎಂದು ಗೌಪ್ಯ ಸರ್ಕಾರಿ ಮೂಲಗಳು ತಿಳಿಸಿವೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ನವದೆಹಲಿ: ಚೀನಾ ಮತ್ತು ಭಾರತದ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ನೆರೆಯ ದೇಶವು ಇ-ಫಾರ್ಮಾ ವಲಯದಲ್ಲಿ 20,000 ಕೋಟಿ ರೂಪಾಯಿಗಳಷ್ಟು ನೇರ ಬಂಡವಾಳ ಹೂಡಿಕೆಯನ್ನು ಹೊಂದಿರುವುದರಿಂದ, ಆನ್‌ಲೈನ್ ಔಷಧಗಳ ಮಾರಾಟವನ್ನು ನಿಷೇಧಿಸುವ ಕುರಿತು ಸರ್ಕಾರ ಚಿಂತಿಸುತ್ತಿದೆ ಎಂದು ಗೌಪ್ಯ ಸರ್ಕಾರಿ ಮೂಲಗಳು ತಿಳಿಸಿವೆ. 

ಇ-ಫಾರ್ಮಸಿಯಲ್ಲಿ ಚೀನಾದ ನಿಯಂತ್ರಣವು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆ ಮತ್ತು ಅಂತಹ ನಿರ್ಣಾಯಕ ವಲಯದಲ್ಲಿ ಸರ್ಕಾರವು ಅಂತಹ ಪ್ರಾಬಲ್ಯವನ್ನು ಬಯಸುವುದಿಲ್ಲ. ಆದಾಗ್ಯೂ, ಉನ್ನತ ಸರ್ಕಾರಿ ಅಧಿಕಾರಿ ಪ್ರಕಾರ, ಈ ವಲಯದಲ್ಲಿ ವಿದೇಶಿ ಹೂಡಿಕೆದಾರರು 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಫ್‌ಡಿಐ ಹೊಂದಿರುವ ಕಾರಣ ಔಷಧಗಳ ಆನ್‌ಲೈನ್ ಮಾರಾಟವನ್ನು ನಿಷೇಧಿಸುವುದು ರಾತ್ರೋರಾತ್ರಿ ಕೂಡ ಆಗುವುದಿಲ್ಲ. ಈ ವಲಯದಲ್ಲಿ ಆನ್‌ಲೈನ್‌ ಔಷಧ ಮಾರಾಟವನ್ನು ನಿಷೇಧಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ.

'ಚೀನಾದ ಸಂಸ್ಥೆಗಳು ಈ ವಲಯದಲ್ಲಿ 20,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ. ಆನ್‌ಲೈನ್ ವಿಭಾಗದಲ್ಲಿ ಅದರ ಪಾಲು ಸಾಕಷ್ಟು ಹೆಚ್ಚಿರುವುದರಿಂದ, ಅನೇಕ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಬಹುದು ಮತ್ತು ಸರ್ಕಾರದ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು' ಎಂದು ಅಧಿಕಾರಿ ಹೇಳಿದರು. 

ಅಗತ್ಯ ಪರವಾನಗಿ ಇಲ್ಲದೆ ಆನ್‌ಲೈನ್‌ನಲ್ಲಿ ಔಷಧಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅಮೆಜಾನ್, ಪ್ರಾಕ್ಟೊ, ಟಾಟಾ1ಎಂಜಿ, ಫಾರ್ಮ್ ಈಸಿ, ಅಪೊಲೊ, ಝೀಲಾಬ್ಸ್ ಮತ್ತು ಹೆಲ್ತ್‌ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಿಗೆ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಬಗ್ಗೆ ಪತ್ರಿಕೆ ಈ ಹಿಂದೆ ವರದಿಯಾಗಿತ್ತು. ಶೋಕಾಸ್ ನೋಟಿಸ್‌ಗೆ ಸಿಕ್ಕಿರುವ ಪ್ರತಿಕ್ರಿಯೆಗಳಿಂದ ಸರ್ಕಾರ ತೃಪ್ತವಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

'ಚೀನಾದ ಪ್ರಾಬಲ್ಯದಿಂದಾಗಿ ಆನ್‌ಲೈನ್ ಮೂಲಕ ಔಷಧಗಳ ಮಾರಾಟಕ್ಕೆ ಅನುಮತಿ ನೀಡುವುದರಿಂದ ತೀವ್ರ ಪರಿಣಾಮಗಳು ಉಂಟಾಗಬಹುದು. ಮೊದಲನೆಯದಾಗಿ, ಚೀನಾವು ಭವಿಷ್ಯದಲ್ಲಿ ಗುಣಮಟ್ಟವಿಲ್ಲದ ಔಷಧಿಗಳನ್ನು ಮಾರಾಟ ಮಾಡುವುದರ ಜೊತೆಗೆ ಅಗತ್ಯ ಔಷಧಗಳ ಪೂರೈಕೆಯನ್ನು ನಿಲ್ಲಿಸಬಹುದು' ಎಂದು ಅಧಿಕಾರಿ ಹೇಳಿದರು.

ಚೀನಾವು ಭಾರತದ ಫಾರ್ಮಾ ಕ್ಷೇತ್ರದಲ್ಲಿ ಪ್ರಮುಖವಾಗಿದ್ದು, ದೇಶವು ಚೀನಾದ ಸಂಸ್ಥೆಗಳಿಂದ ಶೇ 80 ಕ್ಕಿಂತ ಹೆಚ್ಚು ದೊಡ್ಡ ಪ್ರಮಾಣದ ಔಷಧಗಳು ಅಥವಾ ಸಕ್ರಿಯ ಫಾರ್ಮಾಸುಟಿಕಲ್ ಪದಾರ್ಥಗಳು (ಎಪಿಐಗಳು) ಮತ್ತು ಇತರ ಮಧ್ಯವರ್ತಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ಇ-ಫಾರ್ಮಸಿಗಳ ಮೇಲೆ ನಿಷೇಧ ಹೇರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಉದ್ಯಮ ತಜ್ಞರು ಭಿನ್ನಾಭಿಪ್ರಾಯ ಹೊಂದಿದ್ದಾರೆ.

'ಆನ್‌ಲೈನ್‌ನಲ್ಲಿ ಔಷಧಗಳ ಮಾರಾಟವನ್ನು ನಿಷೇಧಿಸುವ ಕುರಿತು ನಾನು ಸರ್ಕಾರದೊಂದಿಗೆ ಸಹಮತ ಹೊಂದಿದ್ದೇನೆ. ಹಣವನ್ನು ಉಳಿಸಲು ಜನರು ವೈದ್ಯರ ಪ್ರಿಸ್ಕ್ರಿಪ್ಷನ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುತ್ತಾರೆ. ಆದರೆ, ಸರಿಯಾದ ಔಷಧವನ್ನು ಪಡೆಯದಿರುವ ಅಪಾಯವೂ ಇರುತ್ತದೆ. ಆದರೆ, ಕೆಮಿಸ್ಟ್‌ಗಳು ಅದನ್ನು ಒಪ್ಪಿಕೊಳ್ಳದ ಕಾರಣ ಸಂಪೂರ್ಣ ನಿಷೇಧವನ್ನು ಜಾರಿಗೊಳಿಸುವುದು ಕಷ್ಟಕರವಾಗಿರುತ್ತದೆ ಮತ್ತು ಇಲ್ಲಿ ಔಷಧ ಮಾರಾಟದಲ್ಲಿ ಕಾನೂನನ್ನು ಗಾಳಿಗೆ ತೂರುವ ಮತ್ತೊಂದು ಕಪ್ಪು ಮಾರುಕಟ್ಟೆ ಇರುತ್ತದೆ' ಎಂದು ಏಮ್ಸ್‌ನ (AIIMS) ಜೀರ್ಣಾಂಗ ವ್ಯೂಹ ಶಸ್ತ್ರಚಿಕಿತ್ಸೆ ವಿಭಾಗದ ಮಾಜಿ ಮುಖ್ಯಸ್ಥ ಸಮೀರನ್ ನುಂಡಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com