ಮಹಾರಾಷ್ಟ್ರ: ತಲೆ ಮೇಲೆ ಈರುಳ್ಳಿ ಹೊತ್ತು ವಿಧಾನಸಭೆಗೆ ಆಗಮಿಸಿದ ಎನ್ ಸಿಪಿ ಶಾಸಕರು!

ಮಹಾರಾಷ್ಟ್ರ ವಿಧಾನಸಭಾ ಆವರಣ ಇಂದು ಬೆಳಗ್ಗೆ ಕೆಲಹೊತ್ತು ಅಚ್ಚರಿಗೆ ಕಾರಣವಾಯಿತು. ತಲೆ ಮೇಲೆ ಈರುಳ್ಳಿ ಹೊತ್ತ ಎನ್ ಸಿಪಿ ಶಾಸಕರನ್ನು ಕಂಡು ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ದಂಗಾದರು. 
ತಲೆ ಮೇಲೆ ಈರುಳ್ಳಿ ಹೊತ್ತ ಎನ್ ಸಿಪಿ ಶಾಸಕರು
ತಲೆ ಮೇಲೆ ಈರುಳ್ಳಿ ಹೊತ್ತ ಎನ್ ಸಿಪಿ ಶಾಸಕರು
Updated on

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಆವರಣ ಇಂದು ಬೆಳಗ್ಗೆ ಕೆಲಹೊತ್ತು ಅಚ್ಚರಿಗೆ ಕಾರಣವಾಯಿತು. ತಲೆ ಮೇಲೆ ಈರುಳ್ಳಿ ಹೊತ್ತ ಎನ್ ಸಿಪಿ ಶಾಸಕರನ್ನು ಕಂಡು ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ದಂಗಾದರು. 

ಮಹಾರಾಷ್ಟ್ರ ವಿಧಾನಸಭೆ ಪ್ರವೇಶದ್ವಾರದಲ್ಲಿ ಕೆಲ ಶಾಸಕರು ಈರುಳ್ಳಿಯನ್ನು ತಮ್ಮ ಕೊರಳಿನ ಮಾಲೆಯಾಗಿ ಹಾಕಿಕೊಂಡರೆ,  ಮತ್ತೆ ಕೆಲವರು ಬೆಳ್ಳುಳ್ಳಿಯನ್ನು ಮಾಲೆಯಾಗಿ ಹಾಕಿಕೊಳ್ಳುವ ಮೂಲಕ  ಗಮನ ಸೆಳೆದರು. 

ಸರ್ಕಾರ ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಸೂಕ್ತ ದರ ನಿಗದಿಪಡಿಸಬೇಕು ಎಂದು ಶಾಸಕರು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com