ಬಿಹಾರ: ಬಾಯ್‌ಫ್ರೆಂಡ್‌ನೊಂದಿಗೆ ಪರಾರಿಯಾದ ಆರು ಮಕ್ಕಳ ತಾಯಿ, ದೂರು ದಾಖಲಿಸಿದ ಪತಿ
ಪಾಟ್ನಾ: ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಆರು ಮಕ್ಕಳ ತಾಯಿಯೊಬ್ಬರು ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದು, ಆಕೆಯ ಪತಿ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುತೂಹಲಕಾರಿಯಾಗಿ, ಅವರು ಇತ್ತೀಚೆಗಷ್ಟೇ ತಮ್ಮ ಒಬ್ಬ ಮಗಳ ಮದುವೆ ಮಾಡಿದ್ದರು. ಆಕೆ ಓಡಿಹೋದ ನಂತರ, ಮಹಿಳೆಯ ಪತಿ ಭಗವಾನ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ತನ್ನ ಹೆಂಡತಿಯನ್ನು ಪತ್ತೆಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸಂತ್ರಸ್ತ ದಾಖಲಿಸಿದ ಎಫ್‌ಐಆರ್‌ನಲ್ಲಿ ತನ್ನ ಪತ್ನಿ ಯಾರೊಂದಿಗೆ ಓಡಿಹೋಗಿದ್ದಾಳೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ.
ಮಹಿಳೆಯ ಮೊಬೈಲ್ ಫೋನ್ ಆನ್ ಆಗಿದ್ದರೂ ಪತಿ ಮತ್ತು ತನ್ನ ಮಕ್ಕಳು ಮಾಡುವ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಕೆಲವೊಮ್ಮೆ, ಪುರುಷನಿಂದ ಫೋನ್ ಕರೆ ಸ್ವೀಕರಿಸಿ ನಿಂದನೀಯ ಪದಗಳನ್ನು ಬಳಸುತ್ತಿದ್ದರು ಎಂದು ದೂರಿನಲ್ಲಿ ವ್ಯಕ್ತಿ ಹೇಳಿದ್ದಾರೆ.
ಭಗವಾನ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಸಂಪರ್ಕಿಸಿದಾಗ, 'ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಫೋನ್ ಕರೆಗಳ ಪತ್ತೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು' ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ