ಚುನಾವಣಾ ಪ್ರಚಾರಕ್ಕೆ ಆನ್ ಲೈನ್ ಮೂಲಕ ಏರ್ ಟೈಮ್ ವೋಚರ್ ಗಳನ್ನು ನೀಡಲಿರುವ ಚುನಾವಣಾ ಆಯೋಗ

ಸಾರ್ವಜನಿಕ ಪ್ರಸಾರ ಸಂಸ್ಥೆಗಳಾದ ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದ ಮೂಲಕ ಪ್ರಚಾರ ನಡೆಸುವುದಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಇನ್ನು ಮುಂದೆ ಏರ್ ಟೈಮ್ ವೋಚರ್ ಗಳನ್ನು ನೀಡಲಿದೆ. 
ಭಾರತೀಯ ಚುನಾವಣಾ ಆಯೋಗ ಸಾಂದರ್ಭಿಕ ಚಿತ್ರ
ಭಾರತೀಯ ಚುನಾವಣಾ ಆಯೋಗ ಸಾಂದರ್ಭಿಕ ಚಿತ್ರ

ನವದೆಹಲಿ: ಸಾರ್ವಜನಿಕ ಪ್ರಸಾರ ಸಂಸ್ಥೆಗಳಾದ ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದ ಮೂಲಕ ಪ್ರಚಾರ ನಡೆಸುವುದಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಇನ್ನು ಮುಂದೆ ಏರ್ ಟೈಮ್ ವೋಚರ್ ಗಳನ್ನು ನೀಡಲಿದೆ. 

ಮುಂದಿನ ದಿನಗಳಲ್ಲಿ ಸಾರ್ವಜನಿಕ ಪ್ರಸಾರ ಸಂಸ್ಥೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಸ್ಲಾಟ್ ಗಳನ್ನು ಆನ್ ಲೈನ್ ಮೂಲಕ ನಿಗದಿಪಡಿಸಲಾಗುತ್ತದೆ ಇದರಿಂದ ಕಾರ್ಯಕ್ಷಮತೆ ಹೆಚ್ಚಳವಾಗಲಿದೆ ಎಂದು ಆಯೋಗ ಮಂಗಳವಾರ ಹೇಳಿದೆ. 

ರಾಜಕೀಯ ಪಕ್ಷಗಳು ಸರ್ಕಾರಿ ಸ್ವಾಮ್ಯದ ವಿದ್ಯುನ್ಮಾನ ಮಾಧ್ಯಮದ ಬಳಕೆಗೆ ಇರುವ ಈಗಿನ ಯೋಜನೆಗೆ ಆಯೋಗ ತಿದ್ದುಪಡಿ ತಂದಿದೆ. 

ಐಟಿ ವೇದಿಕೆಯ ಮೂಲಕ ಡಿಜಿಟಲ್ ಏರ್ ಟೈಮ್ ವೋಚರ್ ಗಳನ್ನು ನೀಡುವ ಮೂಲಕ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿ ಪರಿಣಾಮವಾಗಿ ಇನ್ನು ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಏರ್ ಟೈಮ್ ವೋಚರ್ ಗಳನ್ನು ಪಡೆಯಲು ಪ್ರತಿನಿಧಿಗಳನ್ನು ಆಯೋಗದ ಕಚೇರಿಗೆ ಕಳಿಸಬೇಕಿತ್ತು ಆದರೆ ಇನ್ನು ಮುಂದೆ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com