NDA vs INDIA: ವಿಪಕ್ಷಗಳ ಮಿತ್ರಕೂಟದ ಹೆಸರಿಗೆ ನಿತೀಶ್ ಕುಮಾರ್ ವಿರೋಧವೇಕೆ? ಆ ಹೆಸರಲ್ಲೇನಿದೆ?

ವಿಪಕ್ಷಗಳ ಮಿತ್ರಕೂಟದ INDIA ಹೆಸರಿಗೆ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದರಂತೆ.. ಆದರೆ ಈ ಹೆಸರಿಗೆ ಎಲ್ಲರೂ ಒಪ್ಪಿಗೆ ನೀಡಿದ ಬಳಿಕ ಒಲ್ಲದ ಮನಸ್ಸಿನಿಂದಲೇ ನಿತೀಶ್ ಕೂಡ ಆ ಹೆಸರಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.
ನಿತೀಶ್ ಕುಮಾರ್ ಮತ್ತು INDIA
ನಿತೀಶ್ ಕುಮಾರ್ ಮತ್ತು INDIA
Updated on

ನವದೆಹಲಿ: ವಿಪಕ್ಷಗಳ ಮಿತ್ರಕೂಟದ INDIA ಹೆಸರಿಗೆ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದರಂತೆ.. ಆದರೆ ಈ ಹೆಸರಿಗೆ ಎಲ್ಲರೂ ಒಪ್ಪಿಗೆ ನೀಡಿದ ಬಳಿಕ ಒಲ್ಲದ ಮನಸ್ಸಿನಿಂದಲೇ ನಿತೀಶ್ ಕೂಡ ಆ ಹೆಸರಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ವಿರೋಧಪಕ್ಷಗಳ ಸಭೆಯಲ್ಲಿ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಜತೆಗೆ ಹೆಸರು ಸೂಚಿಸುವ ಸಂಬಂಧ ಎಲ್ಲಾ ನಾಯಕರಿಂದ ಸಲಹೆಗಳನ್ನು ಕೇಳಲಾಗಿತ್ತು. ಬಳಿಕ ಅಂತಿಮವಾಗಿ ಇಂಡಿಯಾ ಎಂದೇ ಹೆಸರಿಡಲು ನಿರ್ಣಯಕ್ಕೆ ಬರಲಾಗಿದೆ. ಆದರೆ  ವಿಪಕ್ಷಗಳ ಒಕ್ಕೂಟಕ್ಕೆ ನೀಡಲಾಗಿರುವ ನೂತನ INDIA ಹೆಸರಿಗೆ ಮೊದಲು ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದರಂತೆ. INDIA ಪದದಲ್ಲಿ ಎನ್ ಡಿಎ ಇರುವ ಕಾರಣ ನಿತೀಶ್ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 

ಇದಕ್ಕೆ ಪರ್ಯಾಯವಾಗಿ ನಿತೀಶ್ ಕುಮಾರ್ ಇಂಡಿಯಾ ಮೇನ್ ಫ್ರಂಟ್ (India Main Front-IMF) ಮತ್ತು ಇಂಡಿಯಾ ಮೇನ್ ಅಲೈಯನ್ಸ್ (India Main Alliance-IMA) ಮುಂತಾದ ಹೆಸರುಗಳನ್ನು ಸೂಚಿಸಿದ್ದರು. ನಿತೀಶ್ ಕುಮಾರ್ ರಂತೆಯೇ ಕೆಲ ಎಡ ನಾಯಕರು ಕೂಡ "ಸೇವ್ ಇಂಡಿಯಾ ಅಲೈಯನ್ಸ್" ಮತ್ತು "ವಿ ಫಾರ್ ಇಂಡಿಯಾ" ನಂತಹ ವಿಭಿನ್ನ ಪರ್ಯಾಯ ಹೆಸರುಗಳನ್ನು ಸೂಚಿಸಿದ್ದರು ಎಂದು ವರದಿಯಾಗಿದೆ. ಆದರೆ ಹೆಚ್ಚಿನ ಪಕ್ಷಗಳು INDIA ಎಂಬ ಹೆಸರನ್ನು ಅನುಮೋದಿಸಿದಂತೆ ತೋರುತ್ತಿದ್ದಂತೆ, ನಿತೀಶ್ ಕುಮಾರ್ ಅವರು ಕೂಡ ಅನ್ಯ ಮಾರ್ಗವಿಲ್ಲದೇ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆದರೆ ಮಿತ್ರಕೂಟದ ಇತರೆ ಪಕ್ಷಗಳು INDIA ಹೆಸರಿಗೆ ಒಮ್ಮತ ಸೂಚಿಸಿದ್ದರಿಂದ ಒಲ್ಲದ ಮನಸ್ಸಿನಿಂದಲೇ ನಿತೀಶ್ ಕುಮಾರ್ ಕೂಡ ‘ಇಂಡಿಯಾ’ ಹೆಸರಿಗೆ ಒಪ್ಪಿಗೆ ಸೂಚಿಸಿದ್ದಾರೆ. ‘ನೀವೆಲ್ಲರೂ ‘ಇಂಡಿಯಾ’ ಹೆಸರೇ ಸೂಕ್ತ ಎನ್ನುವುದಾದರೆ ಆದೇ ಇರಲಿ ಬಿಡಿ’ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

26 ಪಕ್ಷಗಳ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೊದಲು ವಿಪಕ್ಷಗಳ ಒಕ್ಕೂಟಕ್ಕೆ ‘ಇಂಡಿಯಾ’ ಎಂಬ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದರು. ಈ ಪದದ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಲವಾದ ವಕಾಲತ್ತು ವಹಿಸಿ ಮಾತನಾಡಿದರು. ಸುದೀರ್ಘ ಚರ್ಚೆಯ ನಂತರ ಎಲ್ಲರೂ ಇದಕ್ಕೆ ಒಮ್ಮತ ಸೂಚಿಸಿದ್ದಾರೆ. ‘ಮೋದಿಯವರು ಇಂಡಿಯಾವನ್ನು ಹೇಗೆ ವಿರೋಧಿಸುತ್ತಾರೆ. ಎನ್‌ಡಿಎಯನ್ನು ವಿರೋಧಿಸುವವರು ಐಎನ್‌ಡಿಐಎ ಜೊತೆಗಿದ್ದಾರೆ’ ಎಂದು ರಾಹುಲ್ ಸಮರ್ಥಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ತಂತ್ರ ಹೆಣೆಯುತ್ತಿರುವ 26 ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ’ (ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್– ‘ಇಂಡಿಯಾ’‌) ರಚಿಸಿಕೊಂಡಿದ್ದು, ಚುನಾವಣಾ ರಾಜಕೀಯದತ್ತ ಒಂದು ಹೆಜ್ಜೆ ಮುಂದಿಟ್ಟಿವೆ. ಮೈತ್ರಿಕೂಟದ ಮುಂದಿನ ಸಭೆಯನ್ನು ಶೀಘ್ರದಲ್ಲಿ ಮುಂಬೈಯಲ್ಲಿ ನಡೆಸಿ, 11 ಸದಸ್ಯರ ಸಮನ್ವಯ ಸಮಿತಿ ರಚಿಸಲು ಸಭೆಯಲ್ಲಿ ಪಾಲ್ಗೊಂಡ ನಾಯಕರು ತೀರ್ಮಾನಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com