ಮಕ್ಕಳ ಕಳ್ಳಸಾಗಣೆ: ಟಾಪ್ 3 ನಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ; ಕರ್ನಾಟಕಕ್ಕೆ 4ನೇ ಸ್ಥಾನ!

ಕೋವಿಡ್ ಸಾಂಕ್ರಾಮಿಕದ ನಂತರ ಭಾರತದ ವಿವಿಧ ರಾಜ್ಯಗಳಲ್ಲಿನ ಮಕ್ಕಳ ಸಾಗಣೆ ಹೆಚ್ಚಾಗಿದ್ದು, ಹೆಚ್ಚು ಮಕ್ಕಳ ಸಾಗಣೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಟಾಪ್ 3 ರಲ್ಲಿದ್ದು, ಕರ್ನಾಟಕ 4ನೇ ಸ್ಥಾನದಲ್ಲಿದೆ.
ಮಕ್ಕಳ ಕಳ್ಳಸಾಗಣೆ
ಮಕ್ಕಳ ಕಳ್ಳಸಾಗಣೆ
Updated on

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಂತರ ಭಾರತದ ವಿವಿಧ ರಾಜ್ಯಗಳಲ್ಲಿನ ಮಕ್ಕಳ ಸಾಗಣೆ ಹೆಚ್ಚಾಗಿದ್ದು, ಹೆಚ್ಚು ಮಕ್ಕಳ ಸಾಗಣೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಟಾಪ್ 3 ರಲ್ಲಿದ್ದು, ಕರ್ನಾಟಕ 4ನೇ ಸ್ಥಾನದಲ್ಲಿದೆ.

ಈ ಬಗ್ಗೆ ಗೇಮ್ಸ್ 24/7 ಮತ್ತು ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್ (ಕೆಎಸ್‌ಸಿಎಫ್) ಸಂಸ್ಥೆಗಳು ಜಂಟಿಯಾಗಿ ನಡೆಸಿದ 'ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ ವರದಿ'ಯಲ್ಲಿ ಈ ಅಂಶ ಉಲ್ಲೇಖವಾಗಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರಪ್ರದೇಶ ಮೂರು ರಾಜ್ಯಗಳು 2016 ಮತ್ತು 2022 ರ ನಡುವೆ ಗರಿಷ್ಠ ಸಂಖ್ಯೆಯ ಮಕ್ಕಳ ಕಳ್ಳಸಾಗಣೆ ವರದಿಯಾಗಿದೆ ಎಂದು ತಿಳಿಸಿದೆ.

ಅಧ್ಯಯನದ ಪ್ರಕಾರ, ಉತ್ತರ ಪ್ರದೇಶದಲ್ಲಿ ಕೋವಿಡ್ ಪೂರ್ವ ಹಂತದಲ್ಲಿ (2016-2019) 267 ಮಕ್ಕಳ ಸಾಗಣೆ ಪ್ರಕರಣಗಳು ವರದಿಯಾಗಿದ್ದರೆ, ಕೋವಿಡ್ ನಂತರದ ಹಂತದಲ್ಲಿ (2021-2022) 1,214 ಪ್ರಕರಣಗಳು ದಾಖಲಾಗಿವೆ. ಪಟ್ಟಿಯ 2ನೇ ಸ್ಥಾನದಲ್ಲಿ ಬಿಹಾರ ಇದ್ದು, ಇಲ್ಲಿ ಕೋವಿಡ್ ಪೂರ್ವದಲ್ಲಿ 543 ಮತ್ತು ಕೋವಿಡ್ ನಂತರದಲ್ಲಿ 703 ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ವರದಿಯಾಗಿವೆ. 3ನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶದಲ್ಲಿ ಕೋವಿಡ್ ಪೂರ್ವದಲ್ಲಿ 50 ಪ್ರಕರಣಗಳು ದಾಖಲಾಗಿದ್ದರೆ, ಕೋವಿಡ್ ನಂತರದಲ್ಲಿ 210 ಪ್ರಕರಣಗಳು ದಾಖಲಾಗಿವೆ. 

4ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಕೋವಿಡ್ ಪೂರ್ವದಲ್ಲಿ 6 ಮಕ್ಕಳ ಸಾಗಣೆ ಪ್ರಕರಣಗಳು ದಾಖಲಾಗಿದ್ದರೆ ಕೋವಿಡ್ ನಂತರದಲ್ಲಿ 110 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕವು ಸಾಂಕ್ರಾಮಿಕ ರೋಗದ ಪೂರ್ವದಿಂದ ನಂತರದ ದಿನಗಳ ಅಂಕಿಅಂಶಗಳಿಂದ ಮಕ್ಕಳ ಕಳ್ಳ ಸಾಗಣೆಯಲ್ಲಿ 18 ಪಟ್ಟು ಹೆಚ್ಚಳ ಕಂಡಬಂದಿದೆ. 

KSCF ನ MD ರಿಯರ್ ಅಡ್ಮಿರಲ್ ರಾಹುಲ್ ಕುಮಾರ್ ಶ್ರಾವತ್ ಅವರು ಈ ಬಗ್ಗೆ ಮಾತನಾಡಿ, "ಸಂಖ್ಯೆಗಳು ಕಠೋರ ಮತ್ತು ಚಿಂತಾಜನಕವಾಗಿ ಕಾಣುತ್ತಿದ್ದರೂ ಸಹ, ಕಳೆದ ಒಂದು ದಶಕದಲ್ಲಿ ಭಾರತವು ಮಕ್ಕಳ ಕಳ್ಳಸಾಗಣೆಯಲ್ಲಿ ವ್ಯವಹರಿಸಿದ ರೀತಿಯನ್ನು ನಿರಾಕರಿಸಲಾಗುವುದಿಲ್ಲ. ಸರ್ಕಾರ ಮಾನವ ಕಳ್ಳಸಾಗಣೆ ಮತ್ತು ಮಕ್ಕಳ ಕಳ್ಳ ಸಾಗಣೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೂ ಮತ್ತಷ್ಟು ಕಠಿಣ ಕಾನೂನುಗಳ ಮೂಲಕ ಇವುಗಳನ್ನು ನಿಯಂತ್ರಿಸುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತ್ವರಿತ ಮತ್ತು ಆಗಾಗ್ಗೆ ಮಧ್ಯಪ್ರವೇಶ, ಹಾಗೆಯೇ ರೈಲ್ವೆ ರಕ್ಷಣಾ ಪಡೆ ಮತ್ತು ಗಡಿ ಭದ್ರತಾ ಪಡೆಗಳಂತಹ ಕಾನೂನು ಜಾರಿ ಸಂಸ್ಥೆಗಳು ಕಳ್ಳಸಾಗಣೆದಾರರನ್ನು ಬಂಧಿಸುವಲ್ಲಿ ಮತ್ತು ಜಾಗೃತಿ ಮೂಡಿಸುವ ಮೂಲಕ ಕಳ್ಳಸಾಗಣೆಗೆ ಒಳಗಾದ ಮಕ್ಕಳ ಸಂಖ್ಯೆಯನ್ನು ಮೊಟಕುಗೊಳಿಸಿದೆ ಮತ್ತು ಆದಾಗ್ಯೂ ಅಂಕಿಅಂಶಗಳ ಸಂಖ್ಯೆಯಲ್ಲಿ ಗೋಚರ ಏರಿಕೆಗೆ ಅಧಿಕಾರಿಗಳ ಕರ್ತವ್ಯಲೋಪ ಕಾರಣವಾಗಿದೆ. ರಾಜಸ್ಥಾನದ ಜೈಪುರ ನಗರವು ಮಕ್ಕಳ ಕಳ್ಳಸಾಗಣೆಯ ತಾಣವಾಗಿ ಹೊರಹೊಮ್ಮಿದೆ ಎಂದು ವರದಿ ಹೇಳಿದೆ. 

13 ರಿಂದ 18 ವರ್ಷದೊಳಗಿನ ಗರಿಷ್ಠ ಸಂಖ್ಯೆಯ ಮಕ್ಕಳು ಹೆಚ್ಚಿನ ಕೈಗಾರಿಕೆಗಳಿಂದ ತೊಡಗಿಸಿಕೊಂಡಿದ್ದರೆ, ಸೌಂದರ್ಯವರ್ಧಕ ಉದ್ಯಮವು 5-8 ವರ್ಷದೊಳಗಿನ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ರಕ್ಷಿಸಲ್ಪಟ್ಟ ಮಕ್ಕಳ ಪೈಕಿ ಸುಮಾರು 80 ಪ್ರತಿಶತದಷ್ಟು ಮಕ್ಕಳು 13-18 ವರ್ಷ ವಯಸ್ಸಿನೊಳಗಿನವರು ಎಂದು ವರದಿ ಹೇಳುತ್ತದೆ. ರಕ್ಷಿಸಲ್ಪಟ್ಟ ಮಕ್ಕಳಲ್ಲಿ 80 ಪ್ರತಿಶತ ಮಕ್ಕಳು 13-18 ವರ್ಷ ವಯಸ್ಸಿನ ಹದಿಹರೆಯದವರಾಗಿದ್ದರೆ, 13 ಪ್ರತಿಶತ ಮಕ್ಕಳು 9-12 ವರ್ಷ ವಯಸ್ಸಿನವರು ಮತ್ತು 2 ಪ್ರತಿಶತಕ್ಕಿಂತ ಹೆಚ್ಚು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವರದಿಯಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com