ಗುಜರಾತ್: ಬಿಪರ್ಜಾಯ್ ಚಂಡಮಾರುತದ ಅವಧಿಯಲ್ಲಿ 707 ಮಹಿಳೆಯರಿಗೆ ಹೆರಿಗೆ!

ಗುಜರಾತ್ ನಲ್ಲಿ ಬಿಪರ್ಜಾಯ್ ಚಂಡಮಾರುತದ ಅವಧಿಯಲ್ಲಿ 707 ಮಹಿಳೆಯರಿಗೆ ಹೆರಿಗೆಯಾಗಿದೆ. 
ಬಿಪರ್ಜೋಯ್ ಚಂಡಮಾರುತ
ಬಿಪರ್ಜೋಯ್ ಚಂಡಮಾರುತ

ನವದೆಹಲಿ: ಗುಜರಾತ್ ನಲ್ಲಿ ಬಿಪರ್ಜಾಯ್ ಚಂಡಮಾರುತದ ಅವಧಿಯಲ್ಲಿ 707 ಮಹಿಳೆಯರಿಗೆ ಹೆರಿಗೆಯಾಗಿದೆ. 

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ 1,206 ಮಂದಿ ಗರ್ಭಿಣಿ ಮಹಿಳೆಯರನ್ನು ಚಂಡಮಾರುತ ಪೀಡಿತ ಪ್ರದೇಶಗಳಿಂದ ಆರೋಗ್ಯ ಹಾಗೂ ಸೌಖ್ಯ ಕೇಂದ್ರಗಳಿಗೆ ಸುರಕ್ಷಿತವಾಗಿ ಕಳುಹಿಸಲಾಗಿತ್ತು. ಈ ಪೈಕಿ 707 ಮಹಿಳೆಯರಿಗೆ ಹೆರಿಗೆಯಾಗಿದೆ ಎಂದು ತಿಳಿಸಿದೆ. 

108 ನಂಬರ್ ನ 202 ಆಂಬುಲೆನ್ಸ್ ಗಳನ್ನು ಸದಾ ಸನ್ನದ್ಧವಾಗಿರಿಸಲು ಸೂಚಿಸಲಾಗಿತ್ತು. ಗಾಯಾಗಳನ್ನು ತಕ್ಷಣವೇ ಆಸ್ಪತ್ರೆಗಳಿಗೆ ಕರೆದೊಯ್ಯಲು 302 ಸರ್ಕಾರಿ ಆಂಬುಲೆನ್ಸ್ ಗಳನ್ನು ನಿಯೋಜಿಸಲಾಗಿತ್ತು. ಇದರೊಂದಿಗೆ ರಾಜ್ಯದ 458 ಆಸ್ಪತ್ರೆಗಳಲ್ಲಿ ತುರ್ತು ಮತ್ತು ಎಲ್ಲಾ ಆಘಾತ ಸೌಲಭ್ಯಗಳಿಗಾಗಿ ಸಿದ್ಧತೆ ಮಾಡಲಾಗಿತ್ತು ಎಂದು ಸರ್ಕಾರ ಮಾಹಿತಿ ನೀಡಿದೆ.

"1,85,884 ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಆಶ್ರಯ ಮನೆಯಲ್ಲಿ ವಾಸಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿತ್ತು ಮತ್ತು ಈ ವಿಪತ್ತಿನ ಸಂದರ್ಭದಲ್ಲಿ ಅವರು ಮತ್ತು ಅವರ ಕುಟುಂಬಗಳು ಯಾವುದೇ ಸಮಸ್ಯೆ ಎದುರಿಸುವುದಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ, 73,000 ಕ್ಕೂ ಹೆಚ್ಚು ಪ್ರಾಣಿಗಳನ್ನು ಪೀಡಿತ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು ಎಂದು ಸರ್ಕಾರ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com