ಪಶ್ಚಿಮ ಬಂಗಾಳ: ಸಿಡಿಲು ಬಡಿದು 7 ಮಂದಿ ಸಾವು

ಮುಂಗಾರು ಮಳೆಯ ಜೊತೆಯ ಗುಡುಗು, ಸಿಡಿಲು ಮಿಂಚಿನ ಅಬ್ಬರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ರಾಜ್ಯದ ಮಾಲ್ಡಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಲ್ಡಾ(ಪಶ್ಚಿಮ ಬಂಗಾಳ): ಮುಂಗಾರು ಮಳೆಯ ಜೊತೆಯ ಗುಡುಗು, ಸಿಡಿಲು ಮಿಂಚಿನ ಅಬ್ಬರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ರಾಜ್ಯದ ಮಾಲ್ಡಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮಾಲ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತಿನ್ ಸಿಂಘಾನಿಯಾ, ಮಾಲ್ಡಾವನ್ನು ಅಪ್ಪಳಿಸಿದ ಗುಡುಗು ಸಹಿತ ಮಳೆಗೆ 7 ಮಂದಿ ಮೃತಪಟ್ಟಿದ್ದಾರೆ. ಅವರನ್ನು 65 ವರ್ಷದ ಕೃಷ್ಣೊ ಚೌಧರಿ, 6 ವರ್ಷದ ಉಮ್ಮೆ ಕುಲ್ಸುಮ್, 27 ವರ್ಷದ ದೆಬೋಶ್ರೀ ಮಂಡಲ್, 10 ವರ್ಷದ ಸೋಮಿತ್ ಮಂಡಲ್, 32 ವರ್ಷದ ನಜ್ರುಲ್ ಎಸ್ ಕೆ, 54 ವರ್ಷದ ರಾಬಿಜಾನ್ ಬೀಬಿ ಮತ್ತು 8 ವರ್ಷದ ಇಸಾ ಸರ್ಕಾರ್ ಎಂದು ಗುರುತಿಸಲಾಗಿದೆ. 

ಹಳೆ ಮಾಲ್ಡಾ ಪ್ರದೇಶದಲ್ಲಿ ಪ್ರಾಕೃತಿಕ ಅವಘಡಕ್ಕೆ ಒಬ್ಬರು, ಕಾಲಿಯಾಚಕ್ ಪ್ರದೇಶದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತಿನ್ ಸಿಂಘಾನಿಯಾ ತಿಳಿಸಿದ್ದಾರೆ. ಘಟನೆಯಲ್ಲಿ ಒಂಬತ್ತು ಜಾನುವಾರುಗಳು ಮೃತಪಟ್ಟಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com