ಉಗ್ರ ಸಂಘಟನೆಯ ಸಿದ್ಧಾಂತವನ್ನು ಹರಡಲು ಯತ್ನಿಸಿದ ತಂದೆ-ಮಗಳನ್ನು ಬಂಧಿಸಿದ ಗುಜರಾತ್ ಎಟಿಎಸ್!

ಹೈದರಾಬಾದ್‌ನಲ್ಲಿ ಭಯೋತ್ಪಾದಕ ಸಂಘಟನೆಯ ಸಿದ್ಧಾಂತವನ್ನು ಹರಡಲು ಸಂಚು ರೂಪಿಸಿದ ಆರೋಪದ ಮೇಲೆ ತಂದೆ ಮತ್ತು ಆತನ ಮಗಳನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.
ಯುವತಿಯ ಬಂಧನ
ಯುವತಿಯ ಬಂಧನ

ಹೈದರಾಬಾದ್: ಹೈದರಾಬಾದ್‌ನಲ್ಲಿ ಭಯೋತ್ಪಾದಕ ಸಂಘಟನೆಯ ಸಿದ್ಧಾಂತವನ್ನು ಹರಡಲು ಸಂಚು ರೂಪಿಸಿದ ಆರೋಪದ ಮೇಲೆ ತಂದೆ ಮತ್ತು ಆತನ ಮಗಳನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.

ಶಂಕಿತ ಆರೋಪಿಗಳನ್ನು ಸಾಫ್ಟ್‌ವೇರ್ ತರಬೇತುದಾರ 46 ವರ್ಷದ ಮೊಹಮ್ಮದ್ ಜಾವೇದ್ ಮತ್ತು ಅವರ ಪುತ್ರಿ 20 ವರ್ಷದ ಖತೀಜಾ ಎಂದು ಗುರುತಿಸಲಾಗಿದ್ದು, ಮಂಗಳವಾರ ಸಂಜೆ ಗೋದಾವರಿಖನಿಯ ಶ್ರೀನಗರ ಕಾಲೋನಿಯಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ಮೊಹಮ್ಮದ್ ಜಾವೇದ್ ಮತ್ತು ಖತೀಜಾ ಮೂಲತಃ ಹೈದರಾಬಾದ್‌ನ ಟೋಲಿಚೌಕಿ ಪ್ರದೇಶದವರು. ಅವರ ಬಂಧನಕ್ಕೆ ನಾಲ್ಕು ದಿನಗಳ ಮೊದಲು, ಅವರು ಸಂಬಂಧಿಕರ ಸಮಾರಂಭದಲ್ಲಿ ಭಾಗವಹಿಸಲು ತೆಲಂಗಾಣದ ರಾಮಗುಂಡಂಗೆ ಪ್ರಯಾಣ ಬೆಳೆಸಿದ್ದು ಸಂಬಂಧಿಕರ ಮನೆಯಲ್ಲಿ ತಂಗಿದ್ದರು.

ಮಹತ್ವದ ಮಾಹಿತಿಯ ಮೇರೆಗೆ ಎಟಿಎಸ್ ತಂಡ ಮಂಗಳವಾರ ಟೋಲಿಚೌಕಿಯಲ್ಲಿರುವ ಮೊಹಮ್ಮದ್ ಜಾವೇದ್ ಅವರ ನಿವಾಸದ ಮೇಲೆ ದಾಳಿ ನಡೆಸಿತು. ನಂತರ, ಅವರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ರಾಮಗುಂಡಂ ಜಿಲ್ಲೆಗೆ ತೆರಳಿದರು. ಅಲ್ಲಿ ತಂದೆ ಮತ್ತು ಮಗಳು ಇಬ್ಬರನ್ನು ಬಂಧಿಸಲಾಯಿತು.

ಎಟಿಎಸ್ ಹೈದರಾಬಾದ್‌ನ ಮೆಡಿಕಲ್ ಶಾಪ್ ಮಾಲೀಕ ಫಜಿಯುಲ್ಲಾ (41) ಅವರ ಹೇಳಿಕೆಯನ್ನೂ ದಾಖಲಿಸಿದೆ. ಅವರು ಮತ್ತೊಂದು ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ ಎಂದು ಹೇಳಲಾಗಿದೆ. ತನಿಖೆಯಲ್ಲಿ ಫಜಿಯುಲ್ಲಾ ಭಾಗಿಯಾಗಿರುವುದು ಈ ಸಮಯದಲ್ಲಿ ಬಹಿರಂಗವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com