ಅಸ್ಸಾಂ: ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದರೂ 20,000ಕ್ಕೂ ಹೆಚ್ಚು ಜನರು ಇನ್ನೂ ಬಾಧಿತ!

ಅಸ್ಸಾಂನಲ್ಲಿ ಒಟ್ಟಾರೆ ಪ್ರವಾಹ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ಆದರೆ, ಬರ್ಪೇಟಾ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಇನ್ನೂ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. 
ಬರ್ಪೇಟಾ ಜಿಲ್ಲೆಯಲ್ಲಿ ಇನ್ನೂ 20,000 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.
ಬರ್ಪೇಟಾ ಜಿಲ್ಲೆಯಲ್ಲಿ ಇನ್ನೂ 20,000 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.

ಬರ್ಪೇಟಾ: ಅಸ್ಸಾಂನಲ್ಲಿ ಒಟ್ಟಾರೆ ಪ್ರವಾಹ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ಆದರೆ, ಬರ್ಪೇಟಾ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಇನ್ನೂ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. 

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಗಳ ಪ್ರಕಾರ, ಮೂರು ಚೆಂಗಾ, ಸರ್ತೆಬರಿ ಮತ್ತು ಬರ್ಪೇಟಾ ಕಂದಾಯ ವೃತ್ತಗಳ ಅಡಿಯಲ್ಲಿ 37 ಹಳ್ಳಿಗಳು ನೀರಿನಿಂದ ಜವಾವೃತವಾಗಿವೆ.

ಕೆಳ ಅಸ್ಸಾಂ ಜಿಲ್ಲೆಯ ಒಟ್ಟು 38 ಹೆಕ್ಟೇರ್ ಬೆಳೆ ಭೂಮಿ ಪ್ರಸ್ತುತ ಜಲಾವೃತವಾಗಿದೆ. ಪ್ರವಾಹ ಪೀಡಿತ ಅನೇಕ ಗ್ರಾಮಸ್ಥರು ಕಳೆದ ವಾರದಿಂದ ತಮ್ಮ ಮನೆಗಳು ಜಲಾವೃತವಾಗಿರುವುದರಿಂದ ರಸ್ತೆಗಳು ಮತ್ತು ಇತರೆ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

ತಾವು ಕಳೆದ ಎಂಟು ದಿನಗಳಿಂದ ರಸ್ತೆಯಲ್ಲೇ ವಾಸಿಸುತ್ತಿರುವುದಾಗಿ ಅಗ್ಡಿಯಾ ಪಥರ್ ಪ್ರದೇಶದ ಪ್ರವಾಹ ಪೀಡಿತ ಗ್ರಾಮಸ್ಥ ಕಂಚು ಮಿಯಾ ಹೇಳಿದರು.

'ಪ್ರವಾಹದ ನೀರು ಇಡೀ ಗ್ರಾಮವನ್ನು ಮುಳುಗಿಸಿತು. ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸಿದೆ. ಆದರೆ, ಪ್ರವಾಹದ ನೀರು ಇನ್ನೂ ಇದೆ. ನಾವು ನಮ್ಮ ಗ್ರಾಮಕ್ಕೆ ಹೋಗಲು ಸಾಧ್ಯವಿಲ್ಲ. ಇತರ ಗ್ರಾಮಸ್ಥರು ಸಹ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವು ಗ್ರಾಮಸ್ಥರು ಈಗ ತಮ್ಮ ಮನೆಗೆ ತೆರಳಿದ್ದಾರೆ. ನನಗೆ ಪರಿಹಾರ ಸಾಮಗ್ರಿಗಳು ಸಿಗುತ್ತಿಲ್ಲ. ನಾನು ದಿನಗೂಲಿ ಕಾರ್ಮಿಕ. ಪ್ರವಾಹದಿಂದ ನನ್ನ ಗೃಹೋಪಯೋಗಿ ವಸ್ತುಗಳು, ಸಾಮಗ್ರಿಗಳು ಹಾನಿಗೀಡಾಗಿವೆ' ಎಂದು ಕಂಚು ಮಿಯಾ ಹೇಳಿದ್ದಾರೆ.

ಬರ್ಪೇಟಾ ಜಿಲ್ಲೆಯಲ್ಲಿ ಸುಮಾರು 21000 ಸಾಕುಪ್ರಾಣಿಗಳು ಸಹ ಈ ಪ್ರವಾಹದಿಂದ ಬಾಧಿತವಾಗಿವೆ. ಮತ್ತೊಂದೆಡೆ, ಅಸ್ಸಾಂನ ಬಜಾಲಿ, ಬಾರ್ಪೇಟಾ, ಕಮ್ರೂಪ್, ಲಖಿಂಪುರ ಮತ್ತು ಸೋನಿತ್ಪುರ್ ಜಿಲ್ಲೆಗಳಲ್ಲಿ ಸುಮಾರು 38,000 ಜನರು ಇನ್ನೂ ಪ್ರವಾಹದಿಂದ ಬಳಲುತ್ತಿದ್ದಾರೆ.

ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 1526.08 ಹೆಕ್ಟೇರ್ ಬೆಳೆಗಳು ಪ್ರಸ್ತುತ ಜಲಾವೃತವಾಗಿವೆ. ಈ ವರ್ಷದ ಪ್ರವಾಹಕ್ಕೆ ಇದುವರೆಗೆ ಏಳು ಮಂದಿ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com