'ಅಭಿವೃದ್ಧಿ ಹೊಂದಿದ' ಗುಜರಾತ್‌ನಲ್ಲಿ ಹೆಚ್ಚುತ್ತಿದ ಅಪೌಷ್ಟಿಕತೆ!

ಅಭಿವೃದ್ಧಿ ಹೊಂದಿದ ರಾಜ್ಯ’ ಎಂದು ಪರಿಗಣಿಸಲ್ಪಟ್ಟಿರುವ ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ‘ಅಭಿವೃದ್ಧಿ ಹೊಂದಿದ ರಾಜ್ಯ’ ಎಂದು ಪರಿಗಣಿಸಲ್ಪಟ್ಟಿರುವ ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಕೋವಿಡ್-19 ಅವಧಿಯಲ್ಲಿ, ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಆಶ್ಚರ್ಯಕರವಾಗಿ ಏರಿಕೆಯಾಗಿದೆ. ಅದು ನಗರ ಪ್ರದೇಶಗಳಿಗಿಂತ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದೆ.

ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವಿಭಾವರಿಬೆನ್ ದವೆ ಅವರು, ಅಹಮದಾಬಾದ್ ಜಿಲ್ಲೆಯಲ್ಲಿ 2236 ಮಕ್ಕಳು ಹಾಗೂ ಬುಡಕಟ್ಟು ಜಿಲ್ಲೆಯಾದ ದಾಹೋಡ್‌ನಲ್ಲಿ 18,326 ಅಪೌಷ್ಟಿಕ ಮಕ್ಕಳಿದ್ದಾರೆ ಎಂದು ತಿಳಿಸಿದರು. ದಾಹೋದ್‌ನಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಅಹಮದಾಬಾದ್‌ಗಿಂತ ಎಂಟು ಪಟ್ಟು ಹೆಚ್ಚಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ದಾಹೋದ್‌ನಲ್ಲಿರುವ 18,326 ಅಪೌಷ್ಟಿಕ ಮಕ್ಕಳು 6 ವರ್ಷದೊಳಗಿನವರಾಗಿದ್ದಾರೆ. ಅಹಮದಾಬಾದ್‌ನಲ್ಲಿ 497 ಕಡಿಮೆ ತೂಕದ ಮಕ್ಕಳಿದ್ದರೆ, ದಾಹೋದ್‌ನಲ್ಲಿ 5,101 ಕಡಿಮೆ ತೂಕದ ಮಕ್ಕಳಿದ್ದಾರೆ ಎಂದು ದವೆ ಮಾಹಿತಿ ನೀಡಿದ್ದಾರೆ. 

ಡ್ಯಾಂಗ್ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 575 ಅಪೌಷ್ಟಿಕ ಮಕ್ಕಳು ವರದಿಯಾಗಿದ್ದು, ನರ್ಮದಾ ಜಿಲ್ಲೆಯಲ್ಲಿ 2,443 ಅಪೌಷ್ಟಿಕ ಮಕ್ಕಳಿದ್ದಾರೆ ಎಂದು ಗುಜರಾತ್ ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com