ಚೆನ್ನೈ: ದೇವಸ್ಥಾನದ ಉತ್ಸವದ ವೇಳೆ ಜನರೇಟರ್‌ಗೆ ಕೂದಲು ಸಿಲುಕಿ 13 ವರ್ಷದ ಬಾಲಕಿ ಸಾವು

ಕಾಂಚೀಪುರಂ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಎತ್ತಿನ ಗಾಡಿಯಲ್ಲಿ ಇರಿಸಲಾಗಿದ್ದ ಜನರೇಟರ್‌ಗೆ ಕೂದಲು ಸಿಲುಕಿ 13 ವರ್ಷದ ಬಾಲಕಿಯೊಬ್ಬಳು ಸೋಮವಾರ ಸಾವಿಗೀಡಾಗಿದ್ದಾಳೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಕಾಂಚೀಪುರಂ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಎತ್ತಿನ ಗಾಡಿಯಲ್ಲಿ ಇರಿಸಲಾಗಿದ್ದ ಜನರೇಟರ್‌ಗೆ ಕೂದಲು ಸಿಲುಕಿ 13 ವರ್ಷದ ಬಾಲಕಿಯೊಬ್ಬಳು ಸೋಮವಾರ ಸಾವಿಗೀಡಾಗಿದ್ದಾಳೆ. ಸಂತ್ರಸ್ತೆಯನ್ನು ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ವಿಚ್ಚಂತಂಗಲ್ ಗ್ರಾಮದ ಎಸ್ ಲಾವಣ್ಯ ಎಂದು ಗುರುತಿಸಲಾಗಿದೆ.

ಲಾವಣ್ಯ ಮೂರು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಆಕೆಯ ತಂದೆ ಸರವಣನ್ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಲಾವಣ್ಯ ಮತ್ತು ಆಕೆಯ ಕಿರಿಯ ಸಹೋದರ ಭುವನೇಶ್ (9) ತಮ್ಮ ಅಜ್ಜ-ಅಜ್ಜಿಯಾದ ಕಾಂದೀಪನ್ ಮತ್ತು ಲತಾ ಅವರೊಂದಿಗೆ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಭಾನುವಾರ ರಾತ್ರಿ ಗ್ರಾಮದಲ್ಲಿ ದೇವಸ್ಥಾನದ ಉತ್ಸವವಿತ್ತು. 'ದೇವತೆಯಿದ್ದ ರಥವನ್ನು ಜನರು ಎಳೆಯುತ್ತಿರುವಾಗ, ಡೀಸೆಲ್ ಜನರೇಟರ್ ಹೊಂದಿದ್ದ ಎತ್ತಿನ ಬಂಡಿಯನ್ನು ರಥದ ಹಿಂಭಾಗದಲ್ಲಿ ಇರಿಸಲಾಗಿತ್ತು. ಮಕ್ಕಳು ಜನರೇಟರ್ ಸುತ್ತಲೂ ಜಮಾಯಿಸಿದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

'ರಾತ್ರಿ 10 ಗಂಟೆ ಸುಮಾರಿಗೆ ಜನರೇಟರ್ ಬಳಿ ಕುಳಿತಿದ್ದ ಲಾವಣ್ಯ ಅವರ ಕೂದಲು ಜನರೇಟರ್‌ಗೆ ಸಿಕ್ಕಿ ಹಾಕಿಕೊಂಡಿದೆ. ಲೌಡ್ ಸ್ಪೀಕರ್‌ಗಳಿಂದ ಕಾರಣ ಸಹಾಯಕ್ಕಾಗಿ ಲಾವಣ್ಯ ಅವರು ಕೂಗಿಕೊಂಡರೂ ಯಾರಿಗೂ ಕೇಳಿಸಿಲ್ಲ. ನಂತರ, ಜನರೇಟರ್ ಸುಮ್ಮನಾಗಿದೆ. ಬಂಡಿಯಲ್ಲಿನ ದೀಪಗಳು ಆಫ್ ಆಗಿವೆ. ನಂತರ ಕಿರುಚಾಟ ಕೇಳಿದ ಜನರು ಸಹಾಯಕ್ಕೆ ಧಾವಿಸಿದ್ದಾರೆ' ಎಂದು ಪೊಲೀಸರು ಹೇಳಿದರು.

ಲಾವಣ್ಯ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಲಾವಣ್ಯ ಅವರ ತಲೆಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಲಾವಣ್ಯ ಸೋಮವಾರ ಮೃತಪಟ್ಟಿದ್ದಾರೆ. ಮಗರಾಳ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಪೊಲೀಸರು ಜನರೇಟರ್ ಆಪರೇಟರ್ ಮುನುಸಾಮಿಯನ್ನು ಬಂಧಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಮಂಗಳವಾರ ನಡೆದ ಲಾವಣ್ಯ ಅವರ ಅಂತ್ಯಕ್ರಿಯೆಯಲ್ಲಿ ಸಮೀಪದ ಗ್ರಾಮಗಳ ಜನರು ಪಾಲ್ಗೊಂಡಿದ್ದರು. ಲಾವಣ್ಯ ವಿದ್ಯಾಭ್ಯಾಸದಲ್ಲಿ ಉತ್ತಮಳಾಗಿದ್ದು, ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ್ದಳು ಎಂಬುದು ಗ್ರಾಮಸ್ಥರ ಮಾತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com