6 ತಿಂಗಳ ಕನಿಷ್ಠ ಕಾಯುವಿಕೆ ಸಮಯ ನೀಡದೇ ವಿವಾಹಗಳನ್ನು ರದ್ದುಗೊಳಿಸುವ ಅಧಿಕಾರ ತನಗೆ ಇದೆ: ಸುಪ್ರೀಂ ಕೋರ್ಟ್

ವಿಶೇಷ ಪ್ರಕರಣಗಳಲ್ಲಿ ವಿಚ್ಛೇದನಕ್ಕೆ 6 ತಿಂಗಳ ಕನಿಷ್ಠ ಕಾಯುವಿಕೆ ಸಮಯ ನೀಡದೇ ವಿವಾಹಗಳನ್ನು ರದ್ದುಗೊಳಿಸುವ ಅಧಿಕಾರ ತನಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ವಿಶೇಷ ಪ್ರಕರಣಗಳಲ್ಲಿ ವಿಚ್ಛೇದನಕ್ಕೆ 6 ತಿಂಗಳ ಕನಿಷ್ಠ ಕಾಯುವಿಕೆ ಸಮಯ ನೀಡದೇ ವಿವಾಹಗಳನ್ನು ರದ್ದುಗೊಳಿಸುವ ಅಧಿಕಾರ ತನಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
  
ಸರಿಪಡಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬುವ ಮಟ್ಟಕ್ಕೆ ವಿವಾಹಗಳು ಮುರಿದುಬಿದ್ದಲ್ಲಿ, ಅಂತಹ ವಿವಾಹವನ್ನು ಕಡ್ಡಾಯ 6 ತಿಂಗಳ ಅವಧಿ ಇಲ್ಲದೇ ರದ್ದುಗೊಳಿಸಬಹುದಾದ ಅಧಿಕಾರ ಸಂವಿಧಾನದ ಆರ್ಟಿಕಲ್ 143 ರ ಅಡಿಯಲ್ಲಿ ತನಗೆ ಇದೆ ಎಂದು ನ್ಯಾ.ಎಸ್ ಕೆ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಹಾಗೂ ಜೆಕೆ ಮಹೇಶ್ವರಿ ಅವರಿದ್ದ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಹೇಳಿದ್ದು, ಇದಕ್ಕೆ ಕೆಲವು ಷರತ್ತುಗಳು ಅನ್ವಯಿಸುತ್ತದೆ ಎಂದು ಹೇಳಿದೆ.

ಸರಿಪಡಿಸಲು ಸಾಧ್ಯವೇ ಆಗದ ವಿವಾಹಗಳಲ್ಲಿ, ವಿಚ್ಛೇದನ ಪಡೆಯುವುದಕ್ಕೆ ಕೌಟುಂಬಿಕ ನ್ಯಾಯಾಲಯಗಳ ದೀರ್ಘಾವಧಿಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೇ, ಸಂವಿಧಾನದ ಸೆಕ್ಷನ್ 142 ಅಡಿಯಲ್ಲಿ ವಿವಾಹ ರದ್ದುಗೊಳಿಸುವ ಸಂಬಂಧದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ಸೆ.29, 2022 ರಂದು ಕೋರ್ಟ್ ವಿಚಾರಣೆಯನ್ನು ಮುಕ್ತಾಯಗೊಳಿಸಿ ತಮ್ಮ ನಿರ್ಧಾರವನ್ನು ಕಾಯ್ದಿರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com