ಅರುಣಾಚಲ ಪ್ರದೇಶದ ಜಾಗಗಳ ಮರು ನಾಮಕರಣ: ತುಟಿ ಬಿಚ್ಚದ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ!

ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ಜಾಗಗಳನ್ನು ತನ್ನದೆಂದು ಹೇಳಿಕೊಂಡಿರುವ ಚೀನಾ ಅದರ ಹೆಸರುಗಳನ್ನೂ ಕೂಡ ಬದಲಿಸಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡದೇ ಇರುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ಜಾಗಗಳನ್ನು ತನ್ನದೆಂದು ಹೇಳಿಕೊಂಡಿರುವ ಚೀನಾ ಅದರ ಹೆಸರುಗಳನ್ನೂ ಕೂಡ ಬದಲಿಸಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡದೇ ಇರುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ಕಿಡಿಕಾರಿದೆ.

ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದ್ದಕ್ಕೆ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ನೆರೆಯ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ಲೀನ್ ಚಿಟ್ ಮತ್ತು ಗಡಿಯಲ್ಲಿ ಚೀನಾದ ಕ್ರಮಗಳ ಬಗ್ಗೆ ಅವರ ನಿರರ್ಗಳ ಮೌನದ ಪರಿಣಾಮವಾಗಿದೆ ಎಂದು ಹೇಳಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ, 'ಭಾರತ-ಚೀನಾ ಗಡಿ ಪರಿಸ್ಥಿತಿ ಈಗ "ಸ್ಥಿರವಾಗಿದೆ" ಎಂದು ಚೀನಾದ ಉನ್ನತ ರಾಜತಾಂತ್ರಿಕರೊಬ್ಬರು ಇತ್ತೀಚೆಗೆ ಹೇಳಿದ್ದಾರೆ. ಆದರೆ ಚೀನಾದ ಪ್ರಚೋದನೆಗಳು ಮತ್ತು ಉಲ್ಲಂಘನೆಗಳು ಮುಂದುವರಿದಿವೆ. 2017 ಮತ್ತು 2021 ರಲ್ಲಿ ಮೊದಲು ಮಾಡಿದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಈಗ ಮೂರನೇ ಸೆಟ್ ನಲ್ಲಿ ಚೀನೀ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ.

ಜೂನ್ 2020 ರಲ್ಲಿ ಚೀನಾಕ್ಕೆ ಪ್ರಧಾನಿ ಮೋದಿಯವರ ಕ್ಲೀನ್ ಚಿಟ್ ಮತ್ತು ಚೀನಾದ ಕ್ರಮಗಳ ಬಗ್ಗೆ ಅವರ ನಿರರ್ಗಳ ಮೌನಕ್ಕಾಗಿ ದೇಶದ ಪ್ರಜೆಗಳು ಮೌಲ್ಯ ತೆರಬೇಕಾಗಿದೆ. ಸುಮಾರು ಮೂರು ವರ್ಷಗಳ ನಂತರ, ಚೀನಾದ ಪಡೆಗಳು ನಾವು ಹಿಂದೆ ಅಡೆತಡೆಯಿಲ್ಲದ ಪ್ರವೇಶವನ್ನು ಹೊಂದಿದ್ದ ಆಯಕಟ್ಟಿನ ಡೆಪ್ಸಾಂಗ್ ಬಯಲು ಪ್ರದೇಶಕ್ಕೆ ನಮ್ಮ ಗಸ್ತು ಪ್ರವೇಶವನ್ನು ನಿರಾಕರಿಸುವುದನ್ನು ಮುಂದುವರೆಸಿದೆ. ಮತ್ತು ಈಗ ಚೀನಿಯರು ಅರುಣಾಚಲ ಪ್ರದೇಶದ ಯಥಾಸ್ಥಿತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಅರುಣಾಚಲ ಪ್ರದೇಶದ ಜನರು ಭಾರತದ ಹೆಮ್ಮೆ ಮತ್ತು ದೇಶಭಕ್ತ ಪ್ರಜೆಗಳು. ಈ ವಾಸ್ತವಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಭಾರತದ ಮತ್ತು ಎಲ್ಲಾ ಭಾರತೀಯರ ಸಾಮೂಹಿಕ ಸಂಕಲ್ಪದಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಚೀನಾ ವಿರುದ್ಧ ಖರ್ಗೆ ಕಿಡಿ
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಕಲ್ಲಿಕಾರ್ಜುನ ಖರ್ಗೆ ಅವರು, 'ಮೋದಿಯವರು ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ ಪರಿಣಾಮ ದೇಶವು ಎದುರಿಸುತ್ತಲೇ ಇದೆ. ಮೂರನೇ ಬಾರಿಗೆ ಚೀನಾ ಅರುಣಾಚಲ ಪ್ರದೇಶದಲ್ಲಿ ನಮ್ಮ ಪ್ರದೇಶಗಳನ್ನು ಮರುಹೆಸರಿಸಲು ಧೈರ್ಯ ಮಾಡಿದೆ. ಏಪ್ರಿಲ್ 21, 2017 -- 6 ಸ್ಥಳಗಳು, ಡಿಸೆಂಬರ್ 30, 2021 -- 15 ಸ್ಥಳಗಳು, ಏಪ್ರಿಲ್ 3, 2023 -- 11 ಸ್ಥಳಗಳ ಮರು ಹೆಸರಿಸಲಾಗಿದೆ. ಅರುಣಾಚಲ ಪ್ರದೇಶವು ಮತ್ತು ಉಳಿಯುತ್ತದೆ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮಾತನಾಡಿ, 'ಗಾಲ್ವಾನ್ ನಂತರ, ಚೀನಾಕ್ಕೆ ಮೋದಿಜೀಯವರ ಕ್ಲೀನ್ ಚಿಟ್‌ನ ಪರಿಣಾಮಗಳನ್ನು ದೇಶ ಸಮಸ್ಯೆ ಎದುರಿಸುತ್ತಿದೆ. ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಈಗ "ಸ್ಥಿರವಾಗಿದೆ" ಎಂದು ಇತ್ತೀಚೆಗೆ ಚೀನಾದ ಉನ್ನತ ರಾಜತಾಂತ್ರಿಕರೊಬ್ಬರು ಪ್ರತಿಪಾದಿಸಿದ್ದಾರೆ. ಆದರೆ ಚೀನಾದ ಪ್ರಚೋದನೆಗಳು ಮತ್ತು ಉಲ್ಲಂಘನೆಗಳು ಮುಂದುವರೆದಿದೆ. ಇದು ಈಗ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮೂರನೇ ಸೆಟ್ ಚೀನೀ ಹೆಸರುಗಳನ್ನು ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು 2017 ಮತ್ತು 2021 ರಲ್ಲಿ ಚೀನಾ ಇದೇ ರೀತಿಯ ದುಸ್ಸಾಹಸ ಮಾಡಿತ್ತು. ಜೂನ್ 2020 ರಲ್ಲಿ ಚೀನಾಕ್ಕೆ ಪ್ರಧಾನಿ ಮೋದಿಯವರ ಕ್ಲೀನ್ ಚಿಟ್ ಮತ್ತು ಚೀನಾದ ಕ್ರಮಗಳ ಬಗ್ಗೆ ಅವರ ನಿರರ್ಗಳ ಮೌನಕ್ಕಾಗಿ ನಾವು ಪಾವತಿಸುತ್ತಿರುವ ಬೆಲೆ ಇದು" ಎಂದು ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com