ತಾಂತ್ರಿಕ ದೋಷ: ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನ ತೆಲಂಗಾಣದಲ್ಲಿ ತುರ್ತು ಭೂಸ್ಪರ್ಶ!
ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳವಾರ ತೆಲಂಗಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ.
Published: 04th April 2023 12:40 PM | Last Updated: 04th April 2023 12:40 PM | A+A A-

ಇಂಡಿಗೋ ವಿಮಾನ
ನವದೆಹಲಿ: ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳವಾರ ತೆಲಂಗಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ.
ತೆಲಂಗಾಣ ಶಂಶಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಆರ್‌ಜಿಐಎ) ಇಂಡಿಗೋ 6E897 ಸಂಖ್ಯೆಯ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. 137 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ 6E897 ವಿಮಾನ ಶಂಶದಾಬಾದ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 6:15ರ ವೇಳೆ ತುರ್ತು ಭೂಸ್ಪರ್ಶ ಮಾಡಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ದೃಢಪಡಿಸಿದೆ.
ಇದನ್ನೂ ಓದಿ: ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಬಸ್ ಡಿಕ್ಕಿಯಾಗಿ ಭಾರತೀಯ ಮೂಲದ ವ್ಯಕ್ತಿ ಸಾವು
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ ವಿಮಾನಯಾನ ಸಂಸ್ಥೆ, 'ವಿಮಾನ ವಾರಣಾಸಿಗೆ ಪ್ರಯಾಣಿಸುತ್ತಿದ್ದ ವೇಳೆ ಪೈಲಟ್ ತಾಂತ್ರಿಕ ದೋಷವನ್ನು ಗಮನಿಸಿ ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸಿದ್ದಾರೆ. ವಿಮಾನವು ಪ್ರಸ್ತುತ ಹೈದರಾಬಾದ್‌ನಲ್ಲಿದ್ದು, ಅಗತ್ಯ ತಪಾಸಣೆಗೆ ಒಳಗಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅಂತೆಯೇ "ಯಾವುದೇ ವಿಳಂಬವನ್ನು ತಪ್ಪಿಸಲು, ಪ್ರಯಾಣಿಕರಿಗೆ ವಾರಣಾಸಿಗೆ ತೆರಳಲು ಪರ್ಯಾಯ ವಿಮಾನವನ್ನು ಒದಗಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಿಂದಿನ ದಿನ, ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ತೆಲಂಗಾಣದ ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಆರ್‌ಜಿಐಎ) ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಇದನ್ನೂ ಓದಿ: ಮುಂಬೈ: ಇಂಡಿಗೋ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಸ್ವೀಡನ್ ಪ್ರಜೆ ಬಂಧನ
‘ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ವಿಮಾನವನ್ನು ತುರ್ತಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ‘ ಎಂದು ಡಿಜಿಸಿಎ ತಿಳಿಸಿದೆ.
ಘಟನೆಯ ಕುರಿತ ತನಿಖೆಗೆ ಡಿಜಿಸಿಎ ಆದೇಶಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.