ಕೃಷ್ಣಗಿರಿ: ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ 55 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನನ್ನು ಕೊಲೆ ಮಾಡಿದ್ದು ಇನ್ನು ಮೊಮ್ಮಗನ ರಕ್ಷಣೆಗೆ ಬಂದಿದ್ದ ತಾಯಿಯನ್ನೂ ಆವೇಶದ ಭರದಲ್ಲಿ ಕೊಲೆ ಮಾಡಿರುವ ಘಟನೆ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಬಳಿ ನಡೆದಿದೆ.
ಆರೋಪಿಯನ್ನು ಪಿ ದಂಡಪಾಣಿ ಎಂದು ಗುರುತಿಸಲಾಗಿದ್ದು ಆತ ತಿರುಪ್ಪೂರ್‌ನ ಹೋಸೈರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ದಂಡಪಾಣಿ ಮಗು 25 ವರ್ಷದ ಸುಭಾಷ್ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದನು. ಸುಭಾಷ್ ಅರಿಯಾಲೂರು ಮೂಲದ 24 ವರ್ಷದ ದಲಿತ ಯುವತಿ ಮತ್ತು ಸಹೋದ್ಯೋಗಿ ಅನುಷಾಳನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾರ್ಚ್ ಕೊನೆಯ ವಾರದಲ್ಲಿ ಅವರು ಮದುವೆಯಾದ್ದು ಮದುವೆಯ ನಂತರ ದಂಪತಿಗಳು ತಿರುಪತ್ತೂರಿನಲ್ಲಿ ನೆಲೆಸಿದ್ದರು. ಮಗ ದಲಿತ ಯುವತಿಯನ್ನು ಮದುವೆಯಾಗುವುದನ್ನು ದಂಡಪಾಣಿ ವಿರೋಧಿಸಿದ್ದರು. ಹೀಗಾಗಿ ಕಳೆದ ವಾರ ಕೃಷ್ಣಗಿರಿ ಜಿಲ್ಲೆಯ ಅರುಣಾಪತಿ ಎಂಬ ತಮ್ಮ ಗ್ರಾಮಕ್ಕೆ ಮರಳಿದರು. ಅಲ್ಲಿ ಅವರ ತಾಯಿ ಕನ್ನಮ್ಮಾಳ್ ವಾಸಿಸುತ್ತಿದ್ದರು. ಯುವ ದಂಪತಿಗಳನ್ನು ಗ್ರಾಮಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿ ರಾಜಿ ಮಾಡಿಕೊಳ್ಳುವಂತೆ ತಾಯಿಗೆ ದಂಡಪಾಣಿ ಹೇಳಿದ್ದರು.
ಕಳೆದ ವಾರ ಸುಭಾಷ್ ತನ್ನ ಅಜ್ಜಿಯನ್ನು ಭೇಟಿಯಾಗಲು ತನ್ನ ಹೆಂಡತಿಯೊಂದಿಗೆ ಗ್ರಾಮಕ್ಕೆ ಬಂದಿದ್ದನು. ಈ ವೇಳೆ ಆತನ ಅಜ್ಜಿ, ಸ್ಪಷ್ಟವಾಗಿ, ಸುಬಾಷ್ ನನ್ನು ಬೆಂಬಲಿಸಿದರು ಎಂದು ಉತ್ತಂಗರೈ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ (ಡಿಎಸ್ಪಿ) ಅಮಲಾ ಅಡ್ವಿನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಆದರೆ, ಶನಿವಾರ ನಸುಕಿನಲ್ಲಿ ದಂಡಪಾಣಿ ದುಡುಕಿನ ನಿರ್ಧಾರ ಮಾಡಿದ್ದಾರೆ. ಮಗನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಮೊಮ್ಮಗನ ಕಿರುಚಾಟ ಕೇಳಿ ರಕ್ಷಿಸಲು ಯತ್ನಿಸಿದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ತನ್ನ ಸೊಸೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಆದರೆ ವಧು ಗಾಯಗಳಿಂದ ಪಾರಾಗಿದ್ದಾಳೆ.
ಏತನ್ಮಧ್ಯೆ, ನೆರೆಹೊರೆಯವರು ಸುಬಾಷ್, ಆತನ ಪತ್ನಿ ಮತ್ತು ಅಜ್ಜಿಯನ್ನು ಉತ್ತಂಗರೈನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಸುಬಾಷ್ ಮತ್ತು ಕನ್ನಮ್ಮಾಳ್ ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದರು. ಪೊಲೀಸರು ದಂಡಪಾಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಕೃಷ್ಣಗಿರಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾದ ಎರಡನೇ ಶಂಕಿತ 'ಮರ್ಯಾದೆ ಹತ್ಯೆ' ಇದಾಗಿದೆ. ಕಳೆದ ತಿಂಗಳು ವ್ಯಕ್ತಿಯೊಬ್ಬ ಅದೇ ಜಾತಿಗೆ ಸೇರಿದ ತನ್ನ ಅಳಿಯನನ್ನು ಕೊಲೆ ಮಾಡಿದ್ದನು.
Advertisement