5 ವರ್ಷಗಳಲ್ಲಿ ಭಾರತದಿಂದ 1.93 ಲಕ್ಷ ಕೋಟಿ ರೂ. ಮೊತ್ತದ ರಕ್ಷಣಾ ಉಪಕರಣ ಆಮದು

ಭಾರತ ತನ್ನ ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ಉಪಕರಣಗಳ ಪ್ರಮುಖ ಪಾಲನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದ್ದು 5 ವರ್ಷಗಳಲ್ಲಿ 1.93 ಲಕ್ಷ ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರಗಳನ್ನು ಹಾಗೂ ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಂಡಿದೆ. 
ರಕ್ಷಣಾ ಉಪಕರಣಗಳು (ಸಾಂಕೇತಿಕ ಚಿತ್ರ)
ರಕ್ಷಣಾ ಉಪಕರಣಗಳು (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತ ತನ್ನ ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ಉಪಕರಣಗಳ ಪ್ರಮುಖ ಪಾಲನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದ್ದು 5 ವರ್ಷಗಳಲ್ಲಿ 1.93 ಲಕ್ಷ ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರಗಳನ್ನು ಹಾಗೂ ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಂಡಿದೆ. 

ರಕ್ಷಣಾ ಸಚಿವಾಲಯದ ಮಾಹಿತಿಯ ಪ್ರಕಾರ  2017-2022 ರ ವರೆಗೆ ಹಾಗೂ 2022-23 ರ ವರೆಗೆ ಒಟ್ಟು 264 ರಕ್ಷಣಾ ಉಪಕರಣಗಳ ಖರೀದಿಗಾಗಿ ಬಂಡವಾಳ ಸ್ವಾಧೀನ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಪೈಕಿ 88 ಒಪ್ಪಂದಗಳು ಒಟ್ಟು ಒಪ್ಪಂದಗಳ ಶೇ.36.26 ರಷ್ಟನ್ನು ಹೊಂದಿದ್ದು ರಷ್ಯಾ, ಅಮೇರಿಕಾ, ಫ್ರಾನ್ಸ್, ಇಸ್ರೇಲ್, ಸ್ಪೇನ್ ಇತರ ದೇಶಗಳ ಮಾರಾಟಗಾರರೊಂದಿಗೆ ನಡೆದಿರುವ ಒಪ್ಪಂದವಾಗಿದೆ ಎಂದು ರಕ್ಷಣಾ ಸಚಿವಾಲಯದ ಎಂಒಎಸ್ ಅಜಯ್ ಭಟ್ ಹೇಳಿದ್ದಾರೆ.

ಹೆಲಿಕಾಫ್ಟರ್ ಗಳು, ಏರ್ ಕ್ರಾಫ್ಟ್ ರಡಾರ್, ರಾಕೇಟ್, ಗನ್, ಅಸಾಲ್ಟ್ ರೈಫಲ್, ಕ್ಷಿಪಣಿ ಹಾಗೂ ಯುದ್ಧಸಾಮಗ್ರಿಗಳು ಪ್ರಮುಖವಾಗಿ ಆಮದಾಗಿರುವ ಉಪಕರಣಗಳಾಗಿವೆ.

ಇದೇ ವೇಳೆ ರಕ್ಷಣಾ ಸ್ವಾಧೀನ ಪ್ರಕ್ರಿಯೆ (ಡಿಎಪಿ 2020) ಆತ್ಮನಿರ್ಭರ್ ಭಾರತ್ ಹಾಗೂ ಮೇಕ್ ಇನ್ ಇಂಡಿಯಾದ ಮೇಲೆ ಗಮನ ಕೇಂದ್ರೀಕರಿಸಿದ್ದು, ದೇಶೀಯವಾಗಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ನೀತಿ ಉಪಕ್ರಮಗಳನ್ನು ಪರಿಚಯಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com