ಜಮ್ಮು-ಕಾಶ್ಮೀರ ಕ್ಷೇತ್ರಗಳ ಮರುವಿನ್ಯಾಸ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಜಮ್ಮು ಮತ್ತು ಕಾಶ್ಮೀರ ಕ್ಷೇತ್ರಗಳ ಮರುವಿನ್ಯಾಸ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕ್ಷೇತ್ರಗಳ ಮರುವಿನ್ಯಾಸ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

2019ರಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳನ್ನು ಮರುವಿನ್ಯಾಸಗೊಳಿಸಲು ರಚಿಸಲಾದ ಡಿಲಿಮಿಟೇಶನ್ ಆಯೋಗವನ್ನು ಅರ್ಜಿಗಳು ಪ್ರಶ್ನಿಸಿದ್ದವು.

ಅರ್ಜಿದಾರರಾದ ಹಾಜಿ ಅಬ್ದುಲ್ ಗನಿ ಖಾನ್ ಮತ್ತು ಶ್ರೀನಗರದ ಮುಹಮ್ಮದ್ ಅಯೂಬ್ ಮಟ್ಟೋ ಅವರು 2026 ರ ಮೊದಲು ಅಂತಹ ಯಾವುದೇ ಕ್ರಮವನ್ನು ಕೈಗೊಳ್ಳಲು ನಿರ್ಬಂಧವಿದೆ ಎಂದು ಮರುವಿನ್ಯಾಸ ಅಥವಾ ಡಿಲಿಮಿಟೇಶನ್'ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 90 ಅಸೆಂಬ್ಲಿ ಮತ್ತು ಐದು ಸಂಸದೀಯ ಕ್ಷೇತ್ರಗಳನ್ನು ಜೆ & ಕೆ ಮರುಸಂಘಟನೆ ಕಾಯಿದೆಯಡಿ ಮರುವಿನ್ಯಾಸಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com