ಭಾರತ ಅಮೇರಿಕಾಗೆ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೇರಿಕಾ ವಿತ್ತ ಸಚಿವೆ
ಭಾರತವನ್ನು ಅಮೇರಿಕಾದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಹೇಳಿರುವ ಅಮೇರಿಕಾ ವಿತ್ತ ಸಚಿವ (ಖಜಾನೆ ಕಾರ್ಯದರ್ಶಿ) ಫ್ರೆಂಡ್ ಶೋರಿಂಗ್ ನ್ನು ಪ್ರಸ್ತಾಪಿಸಿದ್ದಾರೆ.
Published: 25th February 2023 03:59 PM | Last Updated: 25th February 2023 07:32 PM | A+A A-

ಅಮೇರಿಕಾ ವಿತ್ತ ಸಚಿವೆ
ಬೆಂಗಳೂರು: ಭಾರತವನ್ನು ಅಮೇರಿಕಾದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಹೇಳಿರುವ ಅಮೇರಿಕಾ ವಿತ್ತ ಸಚಿವ (ಖಜಾನೆ ಕಾರ್ಯದರ್ಶಿ) ಫ್ರೆಂಡ್ ಶೋರಿಂಗ್ ನ್ನು ಪ್ರಸ್ತಾಪಿಸಿದ್ದಾರೆ.
ಪೂರೈಕೆ ಸರಪಳಿ (ಸಪ್ಲೈ ಚೈನ್) ನ್ನು ಬಲಪಡಿಸುವ ನಿಟ್ಟಿನಲ್ಲಿ ಫ್ರೆಂಡ್ ಶೋರಿಂಗ್ ಸಹಕಾರಿಯಾಗಲಿದೆ. ಅಮೇರಿಕ ಅಧ್ಯಕ್ಷ ಜೋ ಬೈಡನ್ ಸಹ ಭಾರತವನ್ನು ಅವಿಭಾಜ್ಯ ಪಾಲುದಾರ ರಾಷ್ಟ್ರ ಎಂದು ಹೇಳಿದ್ದಾರೆ.
ಅಮೇರಿಕ ಹಗೂ ಭಾರತದ ಟೆಕ್ ಉದ್ಯಮದ ನಾಯಕರು ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಹಾಗೂ ಕೇಂದ್ರ ಬ್ಯಾಂಕ್ ಗೌರ್ನರ್ ಗಳ ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ 'ಬಿಕ್ಕಟ್ಟೇ' ಅಥವಾ 'ಯುದ್ಧವೇ? ಏನನ್ನಬೇಕು! ಜಿ-20 ನಾಯಕರ ಚರ್ಚೆ
2021 ರಲ್ಲಿ ನಮ್ಮ ದ್ವಿಪಕ್ಷೀಯ ವ್ಯಾಪಾರ 150 ಬಿಲಿಯನ್ ಡಾಲರ್ ನಷ್ಟಿತ್ತು. ನಮ್ಮ ಜನರ ನಡುವಿನ ಸಂಬಂಧಗಳು ನಮ್ಮ ದೇಶಗಳ ಸಂಬಂಧದ ನಿಕಟತೆಯನ್ನು ದೃಢೀಕರಿಸುತ್ತವೆ. 200,000 ಭಾರತೀಯರು ಅಮೇರಿಕಾದಲ್ಲಿ ವ್ಯಾಸಂಗ ಅಮೇರಿಕಾ ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಭಾರತೀಯರು ತಮ್ಮ ನಡುವೆ ಸಂವಹನ ನಡೆಸಲು ವಾಟ್ಸ್ ಆಪ್ ನ್ನು ಬಳಕೆ ಮಾಡುತ್ತಿದ್ದು ಹಲವು ಅಮೇರಿಕ ಸಂಸ್ಥೆಗಳು ಕಾರ್ಯನಿರ್ವಹಿಸುವುದಕ್ಕೆ ಇನ್ಫೋಸಿಸ್ ಮೇಲೆ ಅವಲಂಬಿತವಾಗಿದೆ ಎಂದು ಅಮೇರಿಕಾ ವಿತ್ತ ಸಚಿವರು ಹೇಳಿದ್ದಾರೆ.
ಇನ್ಫೋಸಿಸ್ ನ ಅಧ್ಯಕ್ಷ ನಂದನ್ ನಿಲೇಕಣಿ, ಐಬಿಎಂ ಇಂಡಿಯಾದ ಎಂಡಿ ಸಂದೀಪ್ ಪಟೇಲ್, ಇಂಟೆಲ್ ಇಂಡಿಯಾ ಮುಖ್ಯಸ್ಥ ನಿವೃತಿ ರೈ, ಫಾಕ್ಸ್ ಕಾನ್ ಇಂಡಿಯಾ ಮುಖ್ಯಸ್ಥ ಜೋಷ್ ಫೌಲ್ಗರ್ ಮತ್ತು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ಜಿ ಸಹ ಭಾಗವಹಿಸಿದ್ದರು.