ಯಾರ ಬಲವಂತಕ್ಕೂ ಭಾರತ ಜಗ್ಗಲ್ಲ ಎಂಬುದನ್ನು ಇಡೀ ವಿಶ್ವವೇ ನೋಡಿದೆ: ಪಾಕ್-ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದ ಜೈಶಂಕರ್

ಭಾರತ ತನ್ನ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡಲಿದ್ದು, ಯಾರ ಬಲವಂತಕ್ಕೂ ಜಗ್ಗಲ್ಲ ಎಂಬುದನ್ನು ಇಡೀ ವಿಶ್ವವೇ ನೋಡಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬಾನುಾರ ಹೇಳಿದ್ದಾರೆ.
ಜೈಶಂಕರ್
ಜೈಶಂಕರ್

ಚೆನ್ನೈ: ಭಾರತ ತನ್ನ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡಲಿದ್ದು, ಯಾರ ಬಲವಂತಕ್ಕೂ ಜಗ್ಗಲ್ಲ ಎಂಬುದನ್ನು ಇಡೀ ವಿಶ್ವವೇ ನೋಡಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬಾನುಾರ ಹೇಳಿದ್ದಾರೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ತುಗ್ಲಕ್ ಮ್ಯಾಗಜಿನ್‌ನ 53ನೇ ವಾರ್ಷಿಕೋತ್ಸವದ ದಿನವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್ ಅವರು, ಭಯೋತ್ಪಾದನೆ ಹಾಗೂ ಗಡಿ ವಿಚಾರವಾಗಿ ಪಾಕಿಸ್ತಾನ ಹಾಗೂ ಚೀನಾಗೆ ತಕ್ಕ ಸಂದೇಶವನ್ನು ರವಾನಿಸಿದರು.

ಇಂದು ಭಾರತದ ಇಡೀ ಪ್ರಪಂಚಕ್ಕೆ ಗೌರವವಿದೆ. ಭಾರತವು ಯಾರ ಬಲವಂತಕ್ಕೂ ಬಗ್ಗದ ರಾಷ್ಟ್ರವೆಂಬುದನ್ನು ಇಡೀ ವಿಶ್ವವೇ ನೋಡಿದೆ. ಉತ್ತರ ಗಡಿಯಲ್ಲಿ ಚೀನಾ ದೊಡ್ಡ ಪಡೆಗಳನ್ನು ತಂದು ನಮ್ಮ ಒಪ್ಪಂದಗಳನ್ನು ಉಲ್ಲಂಘಿಸುವ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನ ನಡೆಸುತ್ತಿದೆ. ಕೋವಿಡ್ ಹೊರತಾಗಿಯೂ, ಇದು ಮೇ 2020 ರಲ್ಲಿ ನಡೆದಿತ್ತು. ಆದರೆ, ಈ ಪರಿಸ್ಥಿತಿಯನ್ನು ಭಾರತ ದಿಟ್ಟ ಉತ್ತರ ನೀಡುವ ಮೂಲಕ ಎದುರಿಸಿತು.

ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಪಡೆಗಳು ಅತ್ಯಂತ ತೀವ್ರವಾದ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಗಡಿಗಳನ್ನು ರಕ್ಷಿಸುವುದನ್ನು ಮುಂದುವರೆಸುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಸೇನಾಪಡೆಗಳನ್ನು ನಿಯೋಜಿಸಲಾಗಿದೆ, ಅತ್ಯಂತ ತೀವ್ರವಾದ ಭೂಪ್ರದೇಶ ಮತ್ತು ಕಠಿಣ ಹವಾಮಾನದಲ್ಲಿ ನಮ್ಮ ಗಡಿಗಳನ್ನು ನಮ್ಮ ಯೋಧರು ರಕ್ಷಿಸುತ್ತಿದ್ದಾರೆ.

ತವಾಂಗ್ ನಲ್ಲಿ ಚೀನಾಗೆ ನೀಡಿದ ಉತ್ತರದಿಂದ ಇಂದು ಇಡೀ ವಿಶ್ವವೇ ಯಾವುದೇ ಬಲವಂತಕ್ಕೂ ಭಾರತ ಜಗ್ಗುವುದಿಲ್ಲ ಎಂಬುದನ್ನು ನೋಡಿದೆ. ರಾಷ್ಟ್ರದ ಭದ್ರತೆ ಖಚಿತಪಡಿಸಿಕೊಳ್ಳಲು ಭಾರತ ಏನನ್ನೂ ಬೇಕಾದರೂ ಮಾಡುತ್ತದೆ ಎಂಬುದನ್ನು ನೋಡಿದೆ.

"ರಾಷ್ಟ್ರೀಯ ಯೋಗಕ್ಷೇಮವು ಹಲವಾರು ಅಂಶಗಳನ್ನು ಹೊಂದಿವೆ. ಅದರಲ್ಲಿ ರಾಷ್ಟ್ರೀಯ ಭದ್ರತೆಯು ಮೂಲಭೂತ ಅಡಿಪಾಯವಾಗಿದೆ. ಎಲ್ಲಾ ದೇಶಗಳು ಈ ವಿಷಯದಲ್ಲಿ ಸವಾಲು ಎದುರಿಸುತ್ತಿವೆ. ಆದರೆ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ವಿಶೇಷವಾಗಿ ಭಯೋತ್ಪಾದನೆಯಂತಹ ಸಮಸ್ಯೆಗಳಿಂದಾಗಿ ಬಹುಶಃ ನಾವು ಬೇರೆ ದೇಶಗಳಿಗಿಂತ ಹೆಚ್ಚಿನ ಸಮಸ್ಯೆಗಳ ಪಾಲನ್ನು ಹೊಂದಿದ್ದೇವೆ. ಆದಾಗ್ಯೂ, ನಮ್ಮ ದೀರ್ಘಕಾಲಿಕ ಸಹನೆಯು ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸುವ ಅಪಾಯವನ್ನು ಸೃಷ್ಟಿಸಿದೆ. ಅದಕ್ಕಾಗಿಯೇ ಉರಿ ಮತ್ತು ಬಾಲಾಕೋಟ್ ಮೂಲಕ ಹೆಚ್ಚು ಅಗತ್ಯವಿರುವ ಸಂದೇಶವನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.

ಬಳಿಕ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಲಸಿಕೆಗಳನ್ನು ತಯಾರಿಸಿದ ಭಾರತವು, ಇತರೆ ರಾಷ್ಟ್ರಗಳಿಗೆ ಸರಬರಾಜು ಮಾಡಿದ್ದರ ಕುರಿತು ಮಾತನಾಡಿದ ಅವರು, ಭಾರತೀಯರು "ಯಶಸ್ವಿ ಉತ್ಪಾದಕ ಮತ್ತು ಲಸಿಕೆಗಳ ಸಂಶೋಧಕ" ಆಗಿ ಹೊರಹೊಮ್ಮಿರುವುದನ್ನು ಶ್ಲಾಘಿಸಿದರು.

"ಈ ಸಮಯದಲ್ಲಿ, ಭಾರತವು ತನಗಾಗಿ ಮತ್ತು ಜಗತ್ತಿಗೆ ಲಸಿಕೆಗಳನ್ನು ಯಶಸ್ವಿಯಾಗಿ ಉತ್ಪಾದಿಸಿ, ಉತ್ಪಾದಕನಾಗಿ ಅಷ್ಟೇ ಅಲ್ಲದೆ, ಲಸಿಕೆ ಸಂಶೋಧಕನಾಗಿ ಹೊರಹೊಮ್ಮಿತು. ಅದನ್ನು ಹಿಂದೆ ಸರಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಆದರೆ, ಬೇರೆ ವಿಚಾರ. ಆದರೆ, ಕೋವಿಡ್ ಎಂಬ ವೇದಿಕೆಯು ಲಸಿಕೆ ಕಾರ್ಯಾಚರಣೆಯಲ್ಲಿ 2 ಬಿಲಿಯನ್'ಗೂ ಹೆಚ್ಚು ಲಸಿಕೆಗಳನ್ನು ಸರಾಗವಾಗಿ ಕಾರ್ಯಗತಗೊಳಿಸಲು ನಮಗೆ ಅನುವು ಮಾಡಿಕೊಟ್ಟಿತು.

ವಿಶ್ವದಾದ್ಯಂತ 100 ಕ್ಕೂ ಹೆಚ್ಚು ಪಾಲುದಾರರಿಗೆ ಲಸಿಕೆಗಳನ್ನು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ 150 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಔಷಧಿಗಳನ್ನು ಒದಗಿಸುವಲ್ಲಿ ನಮ್ಮ ಒಗ್ಗಟ್ಟು ವ್ಯಕ್ತವಾಗಿದೆ. ಅದೇ ಅವಧಿಯಲ್ಲಿ ಇತರ ಬೆಳವಣಿಗೆಗಳು ಸಮಾನವಾಗಿ ಬಲಗೊಂಡಿವೆ.

ಇಂದು ವಿಶ್ವವು ವಿಶಾಲವಾಗ ಅವಕಾಶಗಳನ್ನು ನೀಡುತ್ತಿದೆ. ಆದರೆ, ಅವುಗಳು ಹೊಸ ಸವಾಲುಗಳು ಹಾಗೂ ಜವಾಬ್ದಾರಿಗಳೊಂದಿಗೆ ಹುದುಗಿ ಹೋಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com